Tuesday, March 20, 2007

ಸ್ವೀಟ್ ಡ್ರೀಮ್ಸ್ ಅಂದರೇನು?

ನೀನು ನನಗೆ ಕಳಿಸಿದ್ದ ಮೊದಲ ಇ-ಮೇಲ್‍ ನೋಡ್ತಾ ಇದ್ದೆ.

ಅದರಲ್ಲಿ ಇದ್ದ ಆ ಕೊನೆ ಸಾಲು 'ಸ್ವೀಟ್ ಡ್ರೀಮ್ಸ್ ಅಂದ್ರೇನು?' ನೋಡುತ್ತಿದ್ದಂತೆ ನನ್ನ ಮುಖದ ಮೇಲೆ ಒಂದು ನಗೆ ಮೋಡ ಹಾಗೇ ತೇಲಿಹೋಯಿತು. ಅದು ಬೇರೆ 'ಫಾರ್ ಎಕ್ಸೆಂಪಲ್' ಅಂತಾ ಉದಾಹರಣೆ ಕೇಳಿದ್ದೆ. ನೀನು ಸುಮ್ಮನೆ ಕೀಟಲೆ ಮಾಡಿದ್ದ ಅಥವಾ ನಿಜಕ್ಕೂ ಹಂಗದೆರೇನು ಅಂತಾ ಕೇಳ್ತಾ ಇದ್ದೋ?

ಹೌದಲ್ಲವಾ..ಕನಸುಗಳು ಕಣೋದು ಇರಲಿ..ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೊತ್ತಿದ್ದಾರೂ ಎನು? ಇಬ್ಬರಲ್ಲಿ ಇದ್ದ ಒಂದೇ ಸಮಾನತೆ ಅಂದ್ರೆ..ಇಬ್ಬರೂ ಅಜ್‍ನಬಿಗಳೇ ! ಆದಾದ ನಂತರ ಎನೆಲ್ಲಾ ಆಯಿತು..

ಎಕ್ ಅಜ್‍ನಬಿ ಹಸೀನಾಸೇ ಹ್ಯೂ ಮುಲಾಕಾತ್ ಹೋಗಯ
ಫಿರ್ ಕ್ಯಾ ಹುವಾ ಏ ನಾ ಪೂಚೋ ಕುಚ್ ಐಸೆ ಬಾತ್ ಹೋಗಯ

ಅಜ್‍ನಬಿಗಳಾಗಿದ್ದ ನಾವು ಅದಾವುದೋ ಕ್ಷಣದಲ್ಲಿ ಒಂದು ಮಧುರ ಸಂಬಂಧದಲ್ಲಿ ಬೆಸೆಯಲ್ಪಟ್ಟಿದ್ದೆವು. ನಮ್ಮ ನಡುವಿದ್ದ ಸಂಬಂಧಕ್ಕೊಂದು ಹೆಸರಿತ್ತು, ಮನೆಯವರ ಆರ್ಶಿವಾದವಿತ್ತು.ಆಗಬೇಕಾಗಿದ್ದು ನನ್ನ-ನಿನ್ನ ಹೃದಯದ ಮಿಲನ..

ದಿನಗಳು ಹೇಗೆ ಹೋದವಲ್ಲವಾ...
ಮುಂಜಾನೆಯ ಚುಮುಚುಮು ಮಂದ ಬೆಳಕಿನಂತೆ ಆರಂಭವಾದ ನಮ್ಮ ನಡುವಿನ ಸಂಬಂಧ, ನೋಡುನೋಡುತ್ತಲೇ ಬೆಳ್ಳನೇ ಬೆಳಕಾಗಿ ಎಲ್ಲೆಡೇ ಹರಡಿ, ಆ ಬೆಳಕಿನಲ್ಲಿ 'ನಾನು-ನೀನು' ಅನ್ನೋದು ದೂರಾಗಿತ್ತು.ಅದು ನನ್ನ ಜೀವನ, ಇದು ನಿನ್ನ ಜೀವನ ಅಂತಿದ್ದ ಎರಡು ಬೇರೆ ಲೋಕಗಳು ಮಾಯವಾಗಿ, ಅಲ್ಲಿ ನಗುತ್ತಾ ನಿಂತಿತ್ತು 'ನಮ್ಮಿಬ್ಬರ' ಜೀವನ. ಬಾಳಿಗೊಂದು ಸಂಬಂಧ, ಆ ಸಂಬಂಧಕ್ಕೊಂದು ಅರ್ಥ ಬರತೊಡಗಿತ್ತು.

ಆ ಸಂಬಂಧ ತಳಹದಿಯ ಮೇಲೆ ನಿಧಾನವಾಗಿ ನಮ್ಮ ಪ್ರೀತಿಯ ಸೌಧ ಬೆಳಿತು ಅಲ್ವಾ..

