ಅದಾಗಿ ೧೫ ದಿವಸ ಆಗ್ತಾ ಬಂತು..
ಅಲ್ಲಿ ಮುಂಬೈ ನಗರಿ ಕರಾಳ ಹಸ್ತಗಳಲ್ಲಿ ಸಿಲುಕಿ ಹಿಂಸೆ ಅನುಭವಿಸುತ್ತಿತ್ತು.ಆ ದೃಶ್ಯಗಳನ್ನು ನೋಡುತ್ತಿದ್ದಂತೆ, ಆಕ್ರೋಶ ಕುದಿಯತೊಡಗಿತ್ತು.
ಪಾಕಿ ವಿದೇಶಾಂಗ ಮಂತ್ರಿ ಅಲ್ಲಿ ಪಾಕಿಸ್ತಾನದಲ್ಲಿ ಕುಳಿತು, ಮುಂಬೈ ಘಟನೆಗೂ ಪಾಕಿಸ್ತಾನಕ್ಕೂ ಏನೂ ಸಂಬಂಧವಿಲ್ಲ ಎಂದು ಕತೆ ಹೇಳುತ್ತಿದ್ದ. ಸಿಎನ್ಎನ್ನಲ್ಲಿ ಅದನ್ನು ನೋಡುತ್ತಿದ್ದ ನನ್ನಾಕೆಗೆ ಬಂತು ನೋಡಿ ಸಿಟ್ಟು, 'ಈ ಪಾಕಿಸ್ತಾನದವರದು ಬರೀ ಇದೇ ಆಯ್ತು, ಮಾಡೋದೆಲ್ಲಾ ಮಾಡಿ ಈಗ ಏನೂ ಗೊತ್ತಿಲ್ಲಾ ಅಂತಾರೆ. ಏಕೆ ನಂಬಬೇಕು ಅವರು ಹೇಳೋದು' ಅಂತಾ ಎನ್ಡಿಟಿವಿ ಪ್ರಣಬ್ರಾಯ್ ತರನೇ ಕೇಳಿದಳು.
ಹೌದಲ್ವಾ ಅನಿಸ್ತು..
ಸಿಕ್ಕಬಿದ್ದ ಆ ಆತಂಕವಾದಿ ಕರಾಚಿಯವನಂತೆ, ಅಲ್ಲೇ ಪಾಕಿಸ್ತಾನದಲ್ಲಿ ಅವರಿಗೆ ತರಬೇತಿ ಕೊಟ್ಟು ಕಳಿಸಿದರಂತೆ ಅಂತಾ ಪತ್ರಿಕೆಗಳು ಪುಟಗಟ್ಟಲೆ ಬರೀತಾ ಇದ್ದರೆ, ಅಲ್ಲಿ ಪಾಕಿ ಅಧ್ಯಕ್ಷ 'ನಾವು ಅಷ್ಟೇ, ನಿಮ್ಮ ತರನೇ ಆತಂಕವಾದಿಗಳಿಂದ ನರಳುತ್ತಾ ಇದೀವಿ' ಅಂತಾ ಟಿವಿಯಲ್ಲಿ ಹೇಳಿದಾಗ, ಮೊದಲೇ ಕೆಟ್ಟ ತಲೆ ಇನ್ನೂ ಕೆಟ್ಟಾಗಿತ್ತು. ಟಿವಿ ನೋಡ್ತಾ ಇದ್ದ ನನ್ನಾಕೆ ಮುಖ ನೋಡಿದೆ, ಟಿವಿಯಲ್ಲಿದ್ದ ಆ ಅಧ್ಯಕ್ಷನನ್ನು ಗುರಾಯಿಸುತ್ತಿದ್ದಳು.
ಸ್ಪಲ್ಪ ದಿನದಲ್ಲೇ ಮತ್ತೆ ಶುರುವಾಯಿತು ನೋಡಿ ಗೂಬೆ ಕೂರಿಸುವ ಕೆಲಸ. ನೌಕದಳದವರು ಗುಪ್ತಚರ ಇಲಾಖೆ ಮೇಲೆ, ಅವರು ಇವರ ಮೇಲೆ..ನಡದೇ ನಡೀತು. ಎನ್ಎಸಿಜಿ ಕಮೊಂಡೋಗಳು ಬರೋಕೇ ಯಾಕೇ ಅಷ್ಟು ವಿಳಂಬವಾಯ್ತು ಅಂತಾ ಇನ್ನೊಂದು ಸುದ್ದಿ. ಇವುಗಳಿಗೆಲ್ಲಾ ಕಳಸವಿಟ್ಟಂತೆ ಮುಂಬೈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ಬಿಸಿ ಕಾಯಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದು ಆಯ್ತು.
