Saturday, November 04, 2006

ಸವಿಹೃದಯಕ್ಕೊಂದು ಓಲೆ..

ಪ್ರೀತಿಯ ಹೃದಯವೇ,

ದೂರವಾಣಿಯಲ್ಲಿ ನಿಮ್ಮ ಧ್ವನಿ ಕೇಳಿದಾಗಲೆಲ್ಲಾ ನನ್ನ ಮನಕ್ಕೆ ಎನೋ ಒಂದು ಸಮಾಧಾನ..

ನಾನು ಈಡೀ ದಿನ ಬದುಕೋದೇ ನಿಮ್ಮೊಡೆನೆ ಮಾತಾಡುವ ಆ ನಿಮಿಷಗಳಿಗೆ ಅನಿಸುತ್ತೆ.ಕರೆ ಮಾಡಿದಾಗ ಅಲ್ಲಿ ರಿಂಗ್ ಆಗ್ತಾ ಇದ್ದರು ಕರೆ ಎತ್ತಲಿಲ್ಲ ಅಂದಾಗ ಆಗುವ ಮನಸಿನ ತಳಮಳ ನಿಮಗೆ ಗೊತ್ತಾ?ನಿಮ್ಮ ಧ್ವನಿ ಕಿವಿಗೆ ಹರಿದು ಅಲ್ಲಿಂದ ನನ್ನ ಮನಕ್ಕೆ ಮುಟ್ಟಿದಾಗಲೇ ಅದೆಲ್ಲಾ ತಳಮಳಕ್ಕೆ ಒಂದು ಅಲ್ಪವಿರಾಮ..

ಮಾತಿನ ನಡುವೆ ಅರಳುವ ನಿಮ್ಮ ನಗೆ ಎಂಬ ಮಲ್ಲಿಗೆಯನ್ನು ಹಾಗೇ ಹೆಕ್ಕಿ ತೆಗೆದು ಜೋಪಾನವಾಗಿಡುತ್ತೇನೆ.ಆ ನಗೆ ಮಲ್ಲಿಗೆಯ, ಮುದ್ದು ಹುಡುಗಿಯ ನೆನಪೇ 'ನಾಳೆ' ಎನ್ನುವ ನದಿ ದಾಟಲು ದೋಣಿ..

ಇವತ್ತು ಎನಾಯಿತು ಗೊತ್ತಾ..೨ ತಿಂಗಳ ನಂತರ ನನ್ನ ಕಾರ್ ಹೊರತೆಗೆದಿದ್ದೆ. ಅದರೆ ಮೇಲೆ ಒಂದು ರಾಶಿ ದೂಳು. ಪರೀಕ್ಷೆಗಿಂತ ಮುಂಚೆ ತೆಗೆದು ನೋಡಿರದ ಪುಸ್ತಕಗಳ ಮೇಲೆ ಇರುತ್ತಲ್ವಾ ಅಷ್ಟು ದೂಳು! ಕಾರ್ ಒಂದು ಹಂತಕ್ಕೆ ಶುಭ್ರಗೊಳಿಸಿ, ಕಾರಿನಲ್ಲಿ ಕೂತರೆ, ನನ್ನ ಪಕ್ಕದ ಸೀಟು ನನಗೆ ಒಂದು ಸ್ಮೈಲ್ ಕೊಡಬೇಕಾ ! "ಯಾಕೇ ತುಂಬಾ ಖುಷಿಯಾಗಿದ್ದಿಯಾ" ಅಂತಾ ಕೇಳಿದರೆ ಎನಂತೂ ಗೊತ್ತಾ ಆ ಸೀಟ್?? "ಎನೋ ವಿಷಯ ಕೇಳಿದೆ..ನಮ್ಮ ಕಾರ್‍ನಲ್ಲಿ ನನ್ನ ಸೀಟ್‍ನಲ್ಲಿ ಬೇಗನೇ ನಿಮ್ಮವರು ಬರ್ತಾ ಇದ್ದಾರಂತೆ..ಹೌದಾ?". ಆ ತರಲೆ ಸೀಟ್‍ಗೆ ಒಂದು ಮುದ್ದು ಗುದ್ದು ಕೊಟ್ಟು ನಕ್ಕೆ ನಾನು..