ಇಬ್ಬರು ಅಜ್‍ನಬಿಗಳ ನಡುವೆ ಅದು ಯಾವಾಗ ಚಿಗುರಿತು ಆ ಪ್ರೀತಿ ? ಅದು ಯಾವಾಗ ವಿಶ್ವಾಸ ಮೂಡಿದ್ದು ಹೃದಯಗಳಲ್ಲಿ? ಕಣ್ಮುಂದೆ ಮೊಳಕೆಯೊಡೆದ ನಮ್ಮ ಮಧುರ ಸಂಬಂಧ ಕೆಲವೇ ದಿನಗಳಲ್ಲಿ ಬ್ಯಾಂಬೂ ಗಳದಂತೆ ಬಹುಬೇಗನೆ ಎತ್ತರಕ್ಕೆ ಬೆಳಯಿತಲ್ಲವಾ..ಆಮೇಲೆ ನಾವಿಬ್ಬರು ಅ ಸಂಬಂಧದ ಚೌಕಟ್ಟಿನಲ್ಲಿ ನಮ್ಮದೇ ಆದ 'ಸುಂದರ ಲೋಕ'ವೊಂದನ್ನು ಸೃಷ್ಟಿಸಿಕೊಂಡೆವಲ್ಲವಾ.

ಅಲ್ಲಿ ಏನೇಲ್ಲಾ ಇದೆ..
ಆಸರೆ, ಭರವಸೆ, ಕನಸು, ನಿರ್‍ಈಕ್ಷೆ, ಪ್ರೀತಿಯ ಸೆಳೆತ, ತುಂಟತನದ ಸೊಗಸು, ವಿರಹದ ವೇದನೆ..ಸಾಂತ್ವನಕ್ಕೆ ಹೆಗಲು, ಬೆಚ್ಚನೆ ಅಪ್ಪುಗೆ, ಮುತ್ತಿನಹಾರ, ಎಲ್ಲಾ ಮರೆತು ವಿಶ್ರಮಿಸುವದಕ್ಕೆ ಎದೆ ಎಂಬ ದಿಂಬು..

ಆದರೆ ಕೆಲವೊಮ್ಮೆ ಈ ಸುಂದರಲೋಕದಲ್ಲಿ ನಮ್ಮ ಸ್ಟುಪಿಡ್‍ತನದಿಂದ ಇನ್ನೊಬ್ಬರ ಮನಕ್ಕೆ ನೋವುಂಟು ಆಗುತ್ತೆ ಅಲ್ವಾ, ಸುಮ್ಮನೆ ಬೇಡದ ವಿಚಾರಗಳು ಬರುತ್ತೆ ಅಲ್ವಾ.ನಮ್ಮಿಬ್ಬರಲ್ಲಿ ಯಾರಿಗೆ ನೋವಾದರೂ ಅದು ಇನ್ನೊಬ್ಬರಿಗೆ ನೋವು ಉಂಟು ಮಾಡೇ ಮಾಡುತ್ತೆ.ಎನೂ ಕೆಲಸಕ್ಕೆ ಬಾರದ ವಿಚಾರಗಳಿಂದ ನಮ್ಮ ಸುಂದರಲೋಕ ಹಾಳು ಮಾಡಿಕೊಳ್ಳದೋ ಬೇಡಾ ಕಣೇ. ನಮ್ಮಬ್ಬಿರಲ್ಲಿ ಇನ್ನೊಬ್ಬರ ಬಗ್ಗೆ ಎಷ್ಟು ಪ್ರೀತಿ-ವಿಶ್ವಾಸ ಇದೆ ಅಂತಾ ನಮಗೆ ಚೆನ್ನಾಗಿ ಗೊತ್ತಿದೆ.ಯಾವುದೋ ಒಂದು ಒರಟು ಮಾತು-ಇನ್ನಾವುದೋ ಒಂದು ಹುಚ್ಚು ವಿಚಾರ ಅ ಸುಂದರ ಸಂಬಂಧದಲ್ಲಿ ಪ್ರಶ್ನೆಗಳನ್ನು-ಸಂಶಯಗಳನ್ನು ಹುಟ್ಟುಹಾಕುವುದು ಬೇಡ.

ಆದರೆ ಒಂದು ವಿಷಯ ಗಮನಿಸಿದಿಯಾ?
ಈ ತರದ ಸ್ಟುಪಿಡ್ ವಿರಸದ ನಂತರ, ನಾವು ಒಬ್ಬರನ್ನೊಬ್ಬರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಅನಿಸುತ್ತೆ.ನಾವು ಹಿಂದಿಗಿಂತ ಇನ್ನೂ ಹತ್ತಿರಕ್ಕೆ ಬಂದಿದೀವಿ ಅನಿಸುತ್ತೆ.ಇರಲಿ ವಿರಸದ ವಿಷಯ. ನಾವು ಅದನ್ನು ನಮ್ಮ ಮನಗಳಲ್ಲಿ ಬಿಟ್ಟಕೊಳ್ಳೋದೇ ಬೇಡ.

