Wednesday, February 14, 2007

ನಿನ್ನ ಹೆಸರು..

ಚಿಗುರು ಮಾವಿನೆಲೆಯಲಿ
ಕೋಗಿಲೆ ಕುಹುವಿನಲಿ
ವಸಂತ ಋತುವಾಗಿ
ಆಗಮಿಸಿದ ಹೆಸರು..ನಿನ್ನದು

ಪ್ರೇಮ ರಾಗದಲಿ
ಒಲವ ತಾಳದಲಿ
ಹೃದಯದ ಹಾಡಾಗಿ
ಹೊಮ್ಮಿದ ಹೆಸರು..ನಿನ್ನದು

ಸ್ವಾತಿ ಮಳೆಯಲಿ
ಕಪ್ಪೆ ಚಿಪ್ಪಲಿ
ಹೊಳೆವ ಮುತ್ತಾಗಿ
ಸಿಕ್ಕ ಹೆಸರು..ನಿನ್ನದು

ಬಿಸಿಲ ಊರಿನಲಿ
ಮಳೆಯ ಬೀದಿಯಲಿ
ಕಾಮನಬಿಲ್ಲಾಗಿ
ಹಬ್ಬಿದ ಹೆಸರು..ನಿನ್ನದು

ಪ್ರಣಯ ತೋಟದಲಿ
ಬಯಕೆ ಬಳ್ಳಿಯಲಿ
ನಗುವ ಹೂವಾಗಿ
ಅರಳಿದ ಹೆಸರು..ನಿನ್ನದು

ಶಿಲೆಯ ಸೊಬಗಲಿ
ಪ್ರೀತಿ ಕೆತ್ತೆನೆಯಲಿ
ಶಿಲಾಬಾಲಕಿಯಾಗಿ
ಮೂರ್ತಿವೆತ್ತಿದ ಹೆಸರು..ನಿನ್ನದು

ಮನದ ದಿಗಂತದಲಿ
ಹೃದಯ ಕಡಲಂಚಲಿ
ಕೆಂಪು ವರ್ಣ ಚೆಲ್ಲುತಾ
ಮುಡಿ ಬಂದ ಹೆಸರು... ನಿನ್ನದು

ಮಗುವ ನಗುವಿನಲಿ
ರೇಶ್ಮೆಯ ಸ್ಪರ್ಶದಲಿ
ನವಿರು ಭಾವನೆಯ ಕಾರಂಜಿಯಾಗಿ
ಚಿಮ್ಮಿದ ಹೆಸರು..ನಿನ್ನದು

ಪ್ರೀತಿ ಸ್ವರ್ಗದಲಿ
ಅಮೃತ ಸರೋವರದಲಿ
ಕಿನ್ನರಿಯಾಗಿ
ದಾಹ ತೀರಿಸಿದ ಹೆಸರು..ನಿನ್ನದು

ದೇಹದ ಪ್ರತಿ ಉಸಿರಲಿ
ಜೀವದ ಕೊನೆನಾಳೆಯಲಿ
ಬದುಕಿನ ಸೆಲೆಯಾಗಿ
ಉಕ್ಕುವ ಹೆಸರು..ನಿನ್ನದು

ಬಾಳ ಹಾದಿಯಲಿ
ಹೆಜ್ಜೆ ಹೆಜ್ಜೆಯಲಿ
ಜನ್ಮಜನ್ಮದ ಜೊತೆಯಾಗಿ
ನಡೆವ ಆ ಹೆಸರು..ನನ್ನ ಹುಡುಗಿಯ ಹೆಸರು

***********************************************
ಕವನಾರ್ಪಣೆ: ನನ್ನ ಹುಡುಗಿಗೆ

ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು
***********************************************

23 comments:

ಸುಶ್ರುತ ದೊಡ್ಡೇರಿ said...

ಒಳ್ಳೇ ಕವನ, ಕೆ.ಎಸ್.ನ. ನೆನಪಾದ್ರು, ..ಎಲ್ಲಾ ಸರಿ, ಆದ್ರೆ ಕೊನೆಗೂ ಅವಳ ಹೆಸರೇ ಹೇಳ್ಲಿಲ್ವಲ್ಲ ಗುರುವೇ..?

Shiv said...

