Saturday, July 22, 2006

ನ್ಯೂಯಾರ್ಕ್ ನಗರ ಪ್ರದಕ್ಷಿಣೆ

ನ್ಯೂಯಾರ್ಕ್ ನಗರಕ್ಕೆ ಪ್ರವೇಶಿಸುತ್ತಿರುವಂತೆ ಅಲ್ಲಿನ ಹೆಜ್ಜೆಗೊಂದರಂತಿರುವ ಟ್ರಾಫಿಕ್ ಸಿಗ್ನಲ್‍ಗಳು ಸ್ವಾಗತ ಕೋರಿದವು.ಅವುಗಳ ಜೊತೆ ಮನಸೋ ಇಚ್ಛೆ ವಾಹನ ಚಾಲಿಸುವ ಜನ.

ನಾನಿರುವ ಟೋರೆನ್ಸ್ ಅಲ್ಲಿ, ಸುಪ್ಪಿಯ ಫಿನಿಕ್ಸ್ ಅಲ್ಲಿ, ಅರ್ಚನಾಳ ಡೆನವರ್ನ್ ಅಲ್ಲಿ, ದೀಪ್ತೀಯ ಕೊಪರ್ಟಿನೋಗಳಲ್ಲಿ textbook ಡ್ರೈವಿಂಗ್.ವಾಹನ ಸಂಚಾರ ಬಹು ಮಟ್ಟಿಗೆ ಶಿಸ್ತುಬದ್ದ. ಬಹುತೇಕ ಎಲ್ಲರೂ ಚಾಚುತಪ್ಪದೆ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾರೆ. ಅಂತಹ textbook ಡ್ರೈವಿಂಗ್ ಒಗ್ಗಿದ ನಮಗೆ ಈ ನ್ಯೂಯಾರ್ಕ್ ಟ್ರಾಫಿಕ್ ಮೊದಮೊದಲಿಗೆ ಇರಸುಮುರಿಸು ಮಾಡಿದ್ದು ನಿಜ.

ಕೊನೆಗೂ ನಾವು ಬುಕ್ ಮಾಡಿದ ಆ ಹೋಟೆಲ್ ಮುಟ್ಟಿದಾಗಲೇ ತಿಳಿದಿದ್ದು ನಾವು ಬೇಸ್ತುಬಿದ್ದಿವಿಯಂತ.ನೆಟ್‍ನಲ್ಲಿ ಆ ಹೋಟೆಲ್‍ನ ಮೋಹಕ ವೆಬ್‍ಸೈಟ್‍ಗೆ ಮರುಳಾಗಿ ಆ ಹೋಟೆಲ್‍ನ economical ಬೆಲೆಯನ್ನು ನೋಡಿ ಖುಷಿಯಾಗಿ ಬುಕ್ ಮಾಡಿದ್ದೆವು.ಆದರೆ ಆ ಹೋಟೆಲ್ ಎಷ್ಟು ಭಯಂಕರವಾಗಿತ್ತೆಂದರೆ ಅಲ್ಲಿ ನಿಲ್ಲಲು ಸಹ ನಮಗೆ ಮನಸಾಗಲಿಲ್ಲ.ಬುಕಿಂಗ್ ರದ್ದು ಮಾಡುವಂತೆ ಎಷ್ಟು ಕೋರಿದರೂ ಅದು ಆಗಲಿಲ್ಲ.ಹೋಟೆಲ್‍ನವರ ಜೂತೆ ಒಂದು ಸುತ್ತು ಹಾಗೂ ಹೋಟೆಲ್ ಬುಕ್ ಮಾಡಿದ ಎಜೆನ್ಸಿ ಅವರ ಜೊತೆ ಪೋನ್‍ನಲ್ಲಿ ವ್ಯರ್ಥ ಜಗಳ ಮಾಡಿದ್ದಾಯಿತು.

ಸರಿ..ಎಕ್ ಅಜನಬಿ ಶಹರ್‍ದಲ್ಲಿ ಹಮ್ ದಿವಾನೆ ಹೋಟೆಲ್ ಹುಡುಕಹೊರಟೆವು. ಇದ್ದಬದ್ದ ನಂಬರ್‍ಗೆ ಫೋನ್ ಮಾಡಿದ ಕೊನೆಗೂ ಒಂದು ಒಳ್ಳೆ ಹೋಟೆಲ್ ಸಿಕ್ಕಿತು.ಚಕಚಕ ತಯಾರಾಗಿ ನಮ್ಮ ನ್ಯೂಯಾರ್ಕ್ ನಗರ ದರ್ಶನಕ್ಕೆಅಣಿಯಾದೆವು.ಇನ್ನೊಂದು ಕಾರ್ಯಕ್ರಮಕ್ಕೆ ಹೊರಟ ಪೊನ್ನಮ್ಮಗೆ ದಾರಿ ಮಧ್ಯೆದಲ್ಲಿ ವಿದಾಯ ಹೇಳಿದೆವು.

