ನಿನ್ನ ಮೋಹಕ ನಗೆಯಲಿ
ಕಾಣೆಯಾಯಿತು ದಣಿವು
ನಿನ್ನ ಧ್ವನಿಯ ನಾದದಲಿ
ನನ್ನದಲ್ಲವಾಯಿತು ಮನವು
ನಿನ್ನ ನೆನಪುಗಳ ಅಂಗಳದಲ್ಲಿ
ಕಳೆದುಹೋಯಿತು ನನ್ನ ಮನ
ನಿನ್ನ ಪ್ರೀತಿಯ ಸಾಗರದಲ್ಲಿ
ಮುಳುಗಿಹೋಯಿತು ನನ್ನ ಮನ
ಪ್ರತಿ ಕ್ಷಣವೂ ಧ್ಯಾನ ನಿನ್ನದೇ
ಪ್ರತಿ ಬಡಿತದಲ್ಲೂ ಹೆಸರು ನಿನ್ನದೇ
ಪ್ರತಿ ಇರುಳಲ್ಲೂ ಕನಸು ನಿನ್ನದೇ
ಪ್ರತಿ ದಿನವೂ ನನ್ನ ಜೀವ ನಿನ್ನದೇ
ಅನುಭವಿಸುತ್ತಿದ್ದೇನೆ ಒಂದೊಂದು ಕ್ಷಣವು
ಭಾರ ಹೃದಯದಿಂದ ಅಗಲುವಿಕೆಯ ನೋವು
ನನ್ನಿಂದ ಅಷ್ಟು ದೂರ ಇದ್ದರೂ ನೀನು
ಅದು ಹೇಗೆ ಮನವನ್ನು ಕಾಡುತ್ತೀಯಾ ನೀನು?
ಜೀವಿಸುತ್ತಿದೇನೆ ಆ ಕ್ಷಣಕ್ಕಾಗಿ
ಪ್ರೀತಿಯ ಹಕ್ಕಿಗಳೆರಡು ಸ್ವಚ್ಚಂದ ಆಗಸದಲಿ
ಒಟ್ಟಿಗೆ ಹಾರುವ ಆ ಕ್ಷಣಕ್ಕಾಗಿ
ಜೀವಿಸುತ್ತಿದೇನೆ ಆ ದಿನಕ್ಕಾಗಿ
ಕಾದು ಒಣಗಿದ ಭೂಮಿಯನು
ಮೊದಲು ಮಳೆ ಹನಿ ಚುಂಬಿಸುವ ದಿನಕ್ಕಾಗಿ
16 comments:
ಶಿವ್
ಅವರ ಸುಮಧುರ ನೆನಪಲಿ
ನಿಮ್ಮದಲ್ಲವಾಯಿತು ಸಮಯ
ವಿರಸ ಕಳೆದು ಸರಸ ಮೂಡಲಿ
ಶೀಘ್ರವಾಗಲಿ ಜೀವನ ರಸಮಯ
ನಿಮ್ಮ ರಸಮಯ ಕ್ಷಣದಲ್ಲಿ ನಮಗೂ ಪುಷ್ಕಳ ಭೋಜನ ಹಾಕಿಸಿ ರಸಂಮಯವಾಗಿಸಿ
ಅಸತ್ಯಿಗಳೇ,
ನಿಮ್ಮ ಸಹೃದಯದ ಹಾರೈಕೆಗೆ ವಂದನೆಗಳು
ಪುಷ್ಕಳ ಭೋಜನಕ್ಕೆ ಈಗಲೇ ನಿಮಗೆ ಅಮಂತ್ರಣಗಳು!
ಬಹಳ ಸೊಗಸಾದ ಕವನ. ಕೊನೆಯ ಈ ಸಾಲುಗಳು ಬಹಳ ಚೆನ್ನಾಗಿವೆ.
