Friday, June 16, 2006

ಆಹಾ ! ಪಾನಿಪುರಿ !!



ಸುಮ್ಮನೆ ಕೆಲಸ ಮಾಡುತ್ತ ಕುಂತಾಗ ಎಲ್ಲಿಂದ ಬಂತೋ ಗೊತ್ತಿಲ್ಲ..ಅದರ ನೆನಪು !

ಬಂದು ಸುಮ್ಮನೆ ಹೋದರೆ ಚೆನ್ನಾರ್ಗಿತಿತ್ತು.ಆದರೆ ಪಾಪಿ ಅಮೇರಿಕಾಕ್ಕೆ ಹೋದರೂ ಪಾನಿಪುರಿ ನೆನಪು ತಪ್ಪಲಿಲ್ಲವಂತೆ !! ಅದರ ರುಚಿನೆನಪಿನಲ್ಲಿ ಪಟ್ಟ ಹಿಂಸೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...

ಪಾನಿಪುರಿ ಅಂದ ಕೂಡಲೇ ಏನು ನೆನಪಿಗೆ ಬಂತು ರೀ?
ಸಣ್ಣ ಸಣ್ಣ ಪುರಿ,ಬಟಾಣಿಯಿಂದ ಕಟ್ಟಿದ ದುಂಡು ಒಡ್ಡು, ಅದರಲ್ಲಿ ಯಾವಾಗಲೂ ಹೊಗೆಯಾಡುತ್ತಿರುವ ಬಟಾಣಿ,'ಪಾನಿ' ಅಂತ ಕರೆಯಲ್ಪಡುವ ಆ ವಿಶಿಷ್ಟ ಮಸಾಲನೀರು ಹಾಗೂ ಆ ಪಾನಿಪುರಿ ತಳ್ಳುಗಾಡಿಗಳು..

ನನಗೆ ಅನಿಸಿದ ಹಾಗೆ ಪಾನಿಪುರಿದು ಬಹುಷಃ ರಾಜಸ್ತಾನಿ ಮೂಲ.ನಾನು ಚಿಕ್ಕವನಿದ್ದಾಗ ತಿಂದದ್ದು ಎಲ್ಲ ಈ ರಾಜಸ್ತಾನಿ ಪಾನಿಪುರಿ ಗಾಡಿಗಳಲ್ಲೆ.ಅದಕ್ಕೆನಾದರೂ ಅದು ರಾಜಸ್ತಾನಿ ಅಂದುಕೊಂಡಿರಬಹುದು.ಅದು ಎಲ್ಲಿದೇ ಇರಲಿ, ಎಷ್ಟು ಬೇಗ ಪ್ರಸಿದ್ದ ಆಯಿತು ಅಲ್ವ? ನಮ್ಮೂರಲ್ಲಿ ಮೊದಲಿದದ್ದು ೪-೫ ಪಾನಿಪುರಿ ಗಾಡಿಗಳು.ನೋಡು ನೋಡುಷ್ಟರಲ್ಲಿ ಪಾನಿಪುರಿ ಗಾಡಿಗಳು ಬೀದಿಗೊಂದರಂತೆ ಅದವು. ಸಂಜೆ ಗೆಳಯರ ಗುಂಪಿನಲ್ಲಿ ತಿರುಗಾಡಿ ಪಾನಿಪುರಿ ತಿಂದೆ ಮುಂದಿನ ಕೆಲಸ ಸಾಗುತಿತ್ತು. ಆದರೆ ಎಷ್ಟು ದಿನ ಇರುತ್ತೆ ಆ ಊರಿನ ಪಾನಿಪುರಿ ನಂಟು?

ಅಲ್ಲಿಂದ ನೆಗದದ್ದು ಬೆಂಗಳೂರೆಂಬ ನಗರಿಗೆ.ಮೊದಮೊದಲು ಕೆಲವೊಂದು ರಾತ್ರಿಗಳಿಗೆ ಪಾನಿಪುರಿ ಒಂದೇ ತಿಂದು ಜೀವಿಸಿದ್ದೂ ಆಯಿತು.ನಂತರ ಐಟಿಪಿಎಲ್ ಎಂಬ ಚಮಕ್‍ನಲ್ಲಿದ್ದ ೩ ವರ್ಷ ಅಲ್ಲಿದ್ದ ಇದ್ದಬದ್ದ ಪಾನಿಪುರಿ ಸೇವನೆ ಮಾಡಿದ್ದಾಯಿತು.ರುಚಿ ಬಗ್ಗೆ ಕೇಳೋಕ್ಕೆ ಹೋಗಬೇಡಿ.ಪಾನಿಪುರಿ ಸೇವನೆಗೆ ಜೊತೆ ಚೆನ್ನಾಗಿತ್ತು.ಅಷ್ಟು ಗೊತ್ತಾಗಲಿಲ್ಲ! ಅವಗಾವಗ ಮೇಯೋಹಾಲ್ ಹತ್ತಿರ ಹಾಗು ಸಿಎಂಹೆಚ್ ರೋಡ್‍ನಲ್ಲಿ ಸ್ವಾಹ ಆಗುತಿತ್ತು.