ನಮ್ಮ ಈ ಸುಂದರ ಲೋಕಕ್ಕೆ ತಳಕುಹಾಕೊಂಡಿರೋದೇ ಆ ಸುಂದರ ಸ್ವಪ್ನಗಳು...
ಸುಮ್ಮನೆ ನಿನ್ನ ಕೈ ಹಿಡಕೊಂಡಿರೋದು, ಕೈ ಹಿಡಕೊಂಡು ಹಾಗೇ ತಿರುಗಾಡೋದು..ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಗುವುದು, ನೀನು ನನ್ನ ತಲೆಗೂದಲಲ್ಲಿ ಬೆರಳಾಡಿಸುತ್ತಿದಂತೆ ಹಾಗೇ ನಿದ್ದೆಗೆ ಜಾರುವುದು, ನಿನಗೆ ನಿದ್ದೆ ಬರದಿದ್ದರೆ ಎದೆಗೆ ಒರಗಿಸಿಕೊಂಡು ಬಿಸಿ ಅಪ್ಪುಗೆಯಲ್ಲಿ ಮಲಗಿಸಿಕೊಳ್ಳುವುದು,ಬೆಳಗೆದ್ದು ಕಣ್ಣು ಬಿಟ್ಟಾಗ ನಿನ್ನ ಮುದ್ದು ಮುಖ ನೋಡುವುದು, ನಂತರ ಈಡೀ ಹಗಲು ನಿನ್ನ ಬಾಹುಗಳಲ್ಲಿ ಕಳೆಯುವುದು, ಸಂಜೆ ನಿನ್ನ ತುಟಿಗೆ ಹಾಲ್ಜೇನಾಗುವುದು, ರಾತ್ರಿಗೆ ನಿನ್ನ ಒಡಲಲ್ಲಿ ಕರಗಿ ಪ್ರೀತಿಯ ಧಾರೆಯಾಗುವುದು..

ಹೀಗೆ ಅದೊಂದು ಸ್ವಪ್ನಗಳ ಮೂಟೆಯೇ ಇದೆ..

ಎಕ್ ದಿನ್ ಆಪ್ ಹಮ್ ಕೋ ಮಿಲ್‍ಜಾಯೇಗಾ
ದೇಖತೇಯೀ ಫೂಲ್ ಕಿಲ್ ಜಾಯೇಗಾ

ಸ್ವೀಟ್ ಡ್ರೀಮ್ಸ್ ಗಳ ಬಗ್ಗೆ ಈಗ ನೀನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯಾ ಅಂತಾ ನನಗೆ ಗೊತ್ತು.

ಈಗ ಹೇಳು ನನ್ನ ಒಲವೇ, ಸ್ವೀಟ್ ಡ್ರೀಮ್ಸ್ ಅಂದರೇನು ಅಂತಾ ..

************************************************
ವಿಕ್ರಾಂತ ಕರ್ನಾಟಕದ ಯುಗಾದಿ ವಿಶೇಷಾಂಕದಲ್ಲಿ ಈ ಲೇಖನ ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ನನ್ನ ಧನ್ಯವಾದಗಳು
************************************************

36 comments:

VENU VINOD said...

ಶಿವ,
ಒಬ್ಬ/ಒಬ್ಬಾಕೆ ಸಂಗಾತಿಯಿದ್ದರೆ ಇಂತಹ ಕಲ್ಪನೆಗಳೆಲ್ಲಾ ಬರುತ್ತವೆ. ಇಲ್ಲಿ ಇದನ್ನೆಲ್ಲ ಹೇಳಿ ನಮಗೆ ಹೊಟ್ಟೆಕಿಚ್ಚು ಬರಿಸ್ತಾ ಇರೋದಕ್ಕೆ ನಿಮಗ್ಯಾಕೆ ನೊಟೀಸು ಜಾರಿ ಮಾಡಬಾರದು?

(ಇದು ತಮಾಷೆಗಾಗಿ. ನಿಜಕ್ಕೂ ನವಿರಾದ ಚುರುಕಾದ ಬರಹ)

Shiv said...

ವೇಣು,

ನೊಟೀಸು ಜಾರಿ ಮಾಡೋದು !
ಇನ್ನು ಸ್ವಲ್ಪ ಕಾಲದಲ್ಲೇ ಅಮಂತ್ರಣದ ನೊಟೀಸ್ ನಾನೇ ಜಾರಿ ಮಾಡ್ತೀನಿ ನಿಮಗೆ :)
ವಂದನೆಗಳು

ಸುಪ್ತದೀಪ್ತಿ suptadeepti said...