ಹಿಂದಿನ ವಿದ್ವಂಸಕಾರಿ ಘಟನೆಗಳಂತೆ , ಈ ಸಲನೂ ಏನೂ ಪಾಠ ಕಲಿದೇ, ಯಾರಿಗೂ ಪಾಠನೂ ಕಲಿಸದೇ, ಸ್ಪಲ್ಪ ದಿವಸ ಉದ್ವೇಗದಿಂದ ಮಾತಾಡಿ, ಮತ್ತೆ ಎಲ್ಲಾ ಮರೆತುಹೋಗ್ತಾ ಇದೀವಿ ಅನಿಸೋಕೆ ಶುರುವಾಯ್ತು.
ನನ್ನ ಅರ್ಧಾಂಗಿ ಕೇಳಿದಳು 'ಯಾಕೇ ಸೆಪ್ಟಂಬರ್ ೧೧ರ ದಾಳಿಯ ನಂತರ ಅಮೇರಿಕೆಯಲ್ಲಿ ಮತ್ತೆ ದಾಳಿ ಆಗಲಿಲ್ಲ? ನಮ್ಮಲ್ಲಿ ಯಾಕೇ ತಿಂಗಳಿಗೊಂದು ಆಗ್ತಾ ಇದೆ'.
ಪ್ರಶ್ನೆ ಪ್ರಶ್ನೆಯಾಗೇ ಉಳಿದು ಹೋಯ್ತು..
ಇವೆಲ್ಲದರ ಮಧ್ಯೆ ನಿಜಕ್ಕೂ ಮಿಂಚಂತೆ ಬೆಳಗಿದ್ದು, ನಮ್ಮ ಪೋಲಿಸ್, ನಮ್ಮ ಕಮೊಂಡೋಗಳ ನಿಸ್ವಾರ್ಥ ತ್ಯಾಗ, ವೀರ ಹೋರಾಟ. ಒಂದೊಂದು ವೀರೋಚಿತ ಕತೆಯು ನಮ್ಮ ಸೇನೆಯ ಬಗ್ಗೆ, ನಮ್ಮ ಪೋಲಿಸ್ ಬಗ್ಗೆ ಇನ್ನೂ ಹೆಚ್ಚು ಆಭಿಮಾನದ ಕಿಚ್ಚು ಹೊತ್ತಿಸಿತು.
ಇದೇ ಪೋಲಿಸ್ನವರ ಬಗ್ಗೆ ಅಲ್ವಾ, ನಮ್ಮ ಸಿನಿಮಾಗಳಲ್ಲಿ ಲಂಚಕೋರರು-ಕೆಲಸಕ್ಕೆ ಬಾರದವರು ಅಂತಾ ತೋರಿಸಿದ್ದು, ನಾವು ಹೌದು-ಹೌದು ಅಂದಿದ್ದು.ಅದೇ ಖಾಕಿ ಪೋಲಿಸ್ನಲ್ಲಿ ಕೆಲ ದಿಟ್ಟಿಗರು, ಅಲ್ಲಿ ಸಿಎಸ್ಟಿ ನಿಲ್ದಾಣದಲ್ಲಿ ಕೈಯಲ್ಲಿ ಹಳೇ ರೈಫಲ್/ಬಂದೂಕು ಹಿಡಕೊಂಡು, ಆ ಎಕೆ೪೭-ಗ್ರೆನೇಡ್ ವಿರುದ್ಧ ಹೋರಾಡುತ್ತಿದ್ದರು. ಮತ್ತೊಂದು ಕಡೆ ಅಲ್ಲಿ ತಾಜ್ ಹೋಟೆಲ್ನಲ್ಲಿ, ಒಬ್ಬ ಪೋಲಿಸ್ ಆಧಿಕಾರಿ ೬ ಪೇದೆಗಳೊಂದಿಗೆ ಅಲ್ಲಿದ್ದ ಉಗ್ರರೊಂದಿಗೆ, ಕಮಾಂಡೋಗಳು ಬರೋವರೆಗೆ ಹೋರಾಟ ಮಾಡ್ತಾನೇ ಇದ್ದರು..
ಇದೆಲ್ಲದರ ಮಧ್ಯೆ , ಯಾಕೋ ಇಸ್ರೇಲಿ ಗುಪ್ತಚರ ಸಂಸ್ಥೆ 'ಮೊಸದ್' ನೆನಪಾಯ್ತು.