ಅನೇಕ ಹೋಟೆಲ್-ದರ್ಶಿನಿಗಳಲ್ಲಿ ನಾವೆಲ್ಲ ಪಾನಿಪುರಿ ತಿಂದಿರಬಹುದು, ಆದರೆ ತಳ್ಳುಗಾಡಿಯ ಪಾನಿಪುರಿಯ ರುಚಿಯ ಮುಂದೆ ಎಲ್ಲವೂ ಶೂನ್ಯ!

ಇದೇನು..ಆವಾಗಿಂದ ಪಾನಿಪುರಿ ಒಂದೇ ಆಯ್ತು, ಉಳಿದವು ಎಲ್ಲಿ ಅಂತೀರಾ..
ಪಾನಿಪುರಿ ಜೊತೆ ಸೇವ್‍ಪುರಿ,ಮಸಾಲಪುರಿ,ಬೇಲ್‍ಪುರಿ,ದಾಹಿಪುರಿಗಳ ಬಗ್ಗೆ ಹೇಳದಿದ್ದರೆ ಹೇಗೆ..ಒಂದೊಂದಕ್ಕೂ ಒಂದೊಂದು ವಿಶಿಷ್ಟ ರುಚಿ.ಅವುಗಳನ್ನು ಮಾಡೋದ ನೋಡೋದೇ ಚೆನ್ನಾ ! ಪುರಿಯನ್ನು ಮುರಿದು, ಅದರ ಮೇಲೆ ಆ ಬಟಾಣಿ ಮಿಶ್ರಣ ಹರಡಿ,ನಂತರ ಸೇವ್ ಅಥವಾ ಮೊಸರನ್ನೋ ಹಾಕಿ, ಉಪ್ಪು-ಮಸಾಲೆ ಉದುರಿಸುತ್ತಿದ್ದರೆ ..ಇಲ್ಲದಿರುವ ಎಲ್ಲಾ ಹಸಿವುಗಳು ಒಮ್ಮೆಗೆ ಪ್ರತ್ಯಕ್ಷ. ಬಾಯಿಯಲ್ಲಿ 'ಗಂಗೇಚಾ ಯಮೂನಾ' !!ಇನ್ನು ಬೇಲ್‍ಪುರಿಯಾದರೆ , ನೂರೆಂಟು ಮಸಾಲೆ,ಟಮೋಟ,ಮಂಡಕ್ಕಿ ಒಂದು ಪಾತ್ರೆಯಲ್ಲಿ ಹಾಕಿ ಆವನ್ನು ಸೌಟಿನಲ್ಲಿ ಕಲೆಸುತ್ತಿದ್ದರೆ..

ಈ ಎಲ್ಲ ಪುರಿಗಳನ್ನು ತಿಂದ ಮೇಲೆ ಪ್ರತ್ಯೇಕವಾಗಿ 'ಪಾನಿ' ಹಾಕಿಸಿಕೊಂಡು ಕುಡಿಯದಿದ್ದರೆ ಹೇಗೆ ?

ಇಲ್ಲಿಗೆ ಬಂದ ಮೇಲೆ ಮೊದಲ ಸಲ 'ಇಂಡಿಯನ್ ಶ್ಯಾಪ್' ನಲ್ಲಿ ಪಾನಿಪುರಿ ನೋಡಿದ್ದೆ , ಯಾವತ್ತು ಅದನ್ನು ನೋಡೇ ಇಲ್ಲ ಅನ್ನೋರ ತರ ಅದನ್ನು ನೋಡಿ, ೨ ಡಾಲರ್ ಕೊಟ್ಟು ತಗೊಂಡು ತಿಂದದ್ದಾಯಿತು.ಬೇಡ ಬೇಡವೆಂದರೂ ಇಲ್ಲಿನ ರುಚಿಯನ್ನು ಅಲ್ಲಿಗೆ ಹೋಲಿಸಿ ಕಷ್ಟಪಟ್ಟಿದ್ದೂ ಆಯಿತು ! ಸರಿ, ಮಾಡೋದೇನು ಅಂತ 'ಪಾಲಿಗೆ ಬಂದದ್ದು ಪಾನಿಪುರಿ' ಅಂತ ಸ್ವೀಕರಿಸಿದ್ದಾಯಿತು!!!

