Friday, June 02, 2006

ಪಾತರಗಿತ್ತಿಯ ಮೊದಲ ಮಾತು..



ಅತ್ಮೀಯ ಚಿಟ್ಟೆಗಳಲ್ಲಿ,

ನನ್ನ ಜೇನುಭರಿತ ನಮಸ್ತೆ !

ಕನ್ನಡದಲ್ಲಿ ಬ್ಲಾಗ್‍ಸಿಬೇಕೆಂದು ಅಂದುಕೊಂಡ ಮೇಲೆ ಅದೆಷ್ಟು ಹೂವುಗಳು ಅರಳಿ ಕಾಯಿ ಅದವೋ ನಾ ಅರಿಯೆ.ಕನ್ನಡ ಬ್ಲಾಗ್ ಶುರುಮಾಡುವ ತುಡಿತ ಮಿತಿ ಮೀರಿ ಕೊನೆಗೂ ಬ್ಲಾಗೋದಯವಾಯಿತು.

ಬ್ಲಾಗ್‍ಗೆ ಹೆಸರಿಡುವಾಗಲೇ ಗೊತ್ತಾಗಿದ್ದು ಹುಟ್ಟಿದ ಕೂಸಿಗೆ ಹೆಸರಿಡುವುದು ಎಷ್ಟು ಕಷ್ಟ ಅಂತ. ಮಗುವಾಗಿದರೂ ಹೆಸರಿಡಲು ಒಂದು ನಕ್ಷತ್ರ-ಜನ್ಮ ಸಮಯ ಎನೋ ಒಂದು ಇರುತ್ತೆ, ಬ್ಲಾಗ್‍ಗೆ ಎಲ್ಲಿಂದ ತರೋದು ಅವೆಲ್ಲ? ಸಾಕಷ್ಟು ಮನಮಂಥನದ ನಂತರ 'ಪಾತರಗಿತ್ತಿ ಪಕ್ಕ' ಅಂತಾ ಹೆಸರಿಸಿದೆ.

ಯಾಕೆ ಆ ಹೆಸರು ಅಂತಾ ಕೇಳತ್ತಿರಾ?

ಪಾತರಗಿತ್ತಿ ಅಥವಾ ಚಿಟ್ಟೆ ಕಂಡ್ರೆ ಯಾರಿಗೇ ಇಷ್ಟ ಇಲ್ಲಾ ಹೇಳಿ. ಆ ಪಾತರಗಿತ್ತಿ ತನ್ನ ಚೆಲುವ ರೆಕ್ಕೆ ಬೀಸಿಕೊಂಡು ಗಿಡದಿಂದ ಗಿಡಕ್ಕೆ ಹೂವಿಂದ ಹೂವಿಗೆ ಹಾರೋದ ನೋಡೋದೆ ಚೆಂದ.ಆ ಪಾತರಗಿತ್ತಿ ತರ ನಾನು ಇದ್ದರೆ ಹೇಗೆ ಎಂಬ ಮನದಾಳದ ಆಸೆ. ಪಾತರಗಿತ್ತಿ ತರ ನಾನು ಬ್ಲಾಗ್‍ನಲ್ಲಿ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರಿ ಅದರ ಸವಿ ಉಂಡು ಉಣಬಡಿಸುವ ಇಚ್ಚೆ.ಆಗ ನೆನಪಾದದ್ದೆ ಬೇಂದ್ರ ಅಜ್ಜನ 'ಪಾತರಗಿತ್ತಿ ಪಕ್ಕ ನೋಡಿದೇನಾ ' ಕವಿತೆ.

