ನನ್ನ ನಲ್ಮೆಯ ಹುಡುಗಿ,
ಏನು ಮಾಡ್ತಾ ಇದೀಯಾ ?
ಬಹುಷಃ ಅಮ್ಮನ ಜೊತೆ ಕೂತು ಮಾತಾಡುತ್ತಿರಬಹುದು.ಇಲ್ಲಾ ಅಂದ್ರೆ ಮನೆಮಂದಿ ಜೊತೆ ಕೂತು ಟಿವಿ ನೋಡ್ತಾ ಇರಬಹುದು.ನನ್ಗೊತ್ತು ಅವರ ಜೊತೆ ಮಾತಾಡುತ್ತಿದ್ದರೂ, ಟಿವಿ ನೋಡುತ್ತಾ ಇದ್ದರೂ ನಾ ನಿನ್ನ ಮನದಲ್ಲಿ ಎಲ್ಲೋ ಇರ್ತೀನಿ.ನಿನ್ನ ಜೊತೆ ಜನ ಇರೋರ್ವಗೆ ನೀನು ಅದು ಹೆಂಗೋ ಸಂಭಾಳಿಸ್ತಿಯಾ ನಿನ್ನ ಕಾಡುವ ಮನವನ್ನ.ಆದರೆ ನೀನು ಏಕಾಂತದಲ್ಲಿದ್ದಾಗ ಏನಾಗುತ್ತೆ? ನಿನ್ನ ಮನದಲ್ಲಿದ್ದ ನಾನು ಹೊರಬರ್ತೀನಾ? ಆಗ ಏನು ಮಾಡ್ತೀಯಾ ನೀನು?
ನನ್ನ ಕತೆ ಕೇಳಬೇಡ್ವೇ.. ಕುಂತ್ರೂ,ನಿಂತ್ರೂ ನಿನ್ನದೆ ಧ್ಯಾನ,ಜೀವಕ್ಕಿಲ್ಲ ಸಮಾಧಾನ..ಎನೋ ನಿನ್ನ ಧ್ವನಿ ಕೇಳಿಕೊಂಡು, ನಿನ್ನ ಪೋಟೋ ನೋಡ್ಕೊಂಡು, ನಾವು ಜೊತೆಗಿದ್ದ ಕ್ಷಣಗಳ ಮೆಲುಕು ಹಾಕ್ತ ದಿನ ತಳ್ತಾ ಇದೀನಿ. ನನ್ನ ಹತ್ತಿರ ಇರೋ ವಿಡಿಯೋದಲ್ಲಿ, ನೀನು ಆ ದೇವಸ್ಥಾನದಲ್ಲಿ ನಗ್ತಾ ಇರೋ ಒಂದು ದೃಶ್ಯ ಇದೆ..ಅದನ್ನ ಇಲ್ಲಿಯವರಿಗೆ ಎಷ್ಟು ಸರ್ತಿ ನೋಡಿದೆನೋ ಗೊತ್ತಿಲ್ಲ.ನಿನ್ನದು ಶುಭ್ರ ಸುಂದರ ನಗು. ಅದನ್ನ ನೋಡ್ತಾ ಇದ್ದಂಗೆ ನಿನ್ನ ನೆನಪು ನನ್ನನ್ನು ಇನ್ನೂ ಬಿಗಿಯಾಗಿ ಆಲಂಗಿಸಿಕೊಂಡುಬಿಡುತ್ತೆ.
ಅಂದಂಗೆ ನಿನ್ನ ರೊಟ್ಟಿ ಕಲಿಕೆ ಎಲ್ಲಿಗೆ ಬಂತು? ಇಷ್ಟು ದಿನ ಅಡುಗೆ ಮನೆಗೆ ಏನೂ ಸಂಬಂಧ ಇಲ್ಲದಂತಿದ್ದವಳು ನೀನು. ಈಗ ನನ್ಗೋಸ್ಕರ ರೊಟ್ಟಿ ಮಾಡೋದಾ ಕಲಿತೀನಿ ಅಂತಾ ಹೊರಟಿದ್ದೀಯಾ ! ಯಾಕೇ ಹೀಗೆ ಅಂತಾ ಕೇಳಿದ್ರೆ, ನನಗೆ ಇಷ್ಟವಾದವರ ಇಷ್ಟ-ಕಷ್ಟ ನನ್ನದು, ಅವರ ಇಷ್ಟ ಪೂರೈಸಲು ಎಷ್ಟು ಕಷ್ಟ ಆದರೂ ಪರವಾಗಿಲ್ಲ ಅಂತೀಯಾ.ನಿನ್ನ ಪ್ರೀತಿಗೆ ನನ್ನ ಬಳಿ ಉತ್ತರವಿಲ್ಲ ಕಣೇ..