ಇಂದು ಇಲ್ಲಿ ಪಾನಿಪುರಿ ,ನಾಳೆ ಇನ್ನೇಲ್ಲೋ....

'ಪಾನಿಪುರಿ ಪುರಾಣ'ವನ್ನು ಈ ಒಂದು ಮಸಾಲಭರಿತ ಪದ್ಯದಿಂದ ಮುಗಿಸುತ್ತಿದ್ದೇನೆ.

ಪಾನಿಪುರಿ ಮಾಡೋನು ಬಟಾಣಿ,ಇರುಳ್ಳಿ,ಪಾನಿ ತುಂಬಿಸಿ,
ಪುರಿಯನ್ನು ಒಂದೊಂದೇ ಕೊಡುತ್ತಾ ಇದ್ದರೆ,
ಒಂದೇ ಗುಕ್ಕಿನಲ್ಲಿ ಅದನ್ನು ಬಾಯಿ ತುಂಬಾ ತುಂಬಿಸಿ,
ಹಾಗೆಯೇ ಕರಗಿಸಿ ಮೆಲ್ಲುತ್ತಿದ್ದರೆ ಸ್ವರ್ಗಕ್ಕೆ ಒಂದು ಪ್ಲೇಟ್ ಕಳುಹಿಸೆಂದ ಪಾನಿಪುರಿ ತಜ್ಞ

ವಿ.ಸೂ:ಇದೆಲ್ಲ ಓದಿದ ಮೇಲೆ ನೀವು ಪಾನಿಪುರಿ ಹುಡುಕಿಕೊಂಡು ಹೊರಟರೆ ನಾನು ಜವಾಬ್ದಾರನಲ್ಲ !!!

28 comments:

Anonymous said...

yaakree hoTTe urstiraa ee tiMDinella torsi! :(

maavinakaayi citra haakidaagale hELuva aMta tiLide, hogli biDu aMta sumnaadre heega maDodu?!... :D

Shiv said...

ಸ್ವರದ ಹಿಂದಿನವರೇ,
ಅಯ್ಯೋ ನಾನಲ್ಲ ಹೊಟ್ಟ ಉರಿಸಿದ್ದು..
ಅದು ಬಹುಷಃ ಪಾನಿಪುರಿಯಲ್ಲಿ ಜಾಸ್ತಿ ಖಾರ-ಮಸಾಲ ಹಾಕಿದ್ದರು ಅನಿಸುತ್ತೆ :)

ಏನು ಮಾಡೋದು ಹೇಳಿ..ನನ್ನ ಕೈಗೆ ಯಾವ ವಿಡಿಯೋ ಕ್ಲಿಪ್ ಸಿಗಲಿಲ್ಲ.ಅದಕ್ಕೆ ಅವುಗಳ ಚಿತ್ರ ಮಾತ್ರಕ್ಕೇ ಸಮಾಧಾನ ಪಟ್ಟಕೊಳ್ಳತ್ತಿದ್ದಿನಿ :))

ಹೇಳಿ, ನಿಮಗೆ ಯಾವುದು ಇಷ್ಟ ಅಂತಾ..ಪಾನಿಪುರಿ,ಬೇಲ್‍ಪುರಿ,ಮಸಾಲಪುರಿ,ಸೇವ್‍ಪುರಿ..ಸೀದಾ ನಿಮ್ಮ ವೆಲ್ಲಿಂಗ್‍ಟನ್‍ಗೆ ಬರುತ್ತೆ !

Sree said...

ha ha! chennaagide paanipuri puraaNa!:)) sadya naan nenne raatri taanE nann college gang jote malleshwarakk hOgi road tudiyallirO gaaDiyalli manass truptiyaagO haage paani puri tindubandideeni!:D eega nimge hoTTe uri aagtirbEkalla shiv?;)

ತಲೆಹರಟೆ said...