ಓಹೋ, ಆಮಂತ್ರಣ!! ಯಾವುದಕ್ಕೆ ಅಂತ ಕೇಳಲ್ಲ. ಆದರೆ, ಪರದೇಶಿಗರಿಗೆ ಆಮಂತ್ರಣದ ಜೊತೆಗೆ ಊರಿಗೆ ಸೇರಿಸುವ ತಾಕತ್ತಿರುವ ಒಂದು ಚೀಟಿ ಇರಬಹುದಾ?

ಕಲ್ಪನೆ, ನೈಜತೆ- ಇವುಗಳ ನಡುವೆ ವ್ಯತ್ಯಾಸವೇ ಇಲ್ಲದಂತಾಗುವ ಕನಸಿನ 'ಆ ದಿನ'ಗಳ ನೆನಪು ಮಾಡಿಸಿದ್ದಕ್ಕೆ ಏನು ಶಿಕ್ಷೆ ಕೊಡೋಣ ಅಂತಲೂ ಯೋಚಿಸುತ್ತಿದ್ದೇನೆ.

ನನ್ನ ಹಳೇ ಕವನಗಳನ್ನೆಲ್ಲ ನೀವುಗಳು (= ಶಿವು, ಸುಶ್ರುತ, ಸಿಂಧು, ವೇಣು, ಮನಸ್ವಿನಿ, ಇತ್ಯಾದಿ) ಓದಿಕೊಂಡು ಗದ್ಯ-ಪದ್ಯ ರೂಪದಲ್ಲಿ ಬರೆಯುತ್ತಿದ್ದೀರಿ ಅನ್ನುವ ಗುಮಾನಿಯೂ ಇದೆ. ಅದಕ್ಕೇನು ಮಾಡೋದು?

sritri said...

ಶಿವು, ಸಿನಿಮಾ ಶುರುವಾಗಿ ಬಹಳ ಹೊತ್ತಾದರೂ,ಹಿರೋಯಿನ್ ಯಾರು ಅಂತಾನೆ ಗೊತ್ತಾಗದ ಪ್ರೇಕ್ಷಕನ ಪರಿಸ್ಥಿತಿ ನಮ್ಮದು. ಗುಟ್ಟು ರಟ್ಟು ಮಾಡಿ ಬೇಗ! :-))

ಮನಸ್ವಿನಿ said...

ಶಿವ್,

ಯಾರ್ರೀ ಆ ಬೆಳದಿಂಗಳ ಬಾಲೆ? ಎಷ್ಟು ದಿನ ಅಂತ ’ನಿಮ್ಮ ಹುಡುಗಿ’ ಅಂತ ಹೇಳ್ತೀರಾ? ಬೇಗ ಹೇಳಿ :)

Shiv said...

ಸುಪ್ತದೀಪ್ತಿ ಅವರೇ,

ಊರು ಸೇರಲಿಕ್ಕೆ 'ಊರು ಸೇರಿಸುವ ಚೀಟಿ ಯಾಕೆ?
ಹರಿವ ಲಹರಿಯನ್ನೇರಿ ಅಥವಾ ಪಾತರಗಿತ್ತಿ ಪಕ್ಕದ ಬೆನ್ನೇರಿ ಅದು ನೀವು ತಲುಪಿಸಬೇಕಾದ ಕಡೆ ತಲುಪಿಸುತ್ತೆ :)

ನಾನು ನಿಮ್ಮ ಎಲ್ಲಾ ಶಿಕ್ಷೆಗಳನ್ನು ನಗುನಗುತ್ತಾ ಸ್ಪೀಕರಿಸುತ್ತೇನೆ*
(*conditions apply )

ನಿಮಗೂ ಗೊತ್ತಾಗಿಬಿಡ್ತಾ ..ನಿಮ್ಮ ಕವನಗಳನ್ನು ಕಾಪಿ ಮಾಡಿ ಅದರಲ್ಲಿ ಸ್ಪಲ್ಪ ತಿರುಚಿ ಬರೀತಾ ಇದೀವಿ ಅಂತಾ !

Anveshi said...

ಶಿವ್ ಅವರೆ,
ಬೇಗ ಎಲ್ಲಾ ಚೀಟಿಗಳನ್ನೂ ಕಳಿಸಿಬಿಡಿ.... ಆsssssssss ಅಂತ ಬಾಯಿಬಿಟ್ಟು ಕಾಯ್ತಾ ಇದ್ದೀವಿ...

Shiv said...

ತ್ರಿವೇಣಿಯವರೇ,
ಪ್ರೇಕ್ಷಕರನ್ನು ಸ್ಪಲ್ಪ ಸಸ್ಪೆನ್ಸ್ ನಲ್ಲಿ ಇಡುವ ಅಂತಾ..
ಬೇಗನೆ ಹಿರೋಯಿನ್ ಯಾರು ಅಂತಾ ಗೊತ್ತಾಗುತ್ತೆ..
ಅಲ್ಲಿಯವರೆಗೆ ಇನ್ನೂ ಕೆಲವು ಕವನ ಮತ್ತೆ ಕೆಲವು ಗದ್ಯಗಳನ್ನು ಸಹಿಸಿಕೊಳ್ಳಿ :)

ಮನಸ್ವಿನಿ,
ಶೇಕ್ಸ್ ಪಿಯರ್ ಎನು ಹೇಳಿದಾನೆ ಅಂದರೆ
"What's in a name? That which we call a rose, by any other word would smell as sweet."