ನಮ್ಮ ಮುದ್ದಿನ ಟೆಡ್ಡಿ ಹೇಗಿದೆ. ಅದಕ್ಕಿರುವ ಅದೃಷ್ಟ ನನಗಿಲ್ಲ. ಯಾವಾಗಲೂ ನಿನ್ನ ಜೊತೆನೇ ಇರುತ್ತೆ, ಅದೂ ನಿನ್ನ ರೂಮ್‍ನಲ್ಲಿ. ಇರಲಿ, ಬೇಗ ಆ ಟೆಡ್ಡಿ ಜಾಗಕ್ಕೆ ನಾ ಬರ್ತೀನಿ. ಟೆಡ್ಡಿ ನನ್ನ ತರನೇ ಅಲ್ವಾ..ಎನೂ ತರ್ಲೆ ಮಾಡೋಲ್ಲ..ಅದು ಬೇಕು ಇದು ಬೇಕು ಅಂತಾ ನಿನ್ನ ಪೀಡಿಸಲ್ಲ. ಗೊತ್ತು ,ಇದನ್ನು ಓದ್ತಾ ಇದ್ದಂಗೆ ನೀನು ನಗ್ತೀಯಾ ಅಂತಾ..ಅದರೆ ನಾನು ನಿನ್ನ ಹತ್ತಿರ ಕೇಳೋದಾದರೂ ಏನು.... ನಿನಗೆ ಗೊತ್ತಲ್ವಾ !
ಹಾಂ.. ಇವತ್ತು ಪೋನ್ ಸ್ಯಾಂಪಲ್ ನಂತರ ನಾನು ಪೂರ್ತಿ ಹುಚ್ಚ ಆಗಿಬಿಟ್ಟಿದೀನಿ ಕಣೇ.ತುಂಬಾ ಕಾಡಿಸಬೇಡ್ವೇ..ದಿನಕ್ಕೊಂದು ಡಜನ್ ಸಾಕು..ಜಾಸ್ತಿ ಎನೂ ಕೇಳ್ತಾ ಇಲ್ಲ..ಅಲ್ವಾ.
ಅಂದಾಗೆ ನೆನಪಿದೆಯಾ? ೫ ಡಜನ್ ಪಾರ್ಸಲ್ ಕಳಿಸೋದು ಬಾಕಿ ಇದೆ!
ಐ ಲವ್ ಯು,
ನಿನ್ನ ಮುದ್ದು ಕರಡಿ
14 comments:
ಏನ್ರೀ ಶಿವ್ ಅವರೆ,
ನಾವು ಬಂದಿದ್ದೇವೆ.. ಇಲ್ಲಿ... ಸ್ವಲ್ಪ ನೋಡ್ರೀ... ಕಣ್ಣು ಬಿಡ್ರೀ....
ಛೆ.... ಎಷ್ಟು ಬಡಿದ್ರೂ, ಎಳೆದಾಡಿದ್ರೂ ಈ ಶಿವ್ ಪ್ರೇಮಲೋಕದಿಂದ ಈ ಲೋಕಕ್ಕೆ ಬರ್ತಾನೇ ಇಲ್ವಲ್ಲಾ...
ಇವರನ್ನು ಎಚ್ಚರಿಸೋದು ಹೇಗೆ? ಯಾರಾದ್ರೂ ದಯವಿಟ್ಟು ತಿಳಿಸಿ...!!!!!
ಪತ್ರಕ್ಕೆ, ನಿಮ್ಮ ಗೆಳತಿಯೇ ಉತ್ತರಿಸುವುದು ಸೂಕ್ತ.
ಇಂತಿ
ಭೂತ
ಓಹೋ!! ಇದೇನಿದು?
ಡಜನ್ ಸಾಕು.... ೫ ಡಜನ್ ಪಾರ್ಸಲ್ ಕಳಿಸೋದು ಬಾಕಿ ಇದೆ .....
ನಾನು ಪಾತರಗಿತ್ತಿಗೆ ಅಂತ ಬಂದೆ... ಆದರೆ ...ದಾರಿ ತಪ್ಪಿ ರವಿಚಂದ್ರನ್ ಪ್ರೇಮಲೋಕಕ್ಕೆ ಬಂದಿದೀನಾ ಅನ್ನಿಸಿದೆ. :-)
ಯಾರ್ರೀ ಅದು ..
ಓ ಅಸತ್ಯಿಗಳು..
ನಿಮಗೆ ಹೊತ್ತು ಗೊತ್ತು ಒಂದು ಗೊತ್ತಾಗಲ್ವ :)
ಪ್ರೇಮಲೋಕದಿಂದ ಬಂದು ಈ ಲೋಕದಲ್ಲಿ ಮಾಡೋದಾದರೂ ಎನೀದೆ?ಅಲ್ಲೇ ಇರೋಕೆ ಬಿಡ್ರೀ ಪ್ಲೀಸ್..
ಭೂತ,
ಸಕಾರತ್ಮಕ ಉತ್ತರ :)
ತ್ರಿವೇಣಿಯವರೇ,
ನೀವು ಪಾತರಗಿತ್ತಿಗೇ ಬಂದಿದೀರಾ..
ಪಾತರಗಿತ್ತಿ ಪ್ರೀತಿ ಲೋಕದಲ್ಲಿ ವಿಹರಿಸುತ್ತಿದೆ..