ಶಿವ್,
ಭಯ ಆಗುತ್ತಿದೆ! ಪಾನಿಪುರಿಯಲ್ಲಿ ಏನಿದೆ ಭಯ ತರಿಸುವಂತಹದು ಎಂಬ ಅನುಮಾನ ಅಲ್ವ ನಿಮಗೆ? ಏನಿಲ್ಲ, globalisation,libaralisation,standardization ಈ ರಾಕ್ಷಸರು ಎಲ್ಲಿ ಈ ನಮ್ಮ ಪಾನಿಪುರಿ ಗಾಡಿಗಳನ್ನು ನುಂಗಿ ಹಾಕುತ್ತವೋ ಎಂಬ ಸಣ್ಣ ಹೆದರಿಕೆ.
ಅಂದ ಹಾಗೆ ನಿಮಗೆ ಹೊಟ್ಟೆ ಉರಿಸುವ ವಿಷಯ: ವಾರಕ್ಕೆ ಒಮ್ಮೆಯಾದರು ಪಾನಿಪುರಿ ಸವಿಯನ್ನು ಸವಿಯುತ್ತಿದ್ದೇನೆ. ನಿಮ್ಮ ಹಾಗೆ ಹುಡುಕಿಕೊಂಡು ಹೋಗುವ ಪ್ರಮೇಯ ನಮಗಿಲ್ಲ.ಇನ್ನು ಮುಂದೆ ಪಾನಿಪುರಿ ಸ್ವಾಹ ಮಾಡುತ್ತಿರುವಾಗ ನಿಮ್ಮ ನೆನಪಾಗುತ್ತದೆ, ಅಯ್ಯೋ ಪಾಪ ಅನ್ನಿಸುತ್ತೆ.

bhadra said...

೫ ರೂಪಾಯಿ ಪಾನಿಪುರಿಗೆ ಎರಡು ಡಾಲರಾ? ನಾನಂತೂ ಪಾನಿಪುರಿ ತಿಂದಿಲ್ಲ. ಪಾನಿ ಕುಡಿದಿಲ್ಲ. ಅದೇನೋ ಹಸುರು ಬಣ್ಣದ ನೀರು ಅದೇನದು.

ಹೋಗ್ಲಿ ಬಿಡಿ, ನೀವಾದ್ರೂ ಎಂಜಾಯ್ ಮಾಡ್ತಿದ್ದೀರಲ್ಲ. ನಾನು ಅದರ ಬಗ್ಗೆ ಏನೇನೋೆ ಹೇಳ್ತೀನೀಂತ ಮನೆಯಲ್ಲಿ ನಾನಿಲ್ದೇ ಇರೋವಾಗ್ಲೇ ಪಾನಿ ಪುರಿ ತಿಂತಾರೆ.

ಉತ್ತರ ಭಾರತೀಯರು ಪಾನಿಪುರಿಯನ್ನು ಗೋಲ್‍ಗಪ್ಪ ಎಂದು ಕರೆಯುತ್ತಾರೆ. ಮುಂಬಯಿಯ ಚೌಪಾಟಿ ಇದಕ್ಕೆ ಪ್ರಸಿದ್ಧ.

Shiv said...

ಶ್ರೀ,
ಮನಸ್ಸು ತೃಪ್ತಿಯಾಗುವರಗೆ ತಿಂದು ಬಂದರಾ..ಹೆಂಗಾದರೂ ಮನಸ್ಸು ಬಂತುರೀ ನಿಮಗೆ ನನ್ನ ಬಿಟ್ಟು ಹೀಗಿ ತಿನ್ನೋಕ್ಕೆ...ಛೇ ಛೇ

ತಲೆಹರಟೆ,
ನಿಮ್ಮ ಭಯಕ್ಕೆ ಕಾರಣಗಳಿವೆ..ಆದರೆ ಎಲ್ಲಿಯವರಿಗೆ ನಮ್ಮ-ನಿಮ್ಮಂತವರು ಪಾನಿಪುರಿ ಗಾಡಿಗಳಿಗೆ ಭೇಟಿಕೊಡುತ್ತಾ ಇರುತ್ತಿವೋ ಅಲ್ಲಿಯವರಿಗೆ ಯಾವ ರಾಕ್ಷಸರು ಏನು ಮಾಡೋಕೆ ಆಗಲ್ಲ..