Shiv said...

ಅಸತ್ಯಿಗಳೇ,

ನೀವು ಮೊನ್ನೆ ತಾನೇ ರಜೆ ಚೀಟಿ ಕೊಟ್ಟು ಬೊಗಳೆಗೆ ಚಕ್ಕರ್ ಹಾಕಿ ಹೋಗಿದೀರಾ..ಆಗಲೇ ಮತ್ತೊಂದು ಚೀಟಿ ಬೇಕೇ?
ಅಥವಾ ನೀವು ಕೇಳಿದ್ದು ಪಡಿತರ ಚೀಟಿಯೇ :)

ಸುಪ್ತದೀಪ್ತಿ suptadeepti said...

ಅಸತ್ಯ ಅನ್ವೇಷಿ said...
ಶಿವ್ ಅವರೆ,
ಬೇಗ ಎಲ್ಲಾ ಚೀಟಿಗಳನ್ನೂ ಕಳಿಸಿಬಿಡಿ.... ಆsssssssss ಅಂತ ಬಾಯಿಬಿಟ್ಟು ಕಾಯ್ತಾ ಇದ್ದೀವಿ...

ಹೇ, ಅವರು ಆಕಳಿಸ್ತಿದ್ದಾರೆ, ಅವರಿಗೆ ಗೇಟ್-ಪಾಸ್ ಚೀಟಿ...!

Shiv said...

ಸುಪ್ತದೀಪ್ತಿ ಅವರೇ,

ಆಯ್ತು ಅಸತ್ಯಿಗಳಿಗೆ ಗೇಟ್-ಪಾಸ್,ಬಾಗಿಲು-ಪಾಸ್,ಕಿಟಕಿ-ಪಾಸ್ ಎಲ್ಲಾ ಕಡೆಯಿಂದ ಪಾಸ್ :)

Mahantesh said...

ಸುಪ್ತದೀಪ್ತಿ ಅವರೇ,

ಆಯ್ತು ಅಸತ್ಯಿಗಳಿಗೆ ಗೇಟ್-ಪಾಸ್,ಬಾಗಿಲು-ಪಾಸ್,ಕಿಟಕಿ-ಪಾಸ್ ಎಲ್ಲಾ ಕಡೆಯಿಂದ ಪಾಸ್ :)
enri asatyigaLaganna elli hogare kaLasata idira? avarilla aMdre bogaLe biDoraru?
Shiv,
kanashugarana kanassu , manassu , kavana lekhana tumba chennagide...
kelave dina noMtara,
kuch na kaho...
kuch bhi naa kaho.. :)-

Sushrutha Dodderi said...

ಏನದು ಪಾಸು ಗೀಸು ಅಂತ ಗಲಾಟಿ? ರೀ ಶಿವು, ನೀವು ಹಿಂಗೆಲ್ಲ ಏನೇನೋ ಹೇಳ್ತಾ ನಮ್ಮ ಹಾದಿ ತಪ್ಪಿಸ್ಬೇಡಿ. ನಿಮ್ಮಿಂದ ಇಷ್ಟ್ ಚಂದ ಪತ್ರಗಳನ್ನ ಬರೆಸ್ಕೊಳ್ತಿರೋ ಪೋರಿ ಯಾರು ಅಂತ ಬೇಗ ಹೇಳ್ಬಿಡಿ. ಅದಿಲ್ಲಾಂದ್ರೆ ಚನಾಗಿರಿಲ್ಲ.. :)

Shiv said...

ಮಹಾಂತೇಶ್,
ಧನ್ಯವಾದಗಳು !
ಅದು ಹಾಗೆ ಅಲ್ವಾ... ಮೊದಲು ಕುಚ್ ಕುಚ್ ಹೋತಾ ನಂತರ ಕುಚ್ ನಾ ಕಹೋ :)

ಸುಶ್ರುತ,
ಹಾದಿ ತಪ್ಪಸೋದಾ !?
ನೀವು ಯಾವಾಗ ಹಾದಿಯಲ್ಲಿ ಇದ್ದಿರಿ :)
ಆಟೋಗ್ರಾಪ್ ಹುಡುಗಿ, ಹಸು ಹೆಸರಿನ ಹುಡುಗಿ...ಹಾಗೇ ಹೀಗೆ ಅಂತಾ ಪತ್ರ ಬರ್ಕೊಂಡು ಈಗ ನಮ್ಮ ಮೇಲೆ ಅಪವಾದ :D

ಹೆಸರು..
ಈ ಮೇಲೆ ಕಾಮೇಂಟಿಸಿದ ಮನಸ್ವಿನಿ ಅವರಿಗೆ ಅದರ ಬಗ್ಗೆ ಹೇಳಿದೀನಿ :)

Jagali bhaagavata said...