೧೯೭೨ರ ಮ್ಯುನಿಚ್ ಒಲಂಪಿಕ್ನಲ್ಲಿ ೧೧ ಇಸ್ರೇಲಿ ಒಲಂಪಿಯನ್ರನ್ನು ಉಗ್ರರು ನುಗ್ಗಿ ಹತ್ಯೆ ಮಾಡಿದ್ದರು. ಇಸ್ರೇಲ್ ಸರ್ಕಾರ ತನ್ನ ಗುಪ್ತಚರ ಸಂಸ್ಥೆಗೆ ಒಂದಂಶದ ಆದೇಶ ನೀಡಿತು - 'ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು'. ಮೊಸದ್ ಮುಂದಿನ ಹಲವು ವರ್ಷಗಳ ಕಾಲ ಆ ಹಿಂಸೆಗೆ ಕಾರಣರಾದವರನ್ನು ಜಾಲಾಡಿತು, ವಿವಿಧ ತಂತ್ರಗಳಿಂದ ಅವರನ್ನು ಮುಗಿಸಿತು.
ನಮ್ಮಲ್ಲಿ ಆ ತರದ ಒಂದು ಧೃಡ ನಿರ್ಧಾರ ತೆಗೆದುಕೊಳ್ಳುವವರು, ಈ ತರ ನಮ್ಮ ತಂಟೆಗೆ ಬಂದಾಗ, ಅದಕ್ಕೆ ಮರು ಉತ್ತರ ಕೊಡುವವರು ಬೇಕಲ್ವಾ ..
Friday, December 12, 2008
Sunday, August 03, 2008
ಒಂದು ವೈಪರ್ನ ಕತೆ..
ಆ ವ್ಯಕ್ತಿಯ ಹೆಸರು ರಾಬರ್ಟ್ ಬಾಬ್ ಕಿಯಾರ್ನ್.
ಕೆಲವೊಮ್ಮೆ ಯಾವಾಗಲೋ ತಲೆಯಲ್ಲಿ ಮಿಂಚಿನಂತೆ ಸುಳಿದುಹೋಗುವ ಯೋಚನೆಗಳು ಹೇಗೆ ಜೀವನವನ್ನು ಬದಲಾಯಿಸಬಹುದು ಎನ್ನುವುದಕ್ಕೆ ರಾಬರ್ಟ್ ಜೀವನವೇ ಸಾಕ್ಷಿ.
ನೀವು ಕಾರ್ ಡ್ರೈವ್ ಮಾಡುವಾಗ ಅಥವಾ ಬಸ್ ಅಥವಾ ಆಟೋದಲ್ಲಿ ಹೋಗುವಾಗ, ಮಳೆ ಶುರುವಾದಾಗ, ವಾಹನದ ವಿಂಡ್ಶೀಲ್ಡ್ನ ಮೇಲಿನ ನೀರನ್ನು ಒರೆಸಿ ಚಾಲಕರಿಗೆ ರಸ್ತೆ ಕಾಣುವಂತೆ ಮಾಡುವ ಚಿಕ್ಕ ಕೋಲಿನಂತಹದದ್ದನ್ನು ನೋಡಿರಬಹುದು. ಮೊದಲೆಲ್ಲ ಕಾರ್ಗಳಲ್ಲಿ ಇದ್ದ ವೈಪರ್ಗಳು ಸ್ವಯಂಚಾಲಿತವಾಗಿರಲಿಲ್ಲ.
ಈ ರಾಬರ್ಟ್ನ ಜೀವನ ಈ ವೈಪರ್ ಸುತ್ತ ತಿರುಗಿದ್ದೆ ಒಂದು ಕಥನ.
ಅದು ಐವತ್ತರ ದಶಕ. ಆವಾಗೆಲ್ಲ ಮಳೆ ಬರುವಾಗ ಕಾರಿನ ಗಾಜಿನ ಮೇಲೆನ ನೀರು ಒರೆಸಲು ಚಾಲಕರು ಆ ವೈಪರ್ನ್ನು ನೀರು ಹೋಗುವವರೆಗೆ ತಾವೇ ತಿರುಗಿಸಬೇಕಿತ್ತು.
ಆ ದಿನಗಳಲ್ಲಿ ಈ ರಾಬರ್ಟ್ನ ಮದುವೆ ನಡೆಯಿತು. ಮದುವೆ ದಿನದ ಪಾರ್ಟಿಯಲ್ಲಿ, ಆಕಸ್ಮಿಕವಾಗಿ ಚಿಮ್ಮಿದ ಶಾಂಪೇನ್ನ ಮುಚ್ಚಳ ರಾಬರ್ಟ್ನ ಎಡಗಣ್ಣಿಗೆ ಹೊಡೆಯಿತು.ಕಣ್ಣಿಗೆ ಏನಾದರೂ ಬಡಿದಾಗ, ಕಣ್ಣು ರೆಪ್ಪೆ ಪಟಪಟ ಅಂತಾ ಮುಚ್ಚಿ ತೆಗೆಯುವುದು ಮಾಡುತ್ತಿರುತ್ತೆ ಅಲ್ವಾ. ರಾಬರ್ಟ್ಗೆ ಹೊಳೆದಿದ್ದು ,ಕಣ್ಣು ರೆಪ್ಪೆ ಹೇಗೆ ನಿಯಿಮಿತವಾಗಿ ಹೊಡೆದುಕೊಳ್ಳುತ್ತೋ, ಹಾಗೇ ಈ ವೈಪರ್ ನಿಯಮಿತವಾಗಿ ತಿರುಗುವಂತೆ ಮಾಡಿದರೆ ಹೇಗೆ?