ಹಾಂ...ಕನ್ನಡ ಬ್ಲಾಗ್‍ ಬರಿಬೇಕು ಎಂದು ನಾನು ಯೋಚನೆ ಮಾಡುತ್ತಿರುವಾಗಲೇ , 'ನೀವು ಕನ್ನಡದಲ್ಲಿ ಯಾಕೇ ಬರಿಬಾರದು ರೀ....' ಅಂತ ಉರಿಯುವ ಯೋಚನಾಗ್ನಿಗೆ ತುಪ್ಪ ಸುರಿದವರು ಗೆಳತಿ ಶ್ರೀಮಾತಾ.ಹಾಗೆಯೇ 'ಮಾವಿನಯನಸ' ಓದಿದಾಗಲೆಲ್ಲ ನಾನು ಈ ರೀತಿ ಕನ್ನಡದಲ್ಲಿ ಬರೆದರೆ ಹೇಗೆ ಅಂತಾ ಯೋಚನೆಗೀಡು ಮಾಡಿದವರು ಮಿತ್ರರಾದ ತಳುಕು ಶ್ರೀನಿವಾಸ್. ಈ ಇಬ್ಬರು ಸನ್ಮಿತ್ರರಿಗೆ ಪಾತರಗಿತ್ತಿವತಿಯಿಂದ ಸವಿಸವಿ ವಂದನೆಗಳು.

ಆಂರ್ತಜಾಲದಲ್ಲಿರುವ ಕನ್ನಡದ ಚಿಟ್ಟೆಗಳಿಗೆ 'ಪಾತರಗಿತ್ತಿ ಪಕ್ಕ' ಕ್ಕೆ ಸ್ವಾಗತ !

9 comments:

bhadra said...

ಕನ್ನಡದಲ್ಲಿ ಬ್ಲಾಗಿಸಿದ್ದು ಒಳ್ಳೆಯ ಸುದ್ದಿ. ಪಾತರಗಿತ್ತಿ ಬಣ್ಣ ಬಣ್ಣಗಳನ್ನು ತುಂಬಿಕೊಂಡು ಸುಂದರವಾಗಿದೆ. ನಿಮ್ಮ ಪ್ರವಾಸದ ಸಚಿತ್ರ ಲೇಖನವನ್ನು ಇರಿಸಿದರೆ ಇನ್ನೂ ಚೆನ್ನಾಗಿ ಕಾಣುತ್ತದೆ.

ಶ್ರೀಮಾತಾ ಅವರು ಕಾಣದ ಕೈ ಇದ್ದಂತೆ. ಎಷ್ಟೋ ಜನಗಳ ಕಣ್ಣಿಗೆ ಕಾಣದೆಯೇ ಸ್ಫೂರ್ತಿಯನ್ನು ನೀಡುತ್ತಿದ್ದಾರೆ.

ನಾನಿನ್ನು ಪಾತರಗಿತ್ತಿಯ ನಿತ್ಯದರ್ಶಕ.

Shiv said...

ತವಿಶ್ರೀ ಅವರೇ,
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.
ನಿಮ್ಮ ಸಲಹೆ-ವಿಚಾರಧಾರೆ ಪಾತರಗಿತ್ತಿಯ ಕಡೆ ಹೀಗೆ ಇರಲಿ.

Sree said...

hey! ಚೆನ್ನಾಗಿದೆ ರೀ ಪಾತರಗಿತ್ತಿಯ ಮೊದಲ flight!:) ನಿಮ್ಮ mail ಸರಿಯಾಗಿ display ಆಗಿರ್ಲಿಲ್ಲ - ಅದಕ್ಕೇ ಇಲ್ಲಿ ಬರೋದು ತಡವಾಯ್ತು...

ಹೆಸರಿಡೋ ಕಷ್ಟದ್ ಬಗ್ಗೆ ಚೆನ್ನಾಗ್ ಬರ್ದಿದೀರ! ನನ್ನ್ ಬ್ಲಾಗ್ ಷುರು ಮಾಡ್ದಾಗ್ಲೂ ಹುಡುಕಿ ತಡಕಿ ಹೆಸರು finalise ಮಾಡೋ ಹೊತ್ತಿಗೆ ಸಾಕಾಗಿತ್ತು!:)

ನನಗೆ credit ಬೇರೆ ಕೊಟ್ಟಿದೀರ! dv'ಗಳು:P nice start, ಹೀಗೇ ಬರೀತಿರಿ, ನನ್ನ್ ಥರ ಸೋಮಾರಿ ಆಗ್ಬೇಡಿ:D

Shiv said...