ಶಿವು,
ಈ ಥರದ ಲೇಖನಗಳನ್ನು ಬರೆಯುವ ನಿಮ್ಮ ಮೇಲೆ 'ಮನಶಾಂತಿ ನಷ್ಟ' ಮೊಕದ್ದಮೆ ಹೂಡಬೇಕಾಗುತ್ತದೆ.
'ಅಖಿಲ ಭಾರತ ಏಕಾಂಗಿ ವೀರರ ಸಂಘ'ದ ವತಿಯಿಂದ ಪ್ರತಿಭಟನಾ ರ್ಯಾಲಿಯೊಂದನ್ನು ಹಮ್ಮಿಕೊಳ್ಳಬೇಕಾಗುತ್ತದೆ:-))

mouna said...

very nice, and congrats once again! :)

mouna said...

very nice, and congrats once again! :)

Shiv said...

ಭಾಗವತರೇ,

ನಿಮಗೆ ಮನಶಾಂತಿ ನಷ್ಟವಾಗಿದ್ದು ಸುಬ್ಬಭಟ್ಟರ ಅಥವಾ ಶ್ಯಾನಭೋಗರ ಮಗಳಿಂದಲ್ಲವೇ :)

ಎಕಾಂಗಿ ವೀರರ ಪ್ರತಿಭಟನಾ ರ್ಯಾಲಿಯಲ್ಲಿ ನಿಮಗೆ ಎಕಾಂಗಿ ವೀರೆಯರು ಸಿಗಬಹುದು.ಒಳ್ಳೆಯದಾಗಲಿ :)

ಮೌನ,
ಧನ್ಯವಾದಗಳು !

Anveshi said...

ಎಲ್ಲಾ ಸೇರ್ಕೊಂಡು ನಮಗೇ ಗೇಟ್ ಪಾಸ್ ನೀಡುವ ಸಂಚು ಹೂಡ್ತಾ ಇದ್ದೀರಾ ಅಂತ ತಿಳಿದು ಸಂತೋಷವಾಯಿತು.
ವಿಶ್ವಕಪ್‌ಗೆ ಯಾರಾದ್ರೂ ಪಾಸ್ ಕೊಡ್ತಾರಾ ಅಂತ ಕಾಯ್ತಾ ಇದ್ದೆವು. ಈಗ ಟೀಂಇಂಡಿಯಾ ತಾನಾಗಿಯೇ ಗೇಟ್ ಪಾಸ್ ತೆಗೆದುಕೊಂಡಿದೆ. ಹಾಗಾಗಿ ಇನ್ನೇನೂ ಪಾಸ್ ನಮಗೆ ಬೇಡ.

ಕುಚ್ ಕುಚ್ ಹೋತಾ ಇರೋ ಮಹಾಂತೇಶರಾದರೂ ನಮ್ಮ ರಕ್ಷಣೆಗಿದ್ದಾರೆ, ಅಷ್ಟೇ ಸಾಕು.

ಸುಪ್ತ ದೀಪ್ತಿಯವರೆ,
ನೀವು ನಮ್ಮನ್ನು ಎಲ್ಲಾ ಕಡೆಯಿಂದ ಪಾಸ್ ಮಾಡಿಸಿದ್ರೆ ನಾವೇನು ಸುಮ್ನೆ ಕುಳಿತಿರ್ತೀವಿ ಅಂತ ತಿಳ್ಕೊಂಡ್ರಾ.... ಯಾವ ಕಡೆ ಪಾಸ್ ಸಿಗುತ್ತೆ, ಆ ಕಡೆಯಿಂದ ಓಡಿ ಹೋಗ್ತೀವಿ!!!!

Shiv said...

ಅಸತ್ಯಿಗಳೇ,

ನೀವು ಓಡಿ ಹೋದರು ಎಲ್ಲಿಗೆ ಹೋಗ್ತೀರಾ?
ಬೊಗಳೆ ಕಚೇರಿಗೆ ಮತ್ತೆ ಬಂದೇ ಬರ್ತಿರಾ ಅಂತಾ ಗೊತ್ತು :)

ಚಪ್ಪಲ್ ಹಸ್ತ ಡ್ರಾವಿಡ್ ಮೇಲೆ ಇದ್ದಂತೆ ಕುಚ್ ಕುಚ್ ಮಹಾಂತೇಶ್ ಅಭಯ ಹಸ್ತ ನಿಮ್ಮ ಮೇಲೆ ಇದೆಯೇ ಅನ್ನುವ ಗುಮಾನಿ ??!!