ನೀವು ಕೂಡ ಹೊಟ್ಟೆ ಉರಿಸುವುದಾ...et tu talaharate :x

ತವಿಶ್ರೀ,
ಹೌದು..ನಾನು ಚೌಪಾಟಿ ಬಗ್ಗೆ ಕೇಳಿದ್ದೀನಿ..ಅಲ್ಲಿ ತುಂಬಾ ತಳ್ಳುಗಾಡಿಗಳು ಇರುತ್ತವೆ ಅಂತೆ..ನೀವು ಹೋಗೋದು ಉಂಟಾ ಅಲ್ಲಿಗೆ?

Somashekhar said...

nimma pani puri kathe keli,
nanna bayaga neera badda bithu ree.

bhadra said...

ನಾವು ಚೌಪಾಟಿಗೆ ಪಾನಿಪುರಿ ತಿನ್ನಲು ಹೋಗೋಲ್ಲ. ಮನೆಯಲ್ಲೇ ಮಾಡುತ್ತಾರೆ. ಹೊರಗಡೆ ಪಾನಿಪುರಿಗೆ ಬಹಳ ಖಾರ ಹಾಕುವರು. ಪಕ್ಕದಲ್ಲೇ ನೀರನ್ನು ಮಾರುವವರು ಇದ್ದು, ಹೆಚ್ಚಿನ ದುಡ್ಡು ಕೇಳ್ತಾರೆ. ಆದರೂ ಚೌಪಾಟಿ ಮತ್ತು ಜುಹುಗೆ ಹೋಗೋ ಜನಗಳಿಗೆ ಪಾನಿಪುರಿ, ಐಸ್‍ಕ್ರೀಮ್ ತಿನ್ನುವ ಹುಚ್ಚು.
ನನ್ನ ಪುಣ್ಯ ನಮ್ಮ ಮನೆಯವರಿಗೆ ಅಲ್ಲಿ ರುಚಿಸಿಲ್ಲ.

ರೀ ಎಕ್ಸ್‍ಪ್ರೆಸ್ ಗಾಡಿಯವರೇ, ನಿಮಗ ಬಾಯಾಗ ನೀರು ಯಾಕ ಬಂತ್ರೀಯಪ್ಪಾ? ಪಾನಿ ಪುರಿ ತಿನ್ನಕ್ಕ ಸಿಕ್ಲಿಲ್ಲಾಂತ್ಲೋ ಅತ್ವಾ ಖಾರ ನೆತ್ತೀಗ್ ಹತ್ತೀತೋ? ನೀವು ಧಾರವಾಡದ್ ಮಂದಿ ಚಲೋ ಎಂಜಾಯ್ ಮಾಡ್ತೀರಪಾ

Shiv said...

ಸೋಮಶೇಖರ್,
ಅಲ್ರೀ ನಿಮ್ಮ ಮರೀನಾ ಬೀಚ್‍ನಲ್ಲಿ ಏನು ಕಡಿಮೆ ಇವೆ ಪಾನಿಪುರಿ ಗಾಡಿಗಳು..ಮನಸ್ಸು ಬಂದಾಗ ಓಡಿ ಹೋಗುಬಹುದು ತಿನ್ನೋಕೆ..ನನ್ನ ತರ ಹುಡಿಕೊಂಡು ಹೋಗಬೇಕು ಅಂತಾ ಇಲ್ಲ :)

ತವಿಶ್ರೀ,
ನಿಮ್ಮ ಮನೆಯಲ್ಲೇ ತಮ್ಮ ಪಾನಿಪುರಿ ಸೇವನೆ ಆಗುತ್ತಾ ?
ಹೌದರೀಪಾ, ನಮ್ಮ ಎಕ್ಸಪ್ರೆಸ್ ಗಾಡಿ ಅವರು ಲೇಟೆಷ್ಟ್ ನ್ಯೂಸ್ ಪ್ರಕಾರ ಪಾನಿಪುರಿ ನಿನ್ನೆ ಪಾನಿಪುರಿ ತಿನ್ನೋಕೆ ಹೋಗಿದ್ದರಂತೆ !

bhadra said...

ಒಮ್ಮೊಮ್ಮೆ ಮನೆಯಲ್ಲಿ ಪಾನಿಪುರಿ (ನನಗೋಸ್ಕರ) ಮಾಡ್ತಾರೆ. ಮನೆಯವರು ಆಗಾಗ ಮನೆಯ ಹತ್ತಿರ ಇರುವ ಕಾಂಪ್ಲೆಕ್ಸ್ ಅಂಗಡಿಯಲ್ಲಿ ತಿನ್ತಾರೆ.