ರವಿಚಂದ್ರನ್...ನೀವು ಪ್ರೇಮಲೋಕದ ದೊಡ್ಡ ಫ್ಯಾನ್ ಅನಿಸುತ್ತೆ :)
ಅಯ್ಯಬ್ಬಾ!!!
ಇದೇನು ಪಬ್ಲಿಕ್ ಹಗರಣ :D
ಟೆಡ್ಡಿ ನಿಮ್ಮ ಹಾಗೆ ಪೀಡಿಸೋಲ್ವಾ? ಐದು ಡಜನ್ ಕೇಳ್ತಿರೋದು ಪೀಡಿಸೋದಲ್ವಾ? (ಸುಮ್ನೆ ಕಾಲೆಳೆಯುತ್ತಿರುವುದು)
ಕಲ್ಪನಾ ಸಾಮ್ರಾಜ್ಯದ ಅರಸರ ಪರಿಕಲ್ಪನೆ ಬಹಳ ಚೆನ್ನಾಗಿದೆ. ಇಂತಹ ಬರಹಗಳನ್ನು ನೋಡಿಯೇ ಇರ್ಬೇಕು, 'ರವಿ ಕಾಣದ್ದನ್ನು ಕವಿ ಕಂಡ' ಎಂಬ ಮಾತು ಬಂದದ್ದು.
ಉತ್ತಮ ಬರಹ. ಅಂದ ಹಾಗೆ, ಪ್ರಕಟಿಸಲು ನಿಮ್ಮವರ ಪರ್ಮಿಷನ್ ಸಿಕ್ಕಿದೆಯಾ? :P
ತವಿಶ್ರೀ,
ಪೀಡಿಸೋದಾ....ಛೇ ಛೇ..ಎಲ್ಲಾದರೂ ಊಂಟೆ :)
ಹಂಗದರೆ ಎನು ಅಂತಾ ಗೊತ್ತಿಲ್ಲ :)
ಹೂಂ..ಸಾತ್ವಿಕ ಒಪ್ಪಿಗೆ ಸಿಕ್ಕಿತ್ತು..
hmm .. yavgalu avarondige kaala(manasinallo/dooravaaniyallo) kaleyuva neevu e patra bareyalu samaya heege madikondari ?
avara uttare yelli e patrakke ?
matte a video namagu torisabahudalla !!
ವಸುಧ ಅವರೇ,
ಅವರ ಜೊತೆ ಕಳೆಯುವ ಕಾಲದ ನಂತರ ಉಳಿದ ಸಮಯ ಇರುತ್ತಲ್ಲ,ಅವರಿಗೋಸ್ಕರ ಕಾಯುವ ಕಾಲ.ಆ ಸಮಯದಲ್ಲಿ ಇದೆಲ್ಲಾ ಬರೆಯೋದು..
ಅವರ ಉತ್ತರ.. ಪದಗಳಲ್ಲಿ ಹಿಡಿದು ಇಟ್ಟಕೊಳ್ಳೋಕೆ ಆಗೋಲ್ಲ
ಹೂಂ..ಯಾವಾಗಲದರೂ ತೋರಿಸ್ತೀನಿ ಅದನ್ನ
Eshwarayyanavara 'saras' odida haagiyitu....dhanyawaada!!!!
e premloka ,adu idu aMta baredu telebere kedasata idira...navu bhootakke poorna sahamata vyaktapadisi pubnalli hogta idini...:)
ಮಹಾಂತೇಶ್,
ಯಾರೀ ತಲೆ ಕೆಡಿಸಿದ್ದು :)
ಅಯ್ಯೋ ಪಬ್‍ಗೆ ಹೋಗೋವಷ್ಟು ತಲೆ ಕೆಟ್ಟಬಿಡ್ತಾ..ಛೇ ಛೇ..
Shiva,
This is awesome !!! It takes you down the romantic lane with no big waves.
The writing is so true, so close to eart and above all, so very real.
Even though it is so romantic (and meant for just one reader maybe ? ;) ), the rest of the readers can immensely enjoy it due to the 'AtmIyate' hiding behind the words.
Very well written my friend. Just my second comment here. But, I loved your prose here much more than the other poem (that last comment was from a pure literary critic perspective, so you can neglect it :) ).
Nothing in this world can beat romance....ahhh, such a beautiful thing !!!
ಡಿಸೆಂಬರ್ ಸ್ಟಡ್,
ಹೌದು..ಅದು ನನ್ನ ಅತ್ಯಂತ ಪ್ರೀತಿಯ ಓದುಗಳಿಗೋಸ್ಕರ ಬರೆದಿದ್ದು..
ನೀವು ಹೇಳೋದು ನಿಜ..ಪ್ರೀತಿ-ಪ್ರಣಯದ್ದು ಒಂದು ಸುಂದರ ಲೋಕ..
shivshankar phonayana :P antah ondu nataka bari bahudu :) yene irli bahala chennagi bardideera nimma bahvanegalanna baritha iri
ಎನಿಗ್ಮಾ ,
ನಾಟಕನಾ..ಹೇ ಇಲ್ಲಾರೀ..ಇದು ನೈಜ ಘಟನೆ ಆಧಾರಿತ :)
ಧನ್ಯವಾದಗಳು !
Post a Comment