ಶ್ರೀನಿಧಿ.ಡಿ.ಎಸ್ said...

ಅಲ್ಲಾ ಶಿವ್,
ಯಾಕ್ರೀ ಇಂತಾ ಲೆಟ್ರ್ ಬಗ್ಗೆ ಎಲ್ಲಾ ಬರ್ದು ಹೊಟ್ಟೆರಿಸ್ತೀರಾ?!
ನಾನು ನನ್ನ ಹುಡ್ಗೀನ ತರಾಟೆಗೆ ತಗೋಬೇಕು ಈಗ,ಪತ್ರ ಬರಿಯೇ ಅಂತ!

Shiv said...

ಶ್ರೀನಿಧಿಯವರೇ,
ಅಯ್ಯೋ ಇಲ್ಲಾರೀ..ಹೊಟ್ಟೆ ಉರಿಸಿದ್ದು ನಾನಲ್ಲ
ಅದು ಬಹುಷಃ ವಿಶ್ವಕಪ್ ಪರಿಣಾಮ ಇರಬಹುದು :)

ತರಾಟೆ ತಗೊಳ್ಳಿ ತಗೊಳ್ಳಿ..ಪತ್ರ ಬರಿಲಿಲ್ಲ ಅಂದ್ರೆ ಹೇಗೆ :D

ಸುಪ್ತದೀಪ್ತಿ suptadeepti said...

ಅನ್ವೇಷಿಗಳೇ, ನಿಮಗೆ ಗೇಟ್ ಪಾಸ್ ಮಾತ್ರ ಕೊಡಲು ನಾನು ಕೇಳಿಕೊಂಡದ್ದು; ಶಿವು, ಸಿಕ್ಕಿದ್ದೇ ಛಾನ್ಸ್ ಅಂತ ನಿಮಗೆ ಎಲ್ಲಾ ಕಡೆಯಿಂದ ಪಾಸ್ ಕೊಡಲು ಹೊರಟಿದ್ದಾರೆ. ನನ್ನ ಕೇಳಿಕೆಗೂ (ನನಗೆ ಮಾತ್ರ ಅಲ್ಲ!!) ಇಷ್ಟು weight ಇದೆ ಅಂತ ನನಗೆ ಇಲ್ಲೇ ಗೊತ್ತಾಗಿದ್ದು. ಅಂಥ ಅವಕಾಶ ಕೊಟ್ಟದ್ದಕ್ಕಾಗಿ ನಿಮಗೂ ಶಿವುಗೂ ಧನ್ಯವಾದಗಳು.

Shiv said...

ಸುಪ್ತದೀಪ್ತಿಯವರೇ,

ಅಸತ್ಯಿಗಳು ಬೊಗಳೆ ಬಿಟ್ಟು ಬಿಟ್ಟು ಫೇಲ್ ಆಗ್ತಾ ಇದ್ದರು..ಅದಕ್ಕೆ ಅವರನ್ನು ಎಲ್ಲಾ ಕಡೆಯಿಂದ ಪಾಸ್ ಮಾಡೋಣ ಅಂತಾ..

ಅಯ್ಯೋ..ನಿಮ್ಮ ಕೋರಿಯಲ್ಲಿದ ಇದ್ದ ಎಲ್ಲರನ್ನೂ ಪಾಸ್ ಮಾಡುವ ಒಳ್ಳೆ ವಿಚಾರಗಳನ್ನು ಹೇಗೆ ಇಲ್ಲವೆನ್ನುವುದು :)

Raghavendra D R said...

Shiv avare, as always...manoharavaadha lekhana.

As an aside, eno ri, nangu sweet dreams andhre enu antha gothilla.. niddhe madidhre magandhu next day beligge 9 ganTe ge ecchhara! kanasu illa enu illa! :D

Shiv said...

ರಘು,
ತುಂಬಾ ಧನ್ಯವಾದಗಳು !!

ಹಾಹಾ..೯ ಗಂಟೆಗೆ ಎಚ್ಚರವಾಗುತ್ತಾ..ನಿಮಷ್ಟು ಸುಖಿಗಳು ಇಲ್ಲ..ಆದರೂ ಇನ್ನು ಎಷ್ಟು ದಿವಸ ಅಂತಾ ನೆಮ್ಮದಿಯಾಗಿ ನಿದ್ದೆ ಮಾಡ್ತೀರಾ..ನಿಮ್ಮ ನಿದ್ದೆ ನಿಮ್ಮ ಚೋರಿ ಚೋರಿ ಮಾಡುವರರೆಗೆ..ಅಲ್ಲಿಯವರೆಗೆ ೯ ಗಂಟೆಗೆ ಆರಾಮಾಗಿ ಏಳಿ ಪರವಾಗಿಲ್ಲ

Sree said...

appaaa paatharagitthige colourO colouru! sweetdreams andre eegin definition Enante?;)
nice one:)
but thumbaa hoTTe ursbEdree, swalpa moderation irli;)

Shiv said...