Anveshi said...

ಶಿವ್ ಅವರೆ,
ಅಂತೂ ಎಲ್ಲರಿಗೂ ಪಾನಿ ಕುಡಿಸಿದ್ರಿ. ಮತ್ತೆ ಕೆಲವರು ಇದನ್ನೋದಿ ತಮ್ಮ ಬಾಯೊಳಗೆ ಉತ್ಪತ್ತಿಯಾದ ಪಾನಿ ನುಂಗಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದ್ರಿ.

ನಾನಂತೂ ಸೀದಾ ಮುಂಬಯಿಗೆ ಹಾರಿ ಬಿಡ್ತೀನಿ. ಅಲ್ಲಿ ಮಾವಿನ ರಸಾಯನ ಕೊಡುವವರು ಮನೆಯಲ್ಲೇ ಪಾನಿ ಕೊಡ್ತಾರಂತೆ.

Vishwanath said...

ಪಾನಿಪೂರಿ, ಸೇವ್ ಪೂರಿ, ದಹಿ ಪೂರಿ... ಆಹಾ ನೆನಪಿಸಿಕೊಂಡರೇ ಬಾಯಲ್ಲಿ ನೀರು.

ಬೆಂಗಳೂರು ಬಿಟ್ಟು ಚೆನ್ನೈಗೆ ಬಂದ ಮೇಲೆ ಇದನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿನ ಜನಕ್ಕೆ "ಒರು ಪ್ಲೇಟ್ ಪೊಂಗಲ್", "ಸೂಡ ಕಾಪಿ" (ಒಂದು ಪ್ಲೇಟ್ ಪೊಂಗಲ್, ಬಿಸಿ ಕಾಫಿ) ಬಿಟ್ಟರೆ ಬೇರೆ ತಿಂಡಿಯೇ ಗೊತ್ತಿಲ್ಲ.


ಪೊರಿ ಪೊಂಗಲ್ ಏನೇ ಇದ್ದರೂ, ನಮ್ಮ ಧಾರ್ವಾಡದ್ ರೊಟ್ಟಿ ಮುಂದ ಯಾವ್ದೂ ಇಲ್ ಬಿಡ್ರೀsss!

bhadra said...

ವಿಶ್ವನಾಥರೇ ಜೋಳದ ರೊಟ್ಟಿ ಗುರೆಳ್ಳು ಚಟ್ಣಿ - ಖಾನಾವಳಿಯಲ್ಲಿ ತಿನ್ನೋದ್ರಲ್ಲಿ ಇರೋ ಮಜ, ತಂಗಳ್ ಪೊಂಗಲ್, ಸೂಡ ಕಾಪಿ ಇಲ್ಲೈ - ಪೋಡ ಪಾಪಿಯಲ್ಲಿ ಎಲ್ಲಿ ಸಿಗತ್ತೆ.

ಪೂನಮಲೈ ಹೈ ರಸ್ತೆಯಲ್ಲಿರುವ ದಾಸಪ್ರಕಾಶದಲ್ಲಿ ಕರುನಾಡ ತಿಂನಿಸು ಸಿಗಬಹುದಲ್ವಾ ?

ಅಸತ್ಯಾನ್ವೇಷಿಗಳೊಂದಿಗೆ ಎಲ್ಲರೂ ನಮ್ಮ ಮನೆಗೆ ಬನ್ನಿ ಬಿಸಿಬೇಳೆಬಾತ್, ಗಸಗಸೆ ಪಾಯಸ, ಆಂಬೊಡೆ, ಮೈಸೂರುಪಾಕ್ (ಮನೆಯದ್ದು ಸ್ವಲ್ಪ ಗಟ್ಟಿ, ತುಪ್ಪ ಕಡಿಮೆ) ತಯಾರಿರುತ್ತದೆ.