ಕಾರ್‍ನಲ್ಲಿ ನ್ಯೂಯಾರ್ಕ್ ತಿರುಗುವ ಯೋಚನೆ ಸರಿ ಹೋಗಲಿಲ್ಲ. ಕಾರಣ..ಕಾರ್ ಪಾರ್ಕಿಂಗ್..
ನ್ಯೂಯಾರ್ಕ ಯಾವುದೇ ಮೂಲೆಗೋದರೂ ಪಾರ್ಕಿಂಗ್ ಬಹು ದೊಡ್ಡ ಸಮಸ್ಯೆ. ಒಂದು ಗಂಟೆ ಪಾರ್ಕಿಂಗ್‍ಗೆ ೧೫-೨೦ ಡಾಲರ್ ಕಕ್ಕಬೇಕು.ಆ ಪಾರ್ಕಿಂಗ್ ಸಿಕ್ಕರೂ ಅದು ಯಾವುದೋ ಒಂದು ದಿಕ್ಕು, ನಾವು ಹೋಗಬೇಕಿರುವ ಸ್ಠಳ ಇನ್ನೊಂದು ದಿಕ್ಕು.ಕಾರ್‍ ಅನ್ನು ವಾಪಾಸ್ ಮಾಡಿ ನ್ಯೂಯಾರ್ಕ್ ಪ್ರಸಿದ್ದ ಹಳದಿ ಟ್ಯಾಕ್ಸಿ ಸವಾರಿ ಶುರುಮಾಡಿಕೊಂಡವಿ. ನ್ಯೂಯಾರ್ಕ್ ಯಾವ ಮೂಲೆಯಲ್ಲಿ ನೋಡಿದರೂ ಈ ಹಳದಿ ಟ್ಯಾಕ್ಸಿಗಳು ಇದ್ದೆ ಇರುತ್ತೆ.ಇನ್ನೊಂದು ವಿಶೇಷವೆಂದರೆ ಬಹುತೇಕ ಟ್ಯಾಕ್ಸಿ ಚಾಲಕರು ದೇಸಿಗಳು.ನಾವು ನ್ಯೂಯಾರ್ಕ್ ಅಲ್ಲಿ ಪ್ರಯಾಣಿಸಿದ ಟ್ಯಾಕ್ಸಿಗಳೆಲ್ಲ ಸರದಾರ್‍ಜಿ ಚಾಲಕರೇ ಇದ್ದದ್ದು.

ಮೊದಲು ಭೇಟಿ..Ground Zero

ಒಮ್ಮೆ ಘನ-ಗಾಂಭಿರ್ಯಾದಿಂದ ತಲೆಯೆತ್ತಿ ನಿಂತಿದ್ದ WTCಯ ಜೋಡಿ ಗಗನಚುಂಬಿ ಕಟ್ಟಡದ ಸ್ಥಳದಲ್ಲಿ ಈಗ ಅಸಹನೀಯ ಶೂನ್ಯತೆ. ಆ ಸ್ಥಳದ ಸುತ್ತಲಿನ ಜಾಲರಿಯಲ್ಲಿ ಆ ಕರಾಳ ಸೆಪ್ಟಂಬರ್ ೧೧ ರ ನಡೆದ ಘಟನೆ ಬಿಂಬಿಸುವ ಫಲಕಗಳು, ಅಂದು ಮೃತರಾದವರ ಎಲ್ಲರ ಹೆಸರಿರುವ ಫಲಕಗಳು.ಹಾಗೆಯೇ ಗ್ರೌಂಡ್ ಜೀರೋ ದರ್ಶಿಸಿದ ಮೇಲೆ ಜನತೆ ತಮ್ಮ ಮನಸಿನ ನೋವು-ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಗೋಡೆಬರಹಗಳು.

