Wednesday, April 18, 2007

ಕಾರ್ ಡ್ರೈವಿಂಗ್ ವೃತ್ತಾಂತವೂ ಮತ್ತು ಭಾವಾನುವಾದವೂ..

ಕಾಲ, ದೇಶಗಳು ಕಾರು ಕಲಿಯೋದಿಕ್ಕೆ ಕೂಡಿ ಬರಬೇಕು ಅನ್ನೋದು ನನ್ನ ಮಟ್ಟಿಗಂತು ನಿಜ. ಯಾಕಂದ್ರೆ, ಇಂಜಿನಿಯರಿಂಗ್ ಓದುವಾಗ, ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಕೂಡ ಈ ವಾಹನ ಚಾಲನೆ (ಮೋಟಾರ್ ಬೈಕು ಸೇರಿ) ನನ್ನನ್ನು ಅಷ್ಟೇನೂ ಆಕರ್ಷಿಸಿರಲಿಲ್ಲ. ಎಲ್ಲಿ ಹೋದರೂ ಜೊತೆ ಕೊಡುತಿದ್ದ ಸ್ನೇಹಿತರ ಪಿಲಿಯನ್ ಸೀಟು, ಬಿಟ್ಟರೆ ಬಸ್ಸು ಇಲ್ಲಾಂದ್ರೆ ಆಟೊ ರಿಕ್ಷಾ ಹೀಗೆ ನಡೀತಿತ್ತು ಬಿಡಿ.

ಕೆಲಸದ ನಿಮಿತ್ತ ಕ್ಯಾಲಿಫೋರ್ನಿಯಾಗೆ ಕಾಲಿಟ್ಟ ಮೇಲೆ ಕಾರು ಫಾರಿನ್ ದೈವ ಅನಿಸಿ, ಒಂದು ಶುಭ ದಿನದಂದು ಸ್ವಂತ ಸಂಪಾದನೆಯಲ್ಲಿ ಕಾರು ಕೊಂಡೆ. ಕಾರು ನನ್ನ ಬಳಿ ಚಲಿಸಿತೆ ವಿನಃ ನನಗೆ ಅದರ ಚಾಲನೆ ಬರಲಿಲ್ಲ. ಕಾನೂನಿನ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮೊದಲು ಲಿಖಿತ ಪರೀಕ್ಷೆ ಕೊಡಬೇಕಿತ್ತು, ರಸ್ತೆ ನಿಯಮಗಳು, ಚಾಲನಾ ಮಾಹಿತಿಗಳಿಗೆ ಸಂಬಂಧಪಟ್ಟಂತೆ. ಅದರಲ್ಲೇನೊ ಪಾಸಾದೆ. ಗಂಟೆಗೆ ೩೫ ಡಾಲರ್ ಕೊಟ್ಟು, ಒಂದು ತರಬೇತಿ ಕೇಂದ್ರ ಸೇರಿ ಡ್ರೈವಿಂಗ್‌ನ ಪ್ರಥಮ ಪಾಠಗಳನ್ನು ಕಲಿತಿದ್ದಾಯಿತು.

ಹತ್ತಿರದ ವಾಣಿಜ್ಯ ಮಳಿಗೆಯ ಬೃಹತ್ ಪಾರ್ಕಿಂಗ್ ಮಳಿಗೆಗಳಲ್ಲಿ ಅದೆಷ್ಟೋ ರಾತ್ರಿ ನಡೆದ ನನ್ನ ಡ್ರೈವಿಂಗ್ ಸರ್ಕಸ್, ನಂತರ ಕಡಿಮೆ ಜನಸಂದಣಿಯ ದಾರಿಗೆ ಬಡ್ತಿ ಪಡೆಯಿತು. ಹೀಗೆ ನನ್ನ ಆತ್ಮವಿಶ್ವಾಸವು ಹೆಚ್ಚಿ ಕಛೇರಿಗೂ ಕೂಡ ಕಾರಲ್ಲಿಯೆ ಹೋಗಿ ಬರಲು ಶುರುಮಾಡಿದೆ, ಗೆಳೆಯನೊಬ್ಬ ವಿಪರೀತ ಧೈರ್ಯ ಮಾಡಿ ಜೊತೆ ಕೊಟ್ಟ. ಎಲ್ಲ ಸರೀನೆ ಇತ್ತು, ಕಾರಿನ ಹಿಡಿತ ತಪ್ಪಿ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಒಡೆಯುವವರೆಗೆ. ಬಾಡಿಗೆ ಕಾರು ಆಗಿದ್ದರಿಂದ ಇನ್ಶುರೆನ್ಸ್‌ನ ತಲೆನೋವು ತಪ್ಪಿತು ಅಷ್ಟೆ. ಜೊತೆಗೆ ನನ್ನ ವಿಶ್ವಾಸವು ಕುಸಿದು ಕಾರು ೧೫ ದಿನ ಮನೆಯಲ್ಲಿ ಉಳಿತು.