ಈ ಸಂದರ್ಭದಲ್ಲಿ ನನಗೊಂದು ಚುಟುಕ ನೆನಪಾಗ್ತಿದೆ
ಆಂಡವನೇ ದೈವಂ
ಪೊಂಗಲೇ ಪ್ರಸಾದಂ
ಸಾಪಾಡು ಪಾಪಣ್ಣಿ
ಕಂಬಮೇ ತಣ್ಣಿ

mouna said...

super...illi...navu andre namma friends...paani puri badalu....bhel puri tinnodu hechchu....without it....many of the evenings...we would have been spent dying of hunger....aadre one experince that we had....
naavu bombay ge hodaaga...alli chats famous antha..chowpatti alli decide to have our dinner...adre naavu aa gaadigaLinda order maadi...tonadre anubhavisidevu...bengaloorinalli...chats are 'n' times better than the bombay versions!!!!

Shiv said...

ಅಸತ್ಯಿಗಳೇ,
ನೀವು ಮುಂಬೈಗೆ ತವಿಶ್ರೀ ಅವರ ಮನೆಗೆ ಪಾನಿಪುರಿ ತಿನ್ನೋಕೆ ಹೋದಾಗ ,ನಂದು ಒಂದು ಪ್ಲೇಟ್ ತಿನ್ನುವುದಕ್ಕೆ full rights ನಿಮಗೆ ನೀಡ್ತಿದ್ದಿನಿ !

ವಿಶ್ವ,
ಎನ್ರೀ ಹೇಳಿತೀರಾ..ಚೆನೈನಲ್ಲಿ ಪಾನಿಪುರಿ ಸಿಗಲ್ವಾ..ಆಕಟಕಟಾ ಆಂಡವ..
ಒಂದು ಮಾತು ನಿಜ ಕಣ್ರೀ...ರೊಟ್ಟಿ-ಚಟ್ನಿ ಮುಂದೆ ಎಲ್ಲ ಶೂನ್ಯ

ತವಿಶ್ರೀಗಳೇ,
ನೀವು ಹೇಳಿದ ಬಿಬಿಬಾ,ಗಗಪಾ,ಅಂ,ಮೈಪಾ ಎಲ್ಲವನ್ನು ನನ್ನ ವಿಳಾಸಕ್ಕೆ ರವಾನಿಸಬೇಕೆಂದು ಪ್ರೀತಿಯ ಕೋರಿಕೆ :)

ಮೌನ,
ನೀವು ಭೇಲ್ ಪುರಿ ಫ್ಯಾನ್ !
ಅಂದಾಗೆ ನೀವು ಪಾನಿಪುರಿ ತಿನ್ನ್ಳೋಕೆ ಹೋದಾಗ ಅಲ್ಲಿ ಏನಾಯಿತು ಅಂತ ತಿಳಿಲಿಲ್ಲ?

Phantom said...

ನಾನು ಈ ಬ್ಲಾಗ್ ಗೆ ಮೊದಲನೆ ಬೇಟಿ, ಸ್ವಾಮಿ ಈ ಭೂತಕ್ಕೆ ಭೂತಕಾಲ ನೆನಪಾಯಿತು. ನೀವ್ ಬರಿದಿರೊ ಹಾಘೆ ಗಂಗಚಾ ಯಮುನಚಾ ಕಾವೇರಿ ಕೂಡ ಹರಿತ ಇದ್ದಳೆ.

ಭೂತದ ಹೊಟ್ಟೆ ಹಸಿವು ಇನ್ನು ಇಂಗದು :(

ಇಂತಿ
ಭೂತ

Shiv said...

ನಡೆದಾಡುವ ಭೂತ ಅವರೇ,

ನಿಮ್ಮ ಭೇಟಿಗೆ ವಂದನೆಗಳು.

ಭೂತಕ್ಕೂ ಹಸಿವೆಯೇ !
ಹಸಿವೆಯನ್ನು ಇಂಗಿಸಲು ಉಪಶಾಂತಿ ಮಾಡಿಕೊಂಡಿರಿಯೆಂದು ಭಾವಿಸಿದ್ದೇನೆ.

ಭೂತ ದರ್ಶನ ಹೀಗೆ ಆಗುತ್ತಿರಲಿ..

Sree said...

Enree next tinDi elli barlE illa??:P

bhadra said...

ಪಾನಿಪುರಿ ಖಾಲಿ ಆಯ್ತು. ಮುಂದಿನ ತಿನಿಸಿಗಾಗಿ ಖಾಲಿ ತಟ್ಟೆ ಕಾಯ್ತಿದೆ.

ಎಲ್ಲಿ ಹೋದ್ರು ಇವರು? :P ಕಂಪ್ಲೇಂಟ್ ಕೊಡ್ಬೇಕಾ?