ಆದಾಗಿ ಬಹು ವರ್ಷದ ಶ್ರಮದ ನಂತರ ಕೊನೆಗೂ ರಾಬರ್ಟ್ ಹೊಸ ವೈಪರ್ ಸಿದ್ದಮಾಡುತ್ತಾನೆ. ಕಾರ್ ತಯಾರಿಸುವ ಬೃಹತ್ ಕಂಪನಿಗಳೆಲ್ಲಾ ಇನ್ನೂ ಈ ಸಂಶೋದನೆಯಲ್ಲಿ ತೊಡಗಿರುವಾಗ, ರಾಬರ್ಟನ ಕೈಯಲ್ಲಿ ಆ ಹೊಸ ವೈಪರ್. ಇದರಲ್ಲಿ ಚಾಲಕರು ವೈಪರ್ ಬಟನ್ ತಿರುಗಿಸಿದರಾಯ್ತು, ನಿಯಮಿತ ವೇಗದಲ್ಲಿ ವೈಪರ್ ಕಡ್ಡಿ ತಿರುಗಿ ನೀರನ್ನು ಒರೆಸುತ್ತಿರುತ್ತೆ.
ಡಾಕ್ಟರೇಟ್ ಮಾಡಿ ಯುನಿವರ್ಸಿಟಿಯೊಂದರಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದ ರಾಬರ್ಟ್,ಈ ವೈಪರ್ ಸಂಶಧನೆಯ ಪೇಟೆಂಟ್ಗೆ ಅರ್ಜಿ ಸಲ್ಲಿಸುತ್ತಾನೆ. ನಂತರ ತನ್ನ ಸಂಶೋಧನೆಯನ್ನು ತೋರಿಸಲು, ತನ್ನ ಫೋರ್ಡ್ ಕಾರಿಗೆ ವೈಪರ್ನ್ನು ಅಳವಡಿಸಿಕೊಂಡು, ಫೋರ್ಡ್ ಕಂಪೆನಿಯ ಮುಖ್ಯಾಲಯಕ್ಕೆ ಬರುತ್ತಾನೆ. ಆಗಿನ್ನು ಫೋರ್ಡ್ ಇಂಜಿನೀಯರ್ಗಳು-ಅವರ ರಿಸರ್ಚ್ ಲ್ಯಾಬ್ಗಳು ಇಂತಹ ಒಂದು ವೈಪರ್ಗೋಸ್ಕರ ತಿಣುಕುತ್ತಿರುತ್ತವೆ. ರಾಬರ್ಟ್ನ ಸಂಶೋಧನೆ ನೋಡಲು ಅಲ್ಲಿನ ಇಂಜಿನೀಯರ್ಗಳು ಮುಗಿಬೀಳುತ್ತಾರೆ.
ರಾಬರ್ಟ್ನ ತನ್ನ ಸಂಶೋಧನೆ ಫೋರ್ಡ್ನ ವರಿಗೆ ಬೇಕಾಗಿದೆ ಎನ್ನುವ ನಂಬುಗೆ. ಫೋರ್ಡ್ ಕಾರುಗಳಿಗೆ ವೈಪರ್ ತಯಾರಿಸಿಕೊಡುವ ಕಾಂಟ್ರಕ್ಟ್ ತನಗೆ ಸಿಗಲಿದೆಂಬ ವಿಶ್ವಾಸವಿರುತ್ತದೆ. ಆದರೆ ಅದಕ್ಕೆ ವಿರುದ್ದವಾಗಿ ಫೋರ್ಡ್, ರಾಬರ್ಟ್ನ ಕರೆಗಳನ್ನು ನಿರಾಕರಿಸತೊಡಗುತ್ತದೆ.
ಇದಾಗಿ ಕೆಲವು ವರ್ಷಗಳಿಗೆ ರಾಬರ್ಟ್ನ ಪೇಟೆಂಟ್ ಅಂಗೀಕೃತವಾಗುತ್ತದೆ. ಸರಿಸುಮಾರು ಅದೇ ಸಮಯದಲ್ಲಿ ಫೋರ್ಡ್ ಮಾರುಕಟ್ಟೆಗೆ ತನ್ನ ಹೊಸ ಕಾರು ಬಿಡುಗಡೆ ಮಾಡುತ್ತದೆ. ಕಾರಿನ ವಿಶೇಷ - ಹೊಸ ನಮೂನೆಯ ವೈಪರ್ !!