ಧನ್ಯವಾದಗಳು ಶ್ರೀ,

ಯಾರೀ ಹೇಳಿದ್ದು 'what is there in name' ಅಂತಾ :) ಅಲ್ವೇನ್ರಿ..

ನಮೆಗೆಲ್ಲ ಬರೀರಿ ಅಂತಾ ಹೇಳಿ, ನೀವು ಏನೂ ಬರೀತಿಲ್ಲ..ಬೇಕೇ ಬೇಕು ಒಂದು ಹೊಸ ಲೇಖನ..

ತಲೆಹರಟೆ said...

ಬಹಳ ಚೆನ್ನಾಗಿದೆ ನಿಮ್ಮ ಬ್ಲಾಗ್. ಈ ಬ್ಲಾಗ್ ನಿಂದಾಗಿ ಕನ್ನಡ ಬ್ಲಾಗ್ ಪ್ರಪಂಚ ಇನ್ನಷ್ಟು ಶ್ರೀಮಂತವಾಗಿದೆ.

Shiv said...

ಪ್ರಿಯ ಓಲೆಗರಿ ಅವರೇ,

ನಿಮ್ಮ ಮೆಚ್ಚಿನ ನುಡಿಗಳಿಗೆ ವಂದನೆಗಳು.
ಅದು ದೊಡ್ಡ ಮಾತು..ನಾನಿನ್ನು ಕನ್ನಡಬ್ಲಾಗ್‍ನ ಹಸುಗೂಸು.

Anonymous said...

ಚಿಟ್ಟೆಯ ರೆಕ್ಕೆಯ ಚಿತ್ತಾರಲೋಕದ
ರೂಪ ತಳೆವ ಬಯಕೆಯಿಂದಲಿ
ಸವಿಯ ಸವಿಯುತ ಉಂಡು ಉಣಿಸಲು
ಕರೆವ ಪಾತರಗಿತ್ತಿಗೆ..
ವಂದನೆ ಅಭಿನಂದನೆ

- ಕನ್ನಡಿಗ

Shiv said...

ಅನಾಮಿಕ ಕನ್ನಡಿಗ ಅವರಿಗೆ,

ಪಾತರಗಿತ್ತಿಗೆ ಭೇಟಿ ನೀಡಿದಕ್ಕೆ ವಂದನೆಗಳು.
ಚಿಟ್ಟೆಯ ಚಿತ್ತಾರ ವರ್ಣಿಸುತ್ತಿರುವ ನಿಮ್ಮ ಪರಿ ನೋಡಿದರೆ ತಾವು ಯಾರೋ ಕವಿ ಹೄದಯಿಗಳೇ ಇರಬೇಕು..

ಹೀಗೆ ಇರಲಿ ನಿಮ್ಮ ಪ್ರೀತಿ

ಮನ | Mana said...

ನಮಸ್ಕಾರ ಶಿವ್,

ನಿಮ್ಮ ಬ್ಲಾಗಿನ ಲೇಖನದಲ್ಲಿನ ಶೀರ್ಷಿಕಗಳು ಮತ್ತು ಮುಖ್ಯವಾಗಿ ಕೆಲವು ಲೇಖನಗಳು (ಉದಾ: ಇದೇ ಲೇಖನ: ಪಾತರಗಿತ್ತಿಯ ಮೊದಲ ಮಾತು) firefox ಬ್ರೌಸರಿನಲ್ಲಿ ಸರಿಯಾಗಿ display ಆಗುತ್ತಿಲ್ಲ. ಇದು ಕನ್ನಡ ಬ್ಲಾಗುಗಳಲ್ಲಿನ ಒಂದು ಕಾಮನ್ ಸಮಸ್ಯೆ.

ಈ ಸಮಸ್ಯೆ ಬಗ್ಗೆ, ಮತ್ತು ಇದರ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
http://manadamaatu.blogspot.com

ನಿಮಗೂ ಉಪಯೋಗವಾಗಬಹುದೆಂದು ಭಾವಿಸುವೆ.

ಶುಭವಾಗಲಿ,
ಮನ