Sunday, May 10, 2009

ಶರಧಿ

ನೋಟಕ್ಕೆ ಮೀರಿದ ಆಗಾಧತೆ
ವ್ಯಾಪ್ತಿಗೆ ನಿಲುಕದ ಆಳ
ಸುಂದರ ಶಾಂತ ಆ ಶರಧಿ

ಆ ಶರಧಿಯೇ ಆದವರು ನೀವು

ನೋಡಲು ಅದೆಷ್ಟು ಶಾಂತ
ಆದರೆ ತಳದಲಿ ಅಡಗಿಸಿಕೊಂಡಿದ್ದೀರೋ
ಅದೆಷ್ಟು ಕಂಬನಿ ನೋವುಗಳ

ಆ ಬಿರುಗಾಳಿ ಮಳೆಯ ನಡುವೆಯೂ
ಶರದಿಯಲಿ ಮೂಡಿ ಬರುವವಂತೆ
ಅನ್ಯರ್ಘ ಮುತ್ತು-ಹವಳಗಳು
ಮೂಡಿಬಂದಿವೆ ನಿಮ್ಮಿಂದ ಎರಡು ರತ್ನಗಳು

ಶರಧಿಗೆ ಈಗ ಸುಕಾಲ
ಮಬ್ಬು ಹರಿದು ಸೊಗಸು ಮೂಡುವ ಕಾಲ
ಕವಿದ ಮೋಡಗಳಿಂದಾಚೆ ಬೆಳ್ಳಿ ಬೆಳಕು
ತೀರದಲಿ ಬಂಡೆಗಳ ನಡುವೆ ಅರಳಿದ ಶಿಲ್ಪ

ಆ ಶರಧಿಯ ಪ್ರೀತಿಯ ತೀರದಲಿ
ನೆಲೆ ನಿಂತವರು ನಾವು
ಕೋರುವೆವು ನಿಮಗೆ
ಜನ್ಮದ ದಿನದ ಶುಭಾಶಯಗಳ
ಬೇಡುವೆವು ಪ್ರೀತಿ ಹಾರೈಕೆಗಳ

(ಎಲ್ಲ ಅಮ್ಮಂದಿರಿಗೆ ಶುಭಾಶಯಗಳು)

5 comments:

sunaath said...

ಅದೆಷ್ಟು ದಿನಗಳ ನಂತರ ನಿಮ್ಮ ಲೇಖನ ನೋಡುತ್ತಿರುವೆ, ಶಿವಶಂಕರ! ತಾಯಂದಿರ ದಿನದಂದು ನೀವು ಸೊಗಸಾದ ತಾಯಿ-ಕಾಣಿಕೆಯೊಂದಿಗೆ ಮರಳಿರುವಿರಿ. ಅಭಿನಂದನೆಗಳು!

Anonymous said...

ತಾಯಂದಿರಿಗೆ ಶುಭ ಹಾರೈಸಿದ ಕವನ-ಕಾಣಿಕೆ ಸೊಗಸಾಗಿದೆ, ಶಿವು. ಎಲ್ಲ ತಾಯಂದಿರಿಗೂ ನಮನಗಳು.
-ಜ್ಯೋತಿ.

Shiv said...

ಸುನಾಥ್,ಜ್ಯೋತಿ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

mouna said...

mother'd day sandharbdalli ondu oLLe kavithe, nice, nice.
hegiddiri??

Shiv said...

ಮೌನ,

ವಂದನೆಗಳು..
ಎನ್ರೀ ಈ ಕಡೆ ಬಂದೇ ಇಲ್ಲ !