ಆದಾಗಿ ಎಷ್ಟೋ ವರ್ಷಗಳ ನಂತರ ರಾಬರ್ಟ್ಗೆ ಈ ವಿಷಯ ತಿಳಿದಾಗ, ೧೯೭೮ರಲ್ಲಿ ರಾಬರ್ಟ್, ಫೋರ್ಡ್ನ ಮೇಲೆ ತನ್ನ ಪೇಟೆಂಟ್ ಕದ್ದ ಕೇಸ್ ಹಾಕುತ್ತಾನೆ.ಹಾಗೆಯೇ ತನ್ನ ವೈಪರ್ ಪೇಟೆಂಟ್ ಉಪಯೋಗಿಸಿದ ಇತರ ೨೮ ಕಾರು ತಯಾರಿಕ ಕಂಪೆನಿಗಳ ಮೇಲೂ ಕೇಸ್ ಹಾಕುತ್ತಾನೆ.
ಮುಂದಿನ ಸುಮಾರು ೧೦-೧೨ ವರ್ಷ, ಫೋರ್ಡ್ ಕೇಸನಲ್ಲೇ ತನ್ನ ಜೀವನವನ್ನು ಕಳೆಯುತ್ತಾನೆ. ಕೊನೆಗೂ ೧೯೯೦ರಲ್ಲಿ ರಾಬರ್ಟ್ ಕೇಸ್ ಗೆದ್ದಾಗ, ಪೋರ್ಡ್ ರಾಬರ್ಟ್ಗೆ ೧೦ ಮಿಲಿಯನ್ ಡಾಲರ್ ಕೊಡುತ್ತೆ. ಫೋರ್ಡ್ ಕೇಸಿನ ವಿಜಯದ ನಂತರ ರಾಬರ್ಟ್, ಕ್ರೈಸಲರ್ ಎನ್ನುವ ಇನ್ನೊಂದು ಕಾರು ಕಂಪೆನಿಯ ವಿರುದ್ದ ಕೇಸು ನಡೆಸುತ್ತಾನೆ. ಅದರಲ್ಲೂ ಸಹ ೨೦ ಮಿಲಿಯನ್ ಡಾಲರ್ ಸಿಗುತ್ತೆ. ಈ ಕೇಸುಗಳ ಮಧ್ಯೆದಲ್ಲಿ ಉಳಿದ ಕಂಪೆನಿಗಳ ಮೇಲಿನ ಕೇಸುಗಳನ್ನು ಸಂಭಾಳಿಸಲಿಕ್ಕೆ ಆಗದೆ ಆ ಕೇಸುಗಳು ವಜಾವಾಗುತ್ತವೆ.
ಈ ಕಡೆ ಈ ಕೇಸುಗಳ ಓಡಾಟದಿಂದ ರಾಬರ್ಟ್ನ ವೈಯುಕ್ತಿಕ ಜೀವನ ಹದೆಗೆಡುತ್ತದೆ. ಅವನ ಪತ್ನಿ ವಿಚ್ಚೇದನ ತೆಗೆದುಕೊಳ್ಳುತ್ತಾಳೆ. ರಾಬರ್ಟ್ ಕೇಸುಗಳನ್ನು ಗೆದ್ದರೂ, ಬಂದ ದುಡ್ಡಲ್ಲಿ ಹತ್ತು ಪರ್ಸೆಂಟ್ ತನ್ನ ವಿಚ್ಚೇದನಕ್ಕೆ ಕೊಡಬೇಕಾಗುತ್ತದೆ. ಇನ್ನೂ ಹೆಚ್ಚು ಹಣ ತನ್ನ ಕೇಸುಗಳನ್ನು ನೋಡಿಕೊಂಡ ಲಾಯರ್ಗಳ ಪಾಲಾಗುತ್ತದೆ.
ಕೊನೆಗಾಲದಲ್ಲಿ ಇದೆಲ್ಲವುಗಳಿಂದ ದೂರ ಸರಿದು ಯಾವುದೋ ನದಿದಂಡೆ ಮೇಲೆ ಮನೆಮಾಡಿಕೊಂಡು ರಾಬರ್ಟ್ ದಿನಕಳೆಯುತ್ತಾನೆ. ಆದರೆ ಆಗಾಗ ತನ್ನ ಮಕ್ಕಳಿಗೆ ಮತ್ತು ಲಾಯರ್ಗಳಿಗೆ ತನ್ನ ಪೇಟೆಂಟ್ಗಳ ಬಗ್ಗೆ ಮಾತಾಡಲು ಪೋನ್ ಮಾಡುತ್ತಿರುತ್ತಾನೆ. ಇಂತಹ ರಾಬರ್ಟ್ ೨೦೦೫ರಲ್ಲಿ ಕೊನೆಯುಸಿರೆಳೆಯುತ್ತಾನೆ.