ಸುಶ್ರುತ,
ವಂದನೆಗಳು..
ಅಮಂತ್ರಣ ಪತ್ರಿಕೆ ಕಳಿಸ್ತೀನಿ ಆಗ ಗೊತ್ತಾಗುತ್ತೆ :)

ಅಸತ್ಯ ಅನ್ವೇಷಿ said...

ಶಿವ್ ಅವರೆ,
ಸುಶ್ರುತರು ಏನೇ ಹೇಳಲಿ,

ಶಿಲೆಯ ಸೊಬಗಲಿ
ಪ್ರೀತಿ ಕೆತ್ತೆನೆಯಲಿ
ಶಿಲಾಬಾಲಕಿಯಾಗಿ
ಮೂರ್ತಿವೆತ್ತಿದ ಹೆಸರು..ನಿನ್ನದು

ಎಂಬ ಸಾಲುಗಳು ತುಂಬಾ ಗಮನ ಸೆಳೆದವು! ;)

sritri said...

ಹೆಸರು ತಿಳಿಸುತ್ತಿರೋನೋ ಅಂದುಕೊಂಡಿದ್ದೆ. ನಿರಾಸೆ ಕಾದಿತ್ತು!

Shiv said...

ಅಸತ್ಯಿಗಳೇ,

ನೀವು ಆ ಸಾಲು ಹೋಗಿ ಎಲ್ಲಿ ಕಳೆದುಹೋದಿರಿ ತಿಳಿಯಲಿಲ್ಲ :)

ತ್ರಿವೇಣಿಯವರೇ,
ಅತೀ ಶೀಘ್ರದಲ್ಲಿ ಹೆಸರು ಹೇಳ್ತೀನಿ :)

SHREE said...

chennaagide... ishta aythu.

mouna said...

beautiful! i've to scrounge for words, idella haLedu aadavu, neamma kavana vanna appreciate maaDalu, innashtu padagaLu beku!

shilabaalike, reminds me of one my abstract works, i used oilpastels to define it...

mouna said...

belated valentine wishes to you too!!

Sreeharsha said...

ಇರುಳ ಕಣ್ಣಿನಲಿ
ಹುಣ್ಣಿಮೆ ಬೆಳಕಿನಲಿ
ಕ೦ಡ ಹೆಸರು...ನಿನ್ನದು

ತ೦ಪು ಗಾಳಿಯಲಿ
ಹೂವ ಗ೦ಧದಲಿ
ಪಸರಿಸಿದ ಹೆಸರು...ನಿನ್ನದು.

>>>>>>
ಸುಮ್ನೆ ಇದನ್ನೂ ಸೇರಿಸೋಣ ಅ೦ದುಕೊಡೆ.

~ಹರ್ಷ

Shiv said...

ಶ್ರೀ,
ವಂದನೆಗಳು !

ಮೌನ,
ನಿಮ್ಮ ತುಂಬು ಮೆಚ್ಚುಗೆಗೆ ಧನ್ಯವಾದಗಳು!
ಆಯಿಲ್‍ಪಿಸ್ಟಲ್ ಅಂದರೇನು?

ಶ್ರೀಹರ್ಷ,
ನೀನು ಸೇರಿಸಿದ ಸಾಲುಗಳು ತುಂಬು ಚೆನ್ನಾಗಿದೆ

ರಾಧಾಕೃಷ್ಣ ಆನೆಗುಂಡಿ. said...

ಬಾಳ ಹಾದಿಯಲಿ
ಹೆಜ್ಜೆ ಹೆಜ್ಜೆಯಲಿ
ಜನ್ಮಜನ್ಮದ ಜೊತೆಯಾಗಿ
ನಡೆವ ಆ ಹೆಸರು..ನನ್ನ ಹುಡುಗಿಯ ಹೆಸರು
---------------------------------ವ್

mouna said...

oil pastels in simple terms would be crayons, but not those of the wax kind.

VENU VINOD said...

ಶಿವ,
ನಿಮ್ಮ ಕವನ ಸುಂದರ. ಇದಕ್ಕೆ ಸಮರ್ಪಕವಾದ ರಾಗವನ್ನು ಪೋಣಿಸಿದರೆ ಒಳ್ಳೆಯ ಭಾವಗಾನವಾಗಿ ಕನ್ನಡಿಗರ ಕಂಠದಲ್ಲಿ ಗುನುಗುತ್ತಿರಬಹುದು.

Jagali Bhagavata said...