ಮರಳಿ ಯತ್ನವ ಮಾಡಿ ಅಂತೂ ಡ್ರೈವಿಂಗ್ ಪರೀಕ್ಷೆ ಕೊಡುವ ದಿನ ಬಂತು. ಇಲ್ಲಿನ RTO ತರಹ ಅಲ್ಲಿನ್ಲ DMV (ಮೋಟಾರು ವಾಹನಗಳ ಇಲಾಖೆ) ಲೈಸೆನ್ಸ್ ಕೊಡುತ್ತೆ. ಪರೀಕ್ಷೆ ಹೇಗೆ ಅಂದರೆ ಪರೀಕ್ಷಕ ಬಂದು ಪಕ್ಕದಲ್ಲಿ ಕೂತ ಮೇಲೆ ಆತ ಹೇಳಿದ ಹಾಗೆ ಡ್ರೈವ್ ಮಾಡಬೇಕು. ನಾನು ಸ್ವಲ್ಪ ಹೆಚ್ಚಾಗಿಯೇ ತಯಾರಾಗಿದ್ದೆ, ಅದಕ್ಕೆ ಪರೀಕ್ಷಕ ಬಂದು ಕೂರುವ ಮೊದಲೆ ಕಾರು ಸ್ಟಾರ್ಟ್ ಮಾಡಿದೆ, ಗಡಿಬಿಡಿಯಲ್ಲಿ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದೆ. ಕಾರು ಜೋರಾಗಿ ಕೂಗಿತು, ಆ ಸದ್ದಿಗೆ ಪರೀಕ್ಷೆ ಮಾಡುವವ ಹೆದರಿ ಓಡಿ ಹೋದ, ಪರೀಕ್ಷೆ ರದ್ದಾಯ್ತು.

ಆದರೆ ಅದೃಷ್ಟ ಚೆನ್ನಾಗಿತ್ತು ಅನಿಸುತ್ತೆ, ಅದಕ್ಕೆ ಮಾರನೆ ದಿನವೆ ಇನ್ನೊಮ್ಮೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಅಂದು ಯಾವ ತಪ್ಪು ಮಾಡದೆ ಪರೀಕ್ಷೆ ಕೊಟ್ಟೆ, ಫಲಿತಾಂಶ ಪಾಸು ಅಂತ ಗೊತ್ತಾದಾಗ ಅತ್ಯದ್ಭುತವಾದ ವಿದ್ಯೆ ಕರಗತವಾದ ಸಂಭ್ರಮ ನನ್ನಲ್ಲಿತ್ತು.

**************************************************

ಇದು ನನಗೆ ಡ್ರೈವಿಂಗ್ ಲೈಸನ್ಸ್ ಸಿಕ್ಕಾಗಿನ ಕತೆ.

ಈ ಲೇಖನ ನನ್ನ ಇಂಗ್ಲೀಷ್ ಬ್ಲಾಗ್‍ನೆಲ್ಲೂ ಅಡಗಿ ಕುಳಿತಿತ್ತು. ಈ ಸಲ ಸುಧಾ ಯುಗಾದಿ ವಿಶೇಷಾಂಕದಲ್ಲಿ 'ಕಾರ್ ಡ್ರೈವಿಂಗ್ ಕಲಿತದ್ದು' ಅನ್ನೋ ಶೀರ್ಷಿಕೆಯಲ್ಲಿ ಲೇಖನ ಆಹ್ವಾನಿಸಿದಾಗ ನನ್ನ ಇಂಗ್ಲೀಷ್ ಬ್ಲಾಗ್‍ನಲ್ಲಿ ಇದ್ದ ನನ್ನ ಕಾರು ಕತೆಯನ್ನ (ನನ್ನ ಅನುಮತಿ ಪಡೆದು!)ಕನ್ನಡಕ್ಕೆ ಭಾವಾನುವಾದ ಮಾಡಿ, ಅದನ್ನು ಸುಧಾಕ್ಕೆ ಕಳಿಸಿದವಳು ನನ್ನ ಹುಡುಗಿ !!

ಅದು ಈ ಸರ್ತಿ ಸುಧಾ ವಿಶೇಷಾಂಕದಲ್ಲಿ ಪ್ರಕಟನೂ ಆಗಿ, ಇದರ ಕ್ರೆಡಿಟ್ ಯಾರಿಗೆ ಹೋಗಬೇಕು ಅಂತಾ ನಾನು ನನ್ನ ಹುಡುಗಿ ಪ್ರೀತಿಯ ಜಗಳವಾಡಿದ್ದು ಆಯ್ತು !

ಲೇಖನವನ್ನು ಮೂಲಕ್