ಫೋರ್ಡ್ ಮತ್ತು ಇತರೆ ಶಕ್ತಿಶಾಲಿ ಕಾರ್ಪೋರೆಟ್ಗಳ ವಿರುದ್ಧ ಸಮರ ಸಾರಿ, ಅದರಲ್ಲಿ ಗೆದ್ದ ಈ ಸಂಶೋಧಕ, ತನ್ನ ಜೀವನದಲ್ಲಿ ಆ ಗೆಲುವಿಗಾಗಿ ಸಂದ ಬೆಲೆ ಮಾತ್ರ ಆಪಾರ. ತನ್ನ ಸಂಶೋಧನೆ ಜಗತ್ತಿನ ಪ್ರತಿ ಕಾರಿನಲ್ಲೂ ಇದ್ದರೂ, ಇದು ತನ್ನದೇ ಸಂಶೋಧನೆ ಎನ್ನುವ ಸತ್ಯ ಜಗತ್ತಿಗೆ ಹೇಳಲು ತನ್ನ ಜೀವವನ್ನು ತೇಯ್ದವನ ದುರಂತ ಕತೆ..
ಯಾವಾಗಲೋ ಎಲ್ಲೋ ಓದಿದ್ದ ಈ ವೈಪರ್ ಕತೆ ಮತ್ತೆ ನೆನಪಾಗಿದ್ದು, ಮೊನ್ನೆ ಹೊಸ ಸಿನಿಮಾವೊಂದರ ಟ್ರೈಲರ್ ನೋಡಿದಾಗ. ರಾಬರ್ಟ್ ಕಿಯಾರ್ನ್ನ ಈ ನಿಜ ಜೀವನದ ಕತೆಯನ್ನು ಆಧಾರಿಸಿ ಆಕ್ಟೋಬರ್ನಲ್ಲಿ ಬರುತ್ತಿರುವ ಚಿತ್ರದ ಹೆಸರು ' ಪ್ಲಾಶ್ ಆಫ್ ಜೀನಿಯಸ್'.
ಆ ಚಿತ್ರದ ಟ್ಯಾಗ್ ಲೈನ್ ಬಹುಷಃ ರಾಬರ್ಟ್ನ ಹೋರಾಟ ಜೀವನದ ಒಟ್ಟು ಸಾರ
"Corporations have time, money and power on their side. All Bob Kearns had on his side was the truth".

Labels:
Chrysler,
Corporates,
Ford,
Intermediate Wiper,
Patent,
Power,
Robert Kearnes,
Truth
Monday, April 07, 2008
ಪ್ರಿಯ ಸಖಿಗೆ...
ಮನಸು ಮಾತುಗಳಲ್ಲಿ
ಮುದ ಮೂಡಿಸಿ ಪ್ರೀತಿ
ಸೋಸಿ ಪ್ರಣಯದೋಟದಲ್ಲಿ
ಕೈಹಿಡಿದು ವಿಹರಿಸಿದ
ರತಿಯಂತಾಕೆಯೇ
ಕಳೆದಿದ್ದು ನನ್ನೊಂದಿಗೆ
ತಿಂಗಳುಗಳು ಹತ್ತು
ಸವಿದಿದ್ದು ಬೇವು-ಬೆಲ್ಲವೆರಡೂ
ಹೆಚ್ಚಾಗಿದ್ದು ಬೇವೇ-ಬೆಲ್ಲವೇ?
ಜಗಳ ಹಟಗಳಲ್ಲಿ
ಮಾತು ಮರೆತು ಮೌನ ಬಿರಿದು
ದಿಂಬು ಎಸೆದು ಕೋಪಗೊಂಡು
ಶಾಂತಳಾಗಿ ಮಾತಿಲ್ಲದೆ
ಬಂದು ಅಪ್ಪಿದಾಕೆಯೇ
ನೆನ್ನೆಗಳು ಮಾತು ಮಧುರ
ಅದರಲ್ಲಿ ಬೇವಿನ ಒಗರು
ಇರುವುದು ಸಹಜ
ಆದರೆ ಒಗರಿನ ಜೊತೆ
ಬೆಲ್ಲವ ಮರೆವುದೇ?