Sree said...

word biDree, directaagE bareeri blogspotnalli! ad biTTu summnirlaarde tarle maaDkonDu eshT dina khaali slate hiDkonD tirgOdu!:P

srinivas saar, complaint koTTE biDONa, asathaanvEshigaLge sigbahudu ivru mostly;D

Shiv said...

ಶ್ರೀ ಮತ್ತು ಶ್ರೀನಿವಾಸ್‍ರೆ,
ಕಂಪ್ಲೆಂಟ್ ಅವಶ್ಯಕತೆ ಇಲ್ಲ.ನಾನು ಬಂದು ಬಿಟ್ಟೆ :)

ಖಾಲಿ ಸ್ಲೇಟ್ ಹಿಡುಕೊಳ್ಳಕ್ಕಿಂತ ಇದಿದರಲ್ಲಿ ಬರೆಯೋದು ಲೇಸೆಂದರು ಶ್ರೀಮಾತಾ ! ಅದೇ ಶ್ರೀಮಾತಾ ಅವ್ರು 'ಇರುವದೆಲ್ಲಾ ಬಿಟ್ಟು' ಬರಿತಾರೆ :)

Sree said...

hosa post ell hoytuuuuuuuuuuuu???????????!!!!!!!!!!!

Anveshi said...

ಅಬ್ಬ.... ಕೊನೆಗೂ ನನ್ನ ಪಾನಿಪುರಿ ತಟ್ಟೆಯಲ್ಲಿ ಶ್ಯೂ ಸಿಕ್ಕಿ ಬಿದ್ರು ಶ್ರೀ ಅವರೆ, ಪುರಿ ತಿಂದ ತಕ್ಷಣ ಅವರು ಪಾನಿಯಲ್ಲಿ ಈಜಾಡ್ತಾ ಇದ್ರು !

Anonymous said...

iMthaa pari paani pori bagge heLbaardippaa...eega nodu aapheesinyaaga yelli tharli paani pori....

Anonymous said...

New here,

I'm seeking help for the kids of Haiti.

I'm doing this for a non-profit organization that is dedicated to
creating an oppurunity for the kids in haiti. If anyone here wants to donate then this is the place:

[url=http://universallearningcentre.org]Donate to Haiti[/url] or Help Haiti

They give children in Haiti a positive learning environment.

Please check it out, they're a real cause.

Anything would be appreciated

Anonymous said...

Hello,
I have developed a new clean web 2.0 wordpress theme.

Has 2 colours silver and blue, has custom header(colour or image).
I am curently working on it, so if you have suggestions let me know.

You can view live demo and download from here www.getbelle.com
If you found bug reports or you have suggestions pm me.
Wish you a happing using.

many thanks to [url=http://www.usainstantpayday.com/]USAInstantPayDay.com[/url] for paying the hosting and developement of the theme

Sotaalori

Anonymous said...

megan fox armoni model, [url=http://discuss.tigweb.org/thread/187756]megan fox gives head[/url] sexy megan fox
kim kardashian full video, [url=http://discuss.tigweb.org/thread/187768]kim kardashian blow job clips[/url] kim kardashian ray j megaupload
taylor swift def leppard pour some sugar on me cmt awards, [url=http://discuss.tigweb.org/thread/187772]taylor swift long legs wrapped around[/url] taylor swift sheet music
hannah montana halloween costumes, [url=http://discuss.tigweb.org/thread/187786]watch hannah montana the movie 2009 online free[/url] miley cyrus hannah montana movie
harry potter book 2, [url=http://discuss.tigweb.org/thread/187792]harry potter series[/url] harry potter tattoos
cruise from oahu to maui, [url=http://discuss.tigweb.org/thread/187798]cruise to sanya, china[/url] small ship cruises from seattle to alaska
justin beiber baby lyrics, [url=http://discuss.tigweb.org/thread/187812]justin bieber picture[/url] justin bieber kissing salena gomez
fotos britney spears, [url=http://discuss.tigweb.org/thread/187814]britney spears 3 mp3 download[/url] britney spears and orange the echidna
megan fox before boob job, [url=http://discuss.tigweb.org/thread/175542]hotter than megan fox[/url] fake megan fox photos

Anonymous said...

Phenomenal web site.

Reliable search engine optimization service including submissions and on site optimizing (sokmotoroptimering).
[url=http://www.smotop.se/smotopbloggen/]Sokmotoroptimering[/url]
http://www.smotop.se