ಜೀವಿಸುತ್ತಿದೇನೆ ಆ ಕ್ಷಣಕ್ಕಾಗಿ
ಪ್ರೀತಿಯ ಹಕ್ಕಿಗಳೆರಡು ಸ್ವಚ್ಚಂದ ಆಗಸದಲಿ
ಒಟ್ಟಿಗೆ ಹಾರುವ ಆ ಕ್ಷಣಕ್ಕಾಗಿ
ಜೀವಿಸುತ್ತಿದೇನೆ ಆ ದಿನಕ್ಕಾಗಿ
ಕಾದು ಒಣಗಿದ ಭೂಮಿಯನು
ಮೊದಲು ಮಳೆ ಹನಿ ಚುಂಬಿಸುವ ದಿನಕ್ಕಾಗ
ಧನ್ಯವಾದಗಳು ತವಿಶ್ರೀಗಳೇ,
ಅದು ಯಾಕೋ ಗೊತ್ತಿಲ್ಲಾ..ಎಲ್ಲರಿಗೂ ಈ ಕೊನೆ ಸಾಲುಗಳು ತುಂಬಾ ಇಷ್ಟವಾಗಿವೆ.ನಮ್ಮಾಕೆಗೂ ಸಹ ಈ ಸಾಲುಗಳು ತುಂಬಾ ಇಷ್ಟ.
e kavanadalliro sahitya nimma bhavanegalannu yellashtu pratibimbistilla anta gottu namge.Nimma avara premankana bari maatinalli/sahityadalli varnisalu sadhyave ? :)
ರೀ ವಸುಧ,
ಮಾತಿನಲ್ಲಿ ಸಾಹಿತ್ಯದಲ್ಲಿ ಆಗೋಲ್ಲ ಅಂದರೆ ಬೇರೆ ಯಾವ ವಿಧಾನಗಳಿವೆ? ನೀವು ಅನುಭವಸ್ಥರು ದಾರಿ ತೋರಿಸಬೇಕು ಇಂತಾ ವಿಷಯಗಳಲ್ಲಿ !
namskar hosa kavigaLige,
kavananu shuru mADibitra ? olle kelsa !!!!!! matte hegide jeevan?
Olle kavan saar!!!!
ಮಹಾಂತೇಶ್,
ಧನ್ಯವಾದಗಳು !
ಹೂಂ..ಕವನ ಬರೆಸಿಬಿಡ್ತು ಈ ಪ್ರೀತಿ..
ಜೀವನ ತುಂಬಾ ಸೊಗಸಾಗಿದೆ..
ವಿರಹಸುಖಿ ಆಗುವ ಮುನ್ನ,
ಸನಿಹ ಸುಖ ಸಿಗಲಿ!
ಎಂಬ ಹಾರೈಕೆಯೊಂದಿಗೆ
ಇಂತಿ
ಭೂತ
ಶಿವ್,
ಕವನ ಚೆನ್ನಾಗಿದೆ...
ಆದಷ್ಟೂ ಬೇಗ ನಿಮ್ಮ "ವಿರಹಾ... ನೂರು ನೂರು ತರಹ" ಮರೆಯಾಗಿ, ನಗು ನಗುತಾ ನಲಿ ನಲಿಯಿರಿ.
~ಹರ್ಷ
Shiva,
Very sweet !!! Emotions are beautifully portrayed. The last line is the topping on the cake.
Since this is my first comment on your blog, I will resist myself from commenting on a few more things in the poem :)
Nice read....
ಭೂತೋತ್ತಮ!
ವಿರಹಸುಖಿ..
ವಿರಹದಲ್ಲಿ ಸುಖನಾ..ಹೇಗೆ ಅಂತಾ ??
ಶ್ರೀಹರ್ಷ,
ಧನ್ಯವಾದಗಳು..
ಓಡುವ ನದಿ ಸಾಗರವ ಸೇರಲೇ ಬೇಕಂತೆ..
ಡಿಸೆಂಬರ್ ಸ್ಟಡ್,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ..
ನೀವು ಕೊನೆ ಸಾಲು ಇಷ್ಟಪಡ್ತೀರಾ?
preethi othara kachaguli :) pretehi enu enu madisuthe nodi!!. yene adaru preethi ondu madhura anubhava
ಎನಿಗ್ಮಾ ,
ನಿಜವಾಗಲೂ ಪ್ರೀತಿ ಒಂದು ಕಚಗುಳಿನೇ !
ಮಧುರ ಅನುಭವ ! ತಮ್ಮ ಸ್ವಾನುಭವ ಇದ್ದಾಗೆ ಇದೆ :)
shiv,
bahaLA dinagaLLadamele naa comment maDtiddinni, am very sorry. the last line stole the show. a touching poem, can i say? :)
ಮೌನ,
ಪರವಾಗಿಲ್ಲ ಬಿಡಿ..ನೀವು ಪರೀಕ್ಷೆಯಲ್ಲಿ ಬ್ಯುಸಿ ಇದ್ದೀರಿ ಅನಿಸುತ್ತೆ..
ಕೊನೆಯ ಸಾಲು :-)
Post a Comment