ಕತ್ತಲೆ ಕೋಣೆಯಲ್ಲಿ ನನ್ನೆಡೆಗೆ
ಭಯಾನಕ ಆಕೃತಿಗಳು
ಬಾಗಿಲು ಒದ್ದು ಒಳಬಂದಾಗ
ಭಯದಿಂದ ಸಣ್ಣಗೆ ಕಿರುಚಿಕೊಂಡ
ನನ್ನ ಅಪ್ಪಿ ತಲೆ ನೇವರಿಸಿದ ಅಮ್ಮನಂತಾಕೆಯೇ
ಆಟ ತುಂಟಾಟಗಳಲ್ಲಿ
ಕಾಡಿಸಿ ಪೀಡಿಸಿ
ಪ್ರೀತಿಸಿ ಪ್ರೀತಿ ಹಂಚಿಕೊಂಡು
ನವವರ್ಷವ ಕಳೆಯೋಣವೇ
ಪ್ರಿಯಸಖಿಯೇ?
ಬರಲಿರುವ ದಿನಗಳಲ್ಲಿ
ನನ್ನ ಹಾರೈಕೆ ಇಷ್ಟೇ
ಇರಲಿ ನಮ್ಮ ಬಾಳಿನಲ್ಲಿ
ಬೆಲ್ಲದ ಸವಿ ಯಶದ ಸವಿ
ಮರೆಯುವುದ ಬೇಡ ಬೇವಿನ ಕಹಿ
ಮುದ ಮೂಡಿಸಿ ಪ್ರೀತಿ
ಸೋಸಿ ಪ್ರಣಯದೋಟದಲ್ಲಿ
ಕೈಹಿಡಿದು ವಿಹರಿಸಿದ
ರತಿಯಂತಾಕೆಯೇ
ಕಳೆದಿದ್ದು ನನ್ನೊಂದಿಗೆ
ತಿಂಗಳುಗಳು ಹತ್ತು
ಸವಿದಿದ್ದು ಬೇವು-ಬೆಲ್ಲವೆರಡೂ
ಹೆಚ್ಚಾಗಿದ್ದು ಬೇವೇ-ಬೆಲ್ಲವೇ?
ಜಗಳ ಹಟಗಳಲ್ಲಿ
ಮಾತು ಮರೆತು ಮೌನ ಬಿರಿದು
ದಿಂಬು ಎಸೆದು ಕೋಪಗೊಂಡು
ಶಾಂತಳಾಗಿ ಮಾತಿಲ್ಲದೆ
ಬಂದು ಅಪ್ಪಿದಾಕೆಯೇ
ನೆನ್ನೆಗಳು ಮಾತು ಮಧುರ
ಅದರಲ್ಲಿ ಬೇವಿನ ಒಗರು
ಇರುವುದು ಸಹಜ
ಆದರೆ ಒಗರಿನ ಜೊತೆ
ಬೆಲ್ಲವ ಮರೆವುದೇ?
ಕತ್ತಲೆ ಕೋಣೆಯಲ್ಲಿ ನನ್ನೆಡೆಗೆ
ಭಯಾನಕ ಆಕೃತಿಗಳು
ಬಾಗಿಲು ಒದ್ದು ಒಳಬಂದಾಗ
ಭಯದಿಂದ ಸಣ್ಣಗೆ ಕಿರುಚಿಕೊಂಡ
ನನ್ನ ಅಪ್ಪಿ ತಲೆ ನೇವರಿಸಿದ ಅಮ್ಮನಂತಾಕೆಯೇ
ಆಟ ತುಂಟಾಟಗಳಲ್ಲಿ
ಕಾಡಿಸಿ ಪೀಡಿಸಿ
ಪ್ರೀತಿಸಿ ಪ್ರೀತಿ ಹಂಚಿಕೊಂಡು
ನವವರ್ಷವ ಕಳೆಯೋಣವೇ
ಪ್ರಿಯಸಖಿಯೇ?
ಬರಲಿರುವ ದಿನಗಳಲ್ಲಿ
ನನ್ನ ಹಾರೈಕೆ ಇಷ್ಟೇ
ಇರಲಿ ನಮ್ಮ ಬಾಳಿನಲ್ಲಿ
ಬೆಲ್ಲದ ಸವಿ ಯಶದ ಸವಿ
ಮರೆಯುವುದ ಬೇಡ ಬೇವಿನ ಕಹಿ
Thursday, February 21, 2008
ನಾಳೆಗಳ ಭರವಸೆಯಲ್ಲಿ...
ಗಾಢ ಅಂಧಕಾರದಲ್ಲಿನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ
ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ
ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ
ಯಾಕೇ ಗೆಳತಿ ಈ ಹತಾಶೆ
ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ
ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ
ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ
ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ
ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ
ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ
ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ
ಯಾಕೇ ಗೆಳತಿ ಈ ಹತಾಶೆ
ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ
ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ
ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ
ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ
ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ
Tuesday, January 29, 2008
ಮಾಯನಗರಿಯ ಸೆರಗಿನಲ್ಲಿ...