ಅಫೀಸ್‍ನಲ್ಲಿದ್ದಾಗ ಅದು ಯಾವ ಯಾವ ಕ್ಷಣದಲ್ಲಿ ಕಣ್ಣ್ ಮುಂದೆ ಬಂದು ನಿಂತುಬಿಡ್ತೀಯಾ ನೀನು ! ಹೊತ್ತು ಗೊತ್ತು ಒಂದು ಇಲ್ಲಾ ! ಇವತ್ತು ಅದೇವಾದೋ ಮೀಟಿಂಗ್ ಮಧ್ಯೆದಲ್ಲಿ ತಮ್ಮ ಪ್ರವೇಶ ಆಗಬೇಕಾ..ಯಾವುದೋ ನೆನಪು..ಮುಖದಲ್ಲಿ ಮಿಂಚಿ ಮಾಯವಾದ ಒಂದು ಮಂದಹಾಸ.ಪಾಪ, ಅಲ್ಲಿ ಮೀಟಿಂಗ್‍ನಲ್ಲಿದವರಿಗೆ ನಾನು ಯಾಕೇ ಸುಮ್ಮ ಸುಮ್ಮ್ನೆ ನಗ್ತಾ ಇದ್ದೀನಿ ಅಂತಾ ತಲೆಬುಡ ಅರ್ಥ ಆಗಿಲಿಲ್ಲ !ಇನ್ನೂ ಅಫೀಸ್‍ನಲ್ಲಿ ನನ್ನ ಗೆಳಯರದು ಮುಗಿಯದ ಪ್ರಶ್ನೆಗಳು..ಅವರಿಗೆ ನಿನ್ನ ಬಗ್ಗೆ ಹೇಳ್ತಾ ಹೇಳ್ತಾ ಮತ್ತೆ ಕಳೆದುಹೋಗಿಬಿಡ್ತೀನಿ..

ಇನ್ನು ಮನೆಗೆ ಬಂದರೆ ಅಲ್ಲಿ ನಿಮ್ಮ ನೆನಪು ಫುಲ್‍ಟೈಮ್ ಹಾಜರ್. ಲ್ಯಾಪ್‍ಟಾಪ್ ಹೊರ ತೆಗೆದರೆ ಸಾಕು..ಕೈಗಳು ಅಲ್ಲಿಂದ ನಿನ್ನ ಪೋಟೋ ಅಲ್ಬಮ್ ತೆಕೊಂಡು ಕೂತು ಬಿಡುತ್ತೆ. ಬೆರಳು ನಿಮಗೆ ತುಂಬಾ ಇಷ್ಟವಾದ 'ಝರಾ ಝರಾ ಬೇಹಕ್ತಾ ಹೈ' ಹಾಡು ಹಾಕಿಬಿಡುತ್ತೆ. ಅಮೇಲೆ ನಾನು ಸಂಪೂರ್ಣನಾಗಿ ನಿಮ್ಮ ನೆನಪಿನಾಂಗಳದಲ್ಲಿ ಕಾಣೆಯಾಗಿಬಿಡುತ್ತೇನೆ.

ಒಂದೊಂದು ಸಲ ಅನಿಸುತ್ತೆ, ನನ್ನ-ನಿಮ್ಮ ನಡುವೆ ಈ ವೀಸಾ-ಪಾಸ್‍ಪೋರ್ಟ್ ಅನ್ನುವ ಬೇಲಿ ಏಕೇ ಅಂತಾ? ಎನ್ಮಾಡೋದು ಹೇಳಿ..ಲೋಕಾರೂಡಿ ತಪ್ಪಿಸಿಕ್ಕೋ ಆಗೊಲ್ಲ. ಆದರೆ ಪ್ರೀತಿ ಎಂಬ ವೀಸಾ ಸಿಕ್ಕ ಮೇಲೆ ಬೇರೆ ಎಲ್ಲಾ ವೀಸಾ ಸಿಗೋದು ಅಂತಾ ಕಷ್ಟ ಅಗೋಲ್ಲಾ ಅನಿಸುತ್ತೆ..ಅಲ್ವಾ?

ನಾಳೆ ಮತ್ತೆ ಸಿಗ್ತೀನಿ..

ಸವಿಗನಸುಗಳು,
ಪ್ರೀತಿಯೊಂದಿಗೆ,
ನಿಮ್ಮವನು

17 comments:

Unknown said...

aatmeeya Shivu,
bahaLa chennagide nimma hrudayaaLada maatugaLu. eshtu preetiyinda, arthagarbhitavaagide ee patra.
nanage caarina seetigondu muddina guddu koduva prasnagavu bahaLa ishta aayitu.
shubhavaagali.

~Harsha

Anonymous said...