ಶ್ರೀ,

ಪಾತರಗಿತ್ತಿ ಯಾವಗಲೂ ಕಲರ್‍ಪುಲ್ಲೇ !
ಅದಕ್ಕೆ ಅದನ್ನ ಪಾತರಗಿತ್ತಿ ಅನ್ನೋದು ಅಲ್ವಾ :)

ಹೊಟ್ಟೆ ಉರಿಸಿದ್ದಾ..ಖಂಡಿತಾ ಇಲ್ಲಾರೀ..
ಮೋಡರೇಷ್..ಕೆಲವೊಂದು ಸಲ ಕ್ಯಾ ಕರೇ..ಕಂಟ್ರೋಲ್ ಹೀ ನಹೀ ಹೋತಾ :)

ಸುಪ್ತದೀಪ್ತಿ suptadeepti said...

ವಿರಹದಲ್ಲಿ moderation ಸಾಧ್ಯವಾ? ನನಗೆ ಗೊತ್ತೇ ಇರಲಿಲ್ಲ!!

Shree said...

ಯಾರ ಹೊಟ್ಟೆ ಉರೀತೋ ಬಿಡ್ತೋ... ನೀವು ಮಾತ್ರ ತಣ್ಣಗಿರಿ ಶಿವ್.. :) ಎಲ್ರೂ ಆಗ್ಲೆ ಹೇಳ್ಬೇಕಾದ್ದೆಲ್ಲ ಹೇಳ್ಬಿಟ್ಟಿದಾರೆ, ಸ್ವಲ್ಪ ಲೇಟ್ ಆಯ್ತು ನಾನು ಇಲ್ಲಿ ಬರೋದು.. 'ಬರಹ ಚೆನ್ನಾಗಿದೆ' ಅ೦ತ ಮಾಮೂಲಾಗಿ ಉದುರಿಸೋ ಬದಲು ತೆಪ್ಪಗಿರೋದೇ ವಾಸಿ... :-]

Shiv said...

ಸುಪ್ರದೀಪ್ತಿಯವರೇ,
ಶ್ರೀಮಾತಾ ಅವರನ್ನು ಮೋಡರೇಷನ್ ಬಗ್ಗೆ ಕೇಳ್ತೀನಿ :)

ಶ್ರೀ,
ವಂದನೆಗಳು.ನೀವಾದರೂ ನನ್ನ ಬೆಂಬಲಕ್ಕೆ ಇದಿರಲ್ಲ..
ಎಲ್ರೂ ನೋಟಿಸ್,ಮೊಕದ್ದಮೆ,ರ್ಯಾಲಿ,ಹೊಟ್ಟೆಯುರಿ ..ಅಂತಿದಾರೆ :)

ಸುಪ್ತದೀಪ್ತಿ suptadeepti said...

ಏನಪ್ಪಾ? ಇನ್ನೂ ಸವಿಗನಸಿನಿಂದ ಹೊರಗೆ ಬಂದೇ ಇಲ್ವಾ? ಎಷ್ಟು ದಿನಾ ಅಂತ ಅದೇ ಕನಸು ಕಾಣ್ತೀರಿ, ಹೊಸಗನಸನ್ನೂ ಸ್ವಲ್ಪ ಹರಿಯಬಿಡಿ. ಮೋಡರೇಷನ್ ಮಾಡ್ತಿದ್ದೀರ ಹೇಗೆ ಮತ್ತೆ?

Shiv said...

ಸುಪ್ತದೀಪ್ತಿಯವರೇ,
ಮೋಡರೇಷನ್ ಅಲ್ಲಾ..ಸ್ಪಲ್ಪ 'ಮಳೆ'ಯಲ್ಲಿ ನೆನೆಯುತ್ತಿದ್ದೆ..

Sree said...

clarificationnu:
viraha Enu, yaava exerienceannU moderate maaDOkaagalla, but expression na swalpa moderate maaDdre bEre baDapaayigaLa hoTTe ursOdu thappisbahudu anta hELiddu ashTe;)) but paathargitti colour irOdE alli, so colouU moderationnU balance maaDodu kashta biDi;)

Shiv said...

ಶ್ರೀ,

ನಿಮ್ಮ ಸ್ಪಷ್ಟೀಕರಣಕ್ಕೆ ವಂದನೆಗಳು..
ನಮ್ಮ ಕಷ್ಟ ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು :)

Unknown said...

ಸ್ವಾಮೀ ಇದು ನನಗೆ ನನ್ನ ಲೋಕಕ್ಕೆ ಕರೆದು ಹೋಯಿತು., ತುಂಬಾ ಚೆನ್ನಾಗಿ ಬಂದಿದೆ.