ಚೆನ್ನಾಗಿ ಮೂಡಿ ಬಂದಿದೆ. ಸುಲಲಿತವಾಗಿದೆ. ತುಂಬ ಒಳ್ಳೆಯ ಬಂಧ ಇದೆ.

ಮತ್ತೆ, 'ಕುಂದಾಪುರ ರಾಣಿ' ವಿಳಾಸ ಕೊಟ್ಟಿಲ್ಲ ನೀವಿನ್ನೂ:-))

Shiv said...

ರಾಧಾಕೃಷ್ಣ ಅವರೇ,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ನಿಮ್ಮ ವಾವ್‍ಗೆ ಧನ್ಯವಾದಗಳು !!

ವೇಣು,
ಯೋಚನಾರ್ಹ ಅಭಿಪ್ರಾಯ !
ಧನ್ಯವಾದಗಳು..

ಭಾಗವತರೇ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಹಾಗು ಸ್ವಾಗತ..
ನಿಮ್ಮ ಕಾಮೆಂಟ್ ಕೇಣಿ ನಾನ್ ಮಸ್ತ್ ಮಸ್ತ್
ನಿಮಗೆ ಗೊತ್ತಿಲ್ಲದ ಕುಂದಾಪುರ ರಾಣಿ ನಮಗೆ ಹೇಗೆ ಗೊತ್ತು ಮಾರಾಯ್ರೆ :))

Raghu said...

adbhuthavaadha kavithe Shiv avare!! heege barithiri! :)

Shiv said...

ರಘು,

ನಿಮ್ಮ ಹಾರೈಕೆಗೆ ನಮನಗಳು..

December Stud said...

Gawd.....I rewind 2 years and I see myself in your shoes.....LOL

Don't worry, even after two years, you will still be writing the same kind of poems...just trust me, I know :)

Ahhh...the basic human instinct...

Shiv, an excellent poem. So true and amazingly beautiful. I truly don't have words to appreciate it.

Shiv said...

DS,

ತುಂಬು ವಂದನೆಗಳು !
೨ ವರ್ಷಗಳಿಂದ ನೀವು ಕವನ ಬರೀತಾ ಇದೀರಾ ಅಂದಾಗೆ ಆಯ್ತು!

December Stud said...

Nope.....

illa dore, kavana bareyokke shuru mADi oMdu yuga Aytu.....maduve Ada mElU biTTilla aShTe :)

Shiv said...

DS,

ನಿಮಗೆ ಈ ಸಾಲುಗಳು ಅನ್ವಯಿಸುತ್ತೆ :)

ಯುಗಯುಗಾದಿ ಕಳೆದರೂ ಕವನ ಬಂದೇ ಬರುತ್ತೆ
ಹೊಸ ಭಾವನೆಗಳಿಗೆ ಹೊಸ ಸಾಲುಗಳ ಹೆಕ್ಕಿ ಹೆಕ್ಕಿ ತರುತ್ತೆ !

srinivas said...

ಪದಗಳೆಂಬ ನವಮಲ್ಲಿಕಾ ಪುಷ್ಪಗಳನ್ನು ಗುಚ್ಚವನ್ನಾಗಿ ಮಾಡಿ ಹಾರ ಮಾಡಿ ತೋರಿದ್ದೀರಿ. ಬಹಳ ಸೊಗಸಾಗಿದೆ. ಮನೆಯವರಿಗೆ ಅರ್ಪಿಸಿದ್ದೀರಿ. ಇದೊಂದು ಅವಿಸ್ಮರಣೀಯ ಉಡುಗೊರೆ ಎಂದರೆ ಅತಿಶಯೋಕ್ತಿಯೇನಲ್ಲ. ಇನ್ನೂ ತುಂಬಾ ಕವನಗಳನ್ನು ರಸಭರಿತವಾಗಿ ಬರೆದು ಈ ಕಣಜವನ್ನು ತುಂಬಿಸಿರಿ.

ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿರುವ ಕೆಎಸ್‍ನ ಅವರ ಒಂದು ಸುಂದರ ಕವನ - ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Shiv said...

ತವಿಶ್ರೀ,

ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು !
ಸಿರಿಗೆರೆಯ ನೀರಿನಲಿ..ಕೇವಲ ಕೆ.ಎಸ್.ನ ಮಾತ್ರ ಹೆಣೆಯಬಲ್ಲರು ಅಂತಹ ಸಾಲುಗಳು..