ಆಲ್ಲಿ ನಿಂತ ನನಗೆ ೦೯/೧೧ ರ ವಿಮಾನಗಳು ಕಟ್ಟಡಕ್ಕೆ ಅಪ್ಪಳಿಸುವ ಆ ವಿದ್ವಂಸಕಾರಿ ದೃಶಗಳು ಪದೆಪದೇ ತಲೆಯಲ್ಲಿ ಸುತ್ತುತ್ತ ಇತ್ತು. ಒಟ್ಟು ಮೃತರಾದವರು ಸುಮಾರು ೨೭೫೦ ಜನ. ಎಷ್ಟೊಂದು ಜೀವಗಳು ಕಮರಿಹೋದವು, ಎಷ್ಟೊಂದು ಕನಸುಗಳು ಛಿದ್ರವಾದವು..

ಆ ನಿಷ್ಪಾಪಿ ಜೀವಗಳು ಮಾಡಿದ ತಪ್ಪಾದರೂ ಏನು? ಆ ಕಟುಕರಿಗೆ ದಿಕ್ಕಾರವಿರಲಿ..

ಭಗ್ನಾವಶೇಷಗಳ ಮಧ್ಯೆ ಅದೇ ಸ್ಥಳದಲ್ಲಿ Freedom Tower ಎಂಬ ಹೊಸ ಕಟ್ಟಡ ತಲೆಯೆತ್ತುತಿದೆ. ಇದು WTC ಕಟ್ಟಡಕ್ಕಿಂತ ಎತ್ತರವಿರುತ್ತೆಂತೆ, ಅದರೆ ಅದು ಕೇವಲ ಸ್ಮಾರಕವಾಗಿರುತ್ತೆ...ಗ್ರೌಂಡ್ ಜೀರೋದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಿ ಮುನ್ನಡೆದೆವು.

ಮುಂದಿನ ಜಾಗ Empire State Building ಎನ್ನುವ ಇನ್ನೊಂದು ಗಗನಚುಂಬಿ ಕಟ್ಟಡ.

WTC ಹೋದ ನಂತರ ನ್ಯೂಯಾರ್ಕನ ಅತ್ಯಂತ ಎತ್ತರದ ಕಟ್ಟಡ.ನಾವು ಹೋದಾಗ ವಿಪರೀತ ಜನಸಂದಣಿ.೧ ಗಂಟೆ ಸರದಿಯಲ್ಲಿ ಕಾಯ್ದ ನಂತರ ಕಟ್ಟಡದ ಮೇಲ್ಛಾವಣಿ ಮುಟ್ಟಿದೆವು.ನಿಜಕ್ಕೂ ಅಲ್ಲಿಂದ ನ್ಯೂಯಾರ್ಕ್ ರಮಣೀಯವಾಗಿ ಕಾಣುತಿತ್ತು. ರಾತ್ರಿಯ ಆ ಮಿನುಗುವ ವಿದ್ಯುತ್ ದೀಪಗಳಲ್ಲಿ ವಿವಿಧ ಕಟ್ಟಡಗಳು,ರಸ್ತೆಗಳು ಹಾಗು ಸೇತುವೆಗಳು ಸುಂದರವಾಗಿ ಕಾಣಿಸುತ್ತಿದ್ದವು.ನಾವು ತೆಗೆದುಕೊಂಡ 'ಟೋನಿ ಆಡಿಯೋ' ಅಲ್ಲಿಂದ ಕಾಣುತ್ತಿದ್ದ ಎಲ್ಲ ಕಟ್ಟಡಗಳು-ಸೇತುವೆಗಳ ಬಗ್ಗೆ ಚೆನ್ನಾಗಿ ವಿವರಣೆ ನೀಡುತಿತ್ತು. ಎಂಪೈರ್ ಸ್ಟೇಟ್ ಕಟ್ಟಡದಿಂದ ಹೊರಬಂದಾಗ ರಾತ್ರಿ ೧೦ ಗಂಟೆ. ಅಲ್ಲಿಂದ ಇನ್ನೊಂದು ಟ್ಯಾಕ್ಸಿ ಹಿಡಿದು ನಮ್ಮ ಮುಂದಿನ ಜಾಗ Times Sqaure ಗೆ ಹೊರಟೆವು.