ನಿಮ್ಮ ವಿರಹದ ನೋವು ನನಗರ್ಥವಾಗ್ತಿಲ್ಲ. ಏಕೆಂದರೆ, ಅದರ ಅನುಭವ ನನಗಾಗುವ ಮೊದಲೇ ಗುಂಡಿಯೊಳಗೆ ಬಿದ್ದಿದ್ದೆ.

ಆದರೂ ನಿಮ್ಮವರಿಗಿನ್ನೂ ಬಹುವಚನ ಪ್ರಯೋಗ ನಡೆಯುತ್ತಿರುವುದರಿಂದ, ಈ ನೋವಿಗೆ ಕಾರಣವಿರಬಹುದೇ? ಏಕವಚನ ಪ್ರಯೋಗದಿಂದ ಮನಗಳು ಹತ್ತಿರವಾಗುವುದು. ಆದರೇನು ತನುಗಳು ಹತ್ತಿರವಾಗದೇ ಜೀವನ ಚಕ್ರ ಪೂರ್ಣವಾಗುವುದಿಲ್ಲ. ಬಹಳ ಬೇಗ ನಿಮ್ಮ ಕಾರಿನ ಸೀಟು ತುಂಬಲಿ. ಅಷ್ಟೇ ಅಲ್ಲ, ಇನ್ನೂ ದೊಡ್ಡ ಕಾರು ತೆಗೆದುಕೊಳ್ಳುವಂತಾಗಲಿ. ಇದು ನನ್ನ ಹಾರೈಕೆ, ಆಶಯ.

Shiv said...

ಶ್ರೀಹರ್ಷ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು

ತವಿಶ್ರೀ,
ನೀವು ಹೇಳಿದ್ದು ನಿಜ ಇರಬಹುದೇನೋ..ಬಹುವಚನಕ್ಕೆ ಈಗ ಬೈ!ಜೀವನ ಚಕ್ರ ಪೂರ್ಣಗೊಳ್ಳಲು ಇನ್ನೂ ತುಂಬಾ ದಿನವಿದೆ..

Anonymous said...

ಶಿವ್,
ನಿಮ್ಮ ಓಲೆ ತಲುಪಿಸಿದ್ದೇನೆ...

ಕಾರಿನ ಸೀಟಿನಲ್ಲಿ ಯಾರು, ಯಾವಾಗ ಬರುತ್ತಾರೆ ಅಂತ ತಕ್ಷಣವೇ ತಿಳಿಸುವುದು.

ಕೂಡಲೇ ನಮಗೆ ಭರ್ಜರಿ ಉಣಬಡಿಸುವ ವ್ಯವಸ್ಥೆಯಾಗಲಿ...

ಇಂತಿ
ನಿಮ್ಮ
- ಅನ್ವೇಷಿ
:)

Sandhya said...

ತುಂಬಾ ಪ್ರೀತಿಸ್ತೀರಾ ಅನ್ಸತ್ತೆ ಅವ್ರನ್ನ, ಪತ್ರ ಚೆನ್ನಾಗಿ ಬರೆದಿದ್ದೀರ :)...ಅವರ ಹ್ರುದಯ ಖಂಡಿತಾ ಮುಟ್ಟಿರುತ್ತದೆ.

Phantom said...

ವಹ್ ವಹ್.

ಸಾಹೇಬ್ರು ಬಲ್ ಸಂದಾಕ್ ಬರ್ದಿದ್ದಿರ ಪತ್ರವ. ಅನ್ವೇಶಿಗಳು, ಮೇಘ ಸಂದೇಶ ತಲುಪಿಸಿದ ಹಾಗೆ, ನಿಮ್ಮ ಸಂದೇಶನ ತಲುಪಿಸಿದ್ದರೆ.

ನಿಮ್ಮ ಪತ್ರದಿಂದ ಪ್ರೇರಣೆ ಪಡ್ಕೊತಿನಿ ಮುಂದೊಂದು ದಿನ ;)

ಇಂತಿ
ಭೂತ

Shiv said...

ಅನ್ವೇಷಿಗಳೇ,
ಭರ್ಜರಿ ಊಟದ ವ್ಯವಸ್ಥೆ ಇನ್ನು ೫-೬ ತಿಂಗಳುಗಳಲ್ಲಿ ಆಗಲಿದೆ!
ಕಾರಿನ ಸೀಟಿನಲ್ಲಿ ಬರುವವರು ನನ್ನ ಭಾಳಸಂಗಾತಿ..