ಕಣ್ಣು ಕೊರೈಸುವ ಬಣ್ಣದ ಲೈಟ್ಗಳು
ಜಗಮಗಿಸುವ ಹೋಟೆಲ್-ಕ್ಯಾಸಿನೋಗಳು
ಇಜೀಪ್ಟಿಯನ್, ರೋಮನ್,ಫ್ರೆಂಚ್
ಒಂದೊಂದು ಕಟ್ಟಡವು ಒಂದೊಂದು ವಾಸ್ತುಶೈಲಿ
ಆ ಮಾಯನಗರಿಯ ಮುಖ್ಯರಸ್ತೆಯಲ್ಲಿ
ಓಡಾಡುವುದೇ ಒಂದು ಸೊಬಗು
ಎಲ್ಲಿಂದೆಲ್ಲಿಂದಲೋ ಬಂದ ಪ್ರವಾಸಿಗರು
ವಿಸ್ಮಯ ತುಂಬಿದ ಕಣ್ಣುಗಳು
ಅಲ್ಲೆಲ್ಲೋ ಆಕಾಶದೆತ್ತರಕ್ಕೆ ಚಿಮ್ಮಿ
ಮೋಹಕ ನೃತ್ಯ ಮಾಡುತ್ತಿರುವ ಸಂಗೀತ ಕಾರಂಜಿ
ಅದರ ಎದುರಿಗೆ ಪ್ಯಾರಿಸ್ನ ಒಂದು ತುಂಡು
ಇಲ್ಲಿ ತೇಲಿಬಂದಿದೆಯೇ ಎಂಬಂತಿರುವ ಚಿಕ್ಕ ಐಫಿಲ್
ಹೋಟೆಲ್ಗಳ ಕ್ಯಾಸಿನೋದಲ್ಲಿನ
ಜೂಜು ಯಂತ್ರಗಳ ಸದ್ದು
ಅದಕ್ಕೆ ಹಿಮ್ಮೇಳವಾಗಿ ಕಾಂಚಣದ
ಜಣಜಣದ ಸದ್ದು
ಕ್ಯಾಸಿನೋದ ಟೇಬಲ್ಗಳ ಮುಂದೆ
ದುಡ್ಡು ಪಣಕ್ಕಿಟ್ಟು ಕುಳಿತ ಪಂಟರ್ಗಳು
ಅವರಿಗೆಲ್ಲಾ ಮದ್ಯ ನೀಡುತ್ತಾ ಎಳಲಾಗದಂತೆ ಮಾಡುವ
ಆ ತುಂಡು ಲಂಗದ ಕ್ಯಾಸಿನೋದ ಹುಡುಗಿಯರು
ಜೂಜು ಗೆದ್ದವರ ಸಂಭ್ರಮದ ಕೇಕೆ
ಸೋತವರ ಹತಾಶೆ
ಇಬ್ಬರದು ಇನ್ನೊಮ್ಮೆ ಅದೃಷ್ಟ ಹುಡುಕುವ
ಹಣ ಗೆಲ್ಲುವ ಆಸೆ
ಇತ್ತ ನಡುಬೀದಿಯಲ್ಲಿ ಕಾಮವನ್ನು
ಸರಕಿನಂತೆ ಮಾರುತ್ತಿರುವ ಜನ
ಡಾಲರ್ ಯಾರನ್ನು ಯಾಕೇ ಯಾವ ಯಾವ
ದಂಧೆಗೆ ಇಳಿಸುತ್ತೋ ಯಾರಬಲ್ಲರು
ರಸ್ತೆಯಲ್ಲಿ ಚೆಲ್ಲಿದ ಬೆತ್ತಲೆ
ಕಾರ್ಡ್ಗಳನ್ನು ನೋಡುತ್ತಲ್ಲೇ
ಬೇರೆಡೆ ಮುಖ ತಿರುಗಿಸಿ ನಡೆವ ಸಭ್ಯರು
ಕುತೂಹಲದಿಂದ ಅದನ್ನೇ ನೋಡುವ ಪಡ್ಡೆಗಳು
ಮಧ್ಯ ರಾತ್ರಿ ಆಗಿ ಕತ್ತಲೆಗೆ ವಯಸ್ಸಾದರೂ
ಇನ್ನೂ ಜಗಮಗಿಸುತ್ತಿರುವ ಬೀದಿಗಳು
ಜಣಜಣಿಸುತ್ತಿರುವ ಕ್ಯಾಸಿನೋಗಳು
ಹರಿಯುತ್ತಲೇ ಇರುವ ಮಧ್ಯ ದ್ರವಗಳು
ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯನಗರಿ !

Subscribe to:
Posts (Atom)