ಟೈಂ ಸ್ಕ್ವೇರ್‍ನಲ್ಲಿ ಟ್ಯಾಕ್ಸಿಯಿಂದ ಇಳಿಯುತ್ತಿಂದತೆ ಯಾವುದೋ ಮಯಾಲೋಕದಲ್ಲಿ ಇಳಿದಿವೇನೋ ಅನ್ನಿಸಿತು. ಎಲ್ಲಿ ನೋಡಿದರೂ ಜಗಮಗಿಸುವ ಕಟ್ಟಡಗಳು, ಕಣ್ಣು ಕೋರೈಸುವ ಬಣ್ಣಬಣ್ಣದ ಜಾಹೀರಾತು ಫಲಕಗಳು ಮತ್ತು ವರ್ಣಮಯ ಜನಸಾಗರ ! ಆರಾಮವಾಗಿ ತಿರುಗಾಡುತ್ತ, window shopping ಮಾಡುತ್ತ, Starbucks-Cola ಹೀರುತ್ತ ತೇಲುವ ಜನ, ರಸ್ತೆ ಬದಿಯಲ್ಲಿ portrait-painting ಮಾಡಿ ಮಾರುವ ಕಲಾವಿದರು.ನಮ್ಮ ಬೆಂಗಳೂರಿನ ಎಂಜಿ-ಬ್ರಿಗೇಡ್‍ನ ಹಿರಿಯಣ್ಣನಂತೆ ಇತ್ತು ಆ ಟೈಂ ಸ್ಕ್ವೇರ್‍.

ಸಾಕಷ್ಟು ತಿರುಗಾಡಿದ ನಂತರ ಅಲ್ಲಿಯ ಇದ್ದ ಇಟಾಲಿಯನ್ ರೆಸ್ಟೋರೆಂಟ್‍ನಲ್ಲಿ ಗಾರ್ಲಿಕ್ ಬ್ರೆಡ್-ಪಾಸ್ತ ಸವಿದೆವು. ಊಟದ ನಂತರ ಇನ್ನೊಂದು ಸುತ್ತು ಟೈಂ ಸ್ಕ್ವೇರ್‍ ಪ್ರದಕ್ಷಿಣೆ.ಹೋಟೆಲ್‍ಗೆ ಮರಳಬೇಕುನ್ನುವಾಗ ನಾವು ಹೋಟೆಲ್ ವಿಳಾಸ ಮರೆಯುವದೇ..ದೀಪ್ತೀ ಹೋಟೆಲ್ ನಂಬರ್‍ಗೆ ಕರೆ ಮಾಡಿ ಅದು 146 street,7th Avenueದಲ್ಲಿ ಇದೆಯೆಂದು ಹೇಳಿದಳು.ನಾವೆಲ್ಲ ಟ್ಯಾಕ್ಸಿ ಹಿಡಿದು ಆ ವಿಳಾಸಕ್ಕೆ ಹೊರಟೆವು.ಆ ವಿಳಾಸ ಮುಟ್ಟಿದರೆ ಅಲ್ಲಿ ನಮ್ಮ ಹೋಟೆಲ್ ಇಲ್ವೇ !! ಮತ್ತೆ ಕರೆ ಮಾಡಿದಾಗ ತಿಳಿದಿದ್ದು ಆ ಹೋಟೆಲ್ ಇರುವುದು 46 street,7th Avenue. ನಾವು ಟೈಂ ಸ್ಕ್ವೇರ್‍‍ನಿಂದ ಟ್ಯಾಕ್ಸಿ ಹಿಡಿದದ್ದು 47 street ನಿಂದ !! ಅಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು ಎನ್ನುವಂತೆ ಮುಂದಿನ ಬೀದಿಯಲ್ಲಿದ್ದ ಹೋಟೆಲ್ ಮುಟ್ಟಲು ಎಲ್ಲ ಕಡೆ ಸುತ್ತಾಡಿ ಮರಳಿ ಬಂದಾಯಿತು !! ಹೋಟೆಲ್ ಮುಟ್ಟಿದ ನಂತರ ಕಿಡಕಿಯಿಂದ ಟೈಂ ಸ್ಕ್ವೇರ್‍‍ ನೋಡಿ ಒಬ್ಬರಿಗೊಬ್ಬರು ಗೇಲಿಮಾಡಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು !

ಮರುದಿನದ ಕಾರ್ಯಕ್ರಮದಲ್ಲಿ ಮೊದಲು ಸೆಂಟ್ರಲ್ ಪಾರ್ಕ್ ಭೇಟಿ.