ಸಂಧ್ಯಾ,
ಧನ್ಯವಾದಗಳು..ಪತ್ರ ನಮ್ಮವರಿಗೂ ಇಷ್ಟವಾಗಿದೆ..

ಭೂತ,
ಪತ್ರದಿಂದ ಪ್ರೇರಣೆ ಪಡೆದು ಎನು ಮಾಡಬೇಕೆಂದಿದ್ದೀರಾ :)

Enigma said...

wow congrats!!! innu bariyeri eetarahada patra wanna

Phantom said...

ಕವನ ಬರಿತಿನಿ :)

Shiv said...

ಎನಿಗ್ಮಾ,
ಧನ್ಯವಾದಗಳು !!
ಇನ್ನೂ ೫-೬ ತಿಂಗಳಿದೆ..ಅಲ್ಲಿಯವರಿಗೆ ಈ ತರ ಪತ್ರಗಳು,ಕವನಗಳು ಬರ್ತಾನೆ ಇರುತ್ತೆ :(

ಭೂತ,
೧೦೦ ರೂಪಾಯಿ ನೋಟು ಕೊಟ್ಟು ,ಇದನ್ನ ಏನು ಮಾಡ್ತೀಯಾ ಪುಟ್ಟ ಅಂದ್ರೆ..ದೋಣಿ ಮಾಡಿ ನೀರಲ್ಲಿ ಬಿಡ್ತೀನಿ ಅಂದ್ರಂತೆ :)

Raghavendra D R said...

mana matthu hrudayavannu muttuva haage barediddeeri Shiv! thumba channagide! :)
vishaya keLi thumba santoshavaayithu. nimma mundhina ella iccHegaLu neraverali endhu haaraisutthene.

-Raghu

Shiv said...

ರಘು,
ಧನ್ಯವಾದಗಳು..
ನಿಮ್ಮ ಹಾರೈಕೆಗೆ ವಂದನೆಗಳು

Anonymous said...

ಶಿವು,
ಬದುಕನ್ನು ಉತ್ಕಟವಾಗಿ ಪ್ರೇಮಿಸುವವರಲ್ಲಷ್ಟೇ ಇಷ್ಟು ನವಿರಾದ ಭಾವನೆ ಹುಟ್ಟುವುದು ಸಾಧ್ಯ. ಜೀವಿಗಳಲ್ಲೆಲ್ಲ ಇಂತಹ ಸ್ನೇಹ ಕಂಡರೆ ಎಷ್ಟು ಚೆನ್ನ ಅಲ್ವೇ ?

Shiv said...

ವೇಣು,

ಪ್ರೀತಿ ಅಂದರೆ ಹಂಗೆ ಅಲ್ವಾ..ನವಿರು..ವರ್ಣಾತೀತ ಭಾವನೆ ಅದು..

ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು..

Sree said...

ಮುದ್ದಾಗಿದೆ:) ೫-೬ ತಿಂಗಳು ಪಾತರಗಿತ್ತಿ ಬಹಳ ಕಲರ್ ಫುಲ್ ಆಗಿರೋ ಸೂಚನೆಗಳು!:))

Anonymous said...

ನೀವ್ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ :)

ತುಂಬಾ ಚೆನ್ನಾಗಿ ಬರೆದಿದ್ದೀರ: ಉಳಿದ ಬರಹಗಳಂತೇ.

ಅಂದ್ಹಾಗೆ, ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.

Shiv said...

ಶ್ರೀ,
ವಂದನೆಗಳು ರೀ..ಎನು ಮಾಡೋದೂ ಹೇಳಿ..ಇನ್ನಾ ೫-೬ ತಿಂಗಳು ತಳ್ಳಬೇಕಲ್ವಾ..ಇಂತವು ಎನಾದರೂ ಮಾಡಿಯಾದರೂ ನನ್ನ ಮನಸಿಗೆ ಸ್ಪಲ್ಪ ಸಮಾಧಾನ ಸಿಗಬಹುದೇನೋ..

ಸುಶ್ರುತ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!
ಪ್ರೀತಿ ಯಾವಾಗ ಯಾವಾಗ ಎನೇನೂ ಮಾಡಿಸಿತ್ತೋ ಗೊತ್ತಾಗಲ್ಲ..ಈ ಓಲೆಗರಿನೂ ಅದರ ಪ್ರಭಾವ !
ಧಾರಾಳವಾಗಿ ಲಿಂಕ್ ಮಾಡಿಕೊಳ್ಳಿ..ನಾನು ಮಾಡ್ಕೋತೀನೀ..