ನಮ್ಮ ಹೋಟೆಲ್‍ನಿಂದ ನಡೆದುಕೊಂಡು ಹೋಗುವಷ್ಟು ಹತ್ತಿರದಲ್ಲಿತ್ತು ಸೆಂಟ್ರಲ್ ಪಾರ್ಕ್ . ಕಾಂಕ್ರೀಟ್ ಜಂಗಲ್‍ನಂತಿರುವ ನ್ಯೂಯಾರ್ಕನ ಮಧ್ಯೆದಲ್ಲಿದೆ ಈ ವಿಶಾಲ ಪಾರ್ಕ್.ಒಂದು ತರ ಆ ನಗರದ ಶ್ವಾಸಕೋಶವಿದ್ದ ಹಾಗೆ. ಆ ಪಾರ್ಕ್‍ ಹೊಕ್ಕು ತಿರುವಂತೆ ನಮಗೆ ಸಿಕ್ಕವರು ಜಾಗ್ ಮಾಡುವವರು, ಸೈಕ್ಲಿಂಗ್ ಮಾಡುವವರು, ಸ್ಕೇಟ್ ಮಾಡುವವರು..ಒಂದು ರೀತಿಯ active ವಾತಾವರಣ.

ಅಲ್ಲಿನ ಬೆಂಚ್‍ಗಳಲ್ಲಿ ಕುಳಿತು ಅಲ್ಲಿದ್ದ ಒಬ್ಬ ದೇಸಿ ಅಂಗಡಿಯವನಿಂದ ಐಸ್‍ಕ್ರೀಂ ಕೊಂಡು, ತಿಂದು ಅನಂದಿಸಿದೆವು.ಅಲ್ಲಿ ಸುತ್ತಾಡಿದ ಮೇಲೆ ಮರಳಿ ಟೈಂ ಸ್ಕ್ವೇರ್‍‍ ಗೆ .ಅಲ್ಲಿನ ಫೀಡ್ಜಾ ಅಂಗಡಿಯಲ್ಲಿ ಎಲ್ಲ ತರದ ವೆಜಿ ಫೀಡ್ಜಾದ ರುಚಿ ನೋಡಿದೆವು. ಮದ್ಯಾಹ್ನದ ವಿಮಾನ ಹಿಡಿಯಬೇಕಿದ್ದ ದೀಪ್ತಿಗೆ ವಿದಾಯ ಹೇಳಿ ನಾವು ಮತ್ತೆ ಸೆಂಟ್ರಲ್ ಪಾರ್ಕ್ ಹೊಕ್ಕೆವು.

ಸೆಂಟ್ರಲ್ ಪಾರ್ಕ್ ನಲ್ಲಿ ಸೈಕ್ಲಿಂಗ್ ಮಾಡುವ ಐಡಿಯಾ ಬಂದದ್ದು ಅರ್ಚನಾಗೆ. ೨ ಗಂಟೆಗೆ ೨೦ ಡಾಲರ್ ಕೊಟ್ಟು ಪಾರ್ಕ್ ಹೊರಗಿದ್ದ ಸೈಕಲ್‍ಗಳನ್ನು ತಗೊಂಡು ನಮ್ಮ ಸೆಂಟ್ರಲ್ ಪಾರ್ಕ್ ಯಾತ್ರೆ ಶುರುವಾಯಿತು.ನನಗೋ ಸೈಕ್ಲಿಂಗ್ ಮಾಡಿ ತುಂಬಾ ದಿವಸಗಳಾಗಿತ್ತು.ಮೊದಮೊದಲಿಗೆ ಸ್ಪಲ್ಪ ಕಷ್ಟಪಟ್ಟ ನಂತರ ಸಲಿಸಾಗಿ ಮುನ್ನಡೆಯಿತು ಸೈಕಲ್. ೨ ಗಂಟೆ ಪಾರ್ಕ್ನಲ್ಲಿ ಸೈಕಲ್ ಮಾಡಿ ದಣಿದ ನಂತರ ಆಯಾಸವಾಗಿತ್ತು, ಆದರೆ ಮನ ಉಲ್ಲಾಸಿತವಾಗಿತ್ತು. ಮತ್ತೊಮ್ಮೆ ಟೈಂ ಸ್ಕ್ವೇರ್‍‍ ಹೊಕ್ಕು ಅಲ್ಲಿದ starbucksನಲ್ಲಿ ಪಾನೀಯ ಹೀರಿ,ಹೋಟೆಲ್‍ಗೆ ತೆರಳಿ,ಅಲ್ಲಿಂದ ಮರಳಿ JFK-LGAಗೆ ನಮ್ಮ ವಿಮಾನ ಹಿಡಿಯ ಹೊರಟೆವು.

ಹೀಗೆ ಮುಕ್ತಾಯವಾಯಿತು ನಮ್ಮ eventful ನ್ಯೂಯಾರ್ಕ್ ಪ್ರವಾಸ !

ನಾವು ಅಂದುಕೊಂಡಂತೆ, ನಾವು ಯೋಜನೆ ಮಾಡಿದಂತೆ ಸುಗಮವಾಗಿ ಸಾಗಲಿಲ್ಲ ಈ ಪ್ರವಾಸ.ಆದರೆ ಸ್ನೇಹಿತರ ಜೊತೆ ಕಳೆದ ಆ ಸವಿಕ್ಷಣಗಳ ಮುಂದೆ ಇವೆಲ್ಲ ಸಣ್ಣ ತೊಡಕುಗಳು ಯಾವ ಲೆಕ್ಕ !!

14 comments:

Anonymous said...

ಶಿವ್ ಅವರೆ,
ಸೊಗಸಾದ ಯಾತ್ರೆ ನಿಮ್ಮದು.
WTC ಮುರಿದು ಬಿದ್ದ ರೀತಿ ನೆನಪಿಸಿಕೊಂಡರೆ ಈಗಲೂ ಮನದಲ್ಲಿ ನೋವು ಸುಳಿದು ಮರೆಯಾಗುತ್ತದೆ.

ಬಹುಶಃ ಅಂತಹ ದಾಳಿ ತಡೆಗೆ ಹೊಸ ತಂತ್ರಜ್ಞಾನ ಬರಬಹುದೇನೋ.
ಅದ್ಯಾವ ತಂತ್ರಜ್ಞಾನ ಅಂದರೆ, ಇಲ್ಲಿ ನೋಡಿಬಿಡಿ.
http://avisblog.wordpress.com/current-affairsಪ್ರಚಲಿತ/

Anveshi said...

ಏನ್ರೀ ಶಿವ್ ಅವರೆ,
Starbucks-Cola ಹೀರುತ್ತ ಜನ ತೇಲುತ್ತಾರೆ ಅಂತ ಬರೆದಿದ್ದೀರಿ... ಅದ್ಹೇಗೆ ತೇಲೋದು?

ಯಾಕೋ ಅದನ್ನು ಓದಿದ ನಂತ್ರ ನಿಮ್ಮೇಲೇ ಡೌಟು ನಂಗೆ.
ಹೋಟೆಲ್ ವಿಳಾಸ ಮರೆತು ಎಲ್ಲೆಲ್ಲಿಗೋ ಹೋದಾಗಲೇ ನನ್ನ ಇಲ್ಲದ-ತಲೆಯಲ್ಲಿ ಮಿಂಚೊಂದು ಸುಳಿದಾಡಿದಂತಾಯ್ತು....
:)

Shiv said...

ಅವೀ,
ಹೊಸ ತಂತ್ರಜ್ಞಾನದ wtc ನೋಡಿದೆ :)
atleast ಹೊಸ freedom towerನಲ್ಲಿ ಅದನ್ನು ಉಪಯೋಗಿಸುತ್ತಾರೋ ನೋಡಬೇಕು

ಅಸತ್ಯಿಗಳೇ,
ಅಯ್ಯೋ..ನಾನೇನು ಮಾಡಿಲಿಲ್ಲ..ಡೌಟ್ ಯಾಕ್ರೀ?
ನಾನು starbucksನಲ್ಲಿ ಕುಡಿದ double-chip hot chocolate ಮೇಲಾಣೆ ! ಇದರಲ್ಲಿ ಯಾವುದೇ ಅಲ್-ಕೊಲಹಾಲ್‍ದ ಲಿಂಕ್ ಇಲ್ಲವೆಂದು ಸ್ಪಷ್ಟಪಡಿಸುತ್ತೇನೆ !
ಅಲ್ಲಿ ಜನರ ಕೈಯಲ್ಲಿ ಇದ್ದದ್ದು starbucks ಮತ್ತು colaದ ಕಪ್ಪುಗಳು.ಅವರು ಯಾಕೆ ತೇಲುತ್ತಿದ್ದರು ಅನ್ನುವುದಕ್ಕೆ ನಿಮ್ಮಂತ ಸಮರ್ಥ ಅನ್ಚೇಷಿಗಳ ಅವಶ್ಯಕತೆ ಇದೆ..

Soni said...

Aiyyyoooo modle nange kannada fonts odhodhu kashta. idhu yake vichitra anasthidheyalle nange...
eee ardha SH,TH,DH,LL,KH gaLu jasti anastha idheyalla nange!!

or something wrong with me i guess!

nimgu hAge ansuttha?

Shiv said...

ಸೋನಿ,
ಜಾಸ್ತಿ ಅನಿಸುತ್ತಾ ಇದೆಯೇ ?
ಇಲ್ವಲ್ಲಾ ನನಗೆ ಹಂಗೇನು ಅನಿಸಲಿಲ್ಲ..
ನಿಮ್ಮ ಬ್ರೌಸರ್ ಯಾವುದು?
ಅಂದಾಗೆ ಕೇವಲ ನನ್ನ ಬ್ಲಾಗ್ ಓದುವಾಗ ಆ ತೊಂದರೆಯೇ ಅಥವಾ ಎಲ್ಲ ಕನ್ನಡ ಬ್ಲಾಗ್ ಗಳಲ್ಲೂ ಅದೇ ಕತೆಯೇ?

Soni,In case, you cudnt read wat I wrote..
I dont feel that there is extra SH,TH,DH what you mentioned.Are you finding this issue with only my blog or all other kannada blogs?
Which browser u use?

Phantom said...

shiv,

chenagi mUDi baMdide. saNNa puTTa toDoku gaLa madyeyu, eMjoyisida nimma pari shlAghanIya.
iMtaha prvAsa gaLannu mADta iri, hAge, blAgista iri.

bhUta

Shiv said...

ಭೂತ,
ನಿಮ್ಮ ಹಾರೈಕೆಗೆ ಧನ್ಯವಾದಗಳು..

Mahantesh said...

newyork torisaddakke vandanegalu...
next elli prayaaNa sir?

bhadra said...

ಈ ಮೊದಲೇ ಇದನ್ನು ಬರೆದು ಇರಿಸಿದ್ದಿರಿ ಅಲ್ವಾ? ಆದರೆ ಚಿತ್ರ ಇರಲಿಲ್ಲ ಅನ್ಸತ್ತೆ. ಕನಸಿನಲ್ಲೂ ಕಾಣದ ದೃಶ್ಯಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು.

ನೀವು ಬರೆದಿರುವಂತೆ ಆಗಾಗ್ಯೆ ವರ್ಲ್ಡ್ ಟ್ರೇಡ್ ಸೆಂಟರ್‍ಗೆ ವಿಮಾನ ಅಪ್ಪಳಿಸಿದುದನ್ನು ನೋಡುತ್ತಿರುತ್ತೇನೆ. ಎಂತಹ ಹೀನಾಯ ಕೃತ್ಯ. ಪಾಪದ ಜನಗಳು ಇವರಿಗೇನು ಮಾಡಿದ್ದರು? ಇವರಿಗೆ ಸಿಕ್ಕಿದ್ದಾದರೂ ಏನು? ಸಾಧಿಸಿದ್ದಾದರೂ ಏನು?

ಆ ಪಾರ್ಕ್ ಚಿತ್ರ ಎಷ್ಟು ಚಂದ ಇದೆ. ಸ್ವಲ್ಪವೂ ಗಲೀಜಿಲ್ಲ. ಜನನಿಬಿಡತೆ ಇಲ್ಲ. ನಮ್ಮ ಕಬ್ಬನ್ ಪಾರ್ಕ್, ಲಾಲ್‍ಬಾಗ್ ಗಳು ಹೀಗಾಗುವುವೇ?

ಚಿತ್ರಗಳಿಗೆ ತಕ್ಕದಾದ ಲೇಖನ. ಬಹಳ ಚೆನ್ನಾಗಿದೆ. ನಾನು ಇದರ ಒಂದು ಪ್ರತಿಯನ್ನು ಮುದ್ರಿಸಿಕೊಂಡಿರುವೆ. (ಮತ್ತೆ ಯಾವಾಗ ಬ್ಲಾಗ್ ಮಾಯವಾಗತ್ತೋ ಏನೋ?)

Shiv said...

ಮಹಾಂತೇಶ್,
ಬದುಕು ಜಟಕಾ ಬಂಡಿ..ವಿಧಿ ಅದರ ಸಾಹೇಬ..
ಎಲ್ಲಿ ಕರೆದುಕೊಂಡು ಹೋಗುತ್ತೋ ಅಲ್ಲಿಗೆ :)

ತವಿಶ್ರೀ,
ಹೌದು ಅದೊಂದು ಮರೆಯಲಾಗದ ಘಟನೆ..ಸಾಧಿಸಿದ್ದು ಏನೂ ಇಲ್ಲ..ಪಾರ್ಕ್ ತುಂಬಾ ಜನ ಇದ್ದರು..ಆದರೆ ಬಹಳ ಶುಭ್ರವಾಗಿತ್ತು.

ಮನ | Mana said...

ಮಾಯಾನಗರಿ ನ್ಯೂಯಾರ್ಕ್ ಪ್ರದಕ್ಷಿಣೆ ಹಾಕಿಸಿದ್ದಕ್ಕೆ ಧನ್ಯವಾದಗಳು ಶಿವ್! ನಿಜಕ್ಕೂ eventful ಆಗಿದೆ, ನಿಮ್ಮ ಪ್ರವಾಸ.
ವಿಶ್ವವಾಣಿಜ್ಯಕೇಂದ್ರ ಧೂಳೀಪಟವಾದ ದೃಶ್ಯಗಳು ಹಾಗೆ ಮನದೆದುರು ಹಾದು ಹೋದಂತಾಯಿತು.
"ಆ ಮುಗ್ದ ಜೀವಗಳು ಮಾಡಿದ ತಪ್ಪಾದರೂ ಏನು?"
ಬಹುಷ: ಆ ಕಟುಕರ ಬಳಿಯೂ ಉತ್ತರವಿರಲಿಕ್ಕಿಲ್ಲ ಈ ಪ್ರಶ್ನೆಗೆ.

ನೀವು ಹಾಕಿರುವ ಚಿತ್ರಗಳು 'ಅಮೇರಿಕಾ ಅಮೇರಿಕಾ' ಚಿತ್ರದ "ಅ ಆ ಅಮೇರಿಕಾ" ಹಾಡನ್ನು ನೆನಪಿಸಿದವು. :)

ಅಂದಹಾಗೆ, ಫೈರ್‍ಫಾಕ್ಸ್ ಬ್ರೌಸರಿನಲ್ಲಿ, ನಿಮ್ಮ ಬ್ಲಾಗಿನ ಕನ್ನಡ ಅಕ್ಷರಗಳು ಈಗ ಭಾಳ ಚಲೋ ಕಾಣಿಸ್ತದ.

- ಮನ

Shiv said...

ಮನ,

'ಆ ಆ ಅಮೇರಿಕಾ' ಹಾಡು !
ಅದೊಂದು ಅದ್ಬುತ ಹಾಡು..ಒಂದು ಹಾಡಿನಲ್ಲಿ ಈಡೀ ಅಮೇರಿಕಾ ಸುತ್ತಿಸಿಬಿಟ್ಟಿದ್ದಾರೆ !!

ವಿವಾಕೇ ದ್ವಂಸದ ದೃಶಗಳು ಎಷ್ಟು ಪ್ರಭಾವಶಾಲಿಯಲ್ವ?
ಒಂದು ದೈತ್ಯ ರಾಷ್ಟ್ರವನ್ನು ಅಲುಗಾಡಿಸಿದ ದ್ವಂಸವದು.

ಫೈರ್‍ಫಾಕ್ಸ್ ನಲ್ಲಿ ನನ್ನ ಬ್ಲಾಗ್ ಸರಿಯಾಗಿ ಕಾಣುತ್ತಿದ್ದರೆ ಅದಕ್ಕೆ ನೀವೇ ಕಾರಣರು.ನಿಮ್ಮ ಆ ಟಿಪ್ಸ್ ನಿಂದಾಗಿಯೇ ಅದು ಸದ್ಯವಾದದ್ದು.ಧನ್ಯವಾದಗಳು.

v.v. said...

Shiv,

I just read about your trip to NYC. I spent about 16 years there. I love that city more than any other place - including the city of my birth, Bangalore.

I am surprised about the fact that you did not use the NYC subway system. You can pretty much go from any place in NYC to any other place by NYC. In all of my stay in New York, I very rarely used the NY cabs.

Thanks for writing about my favorite city.

Shiv said...

Sanjaya,

NY indeed is a happening city..and as you rightly said, we missed dat subway.But will sure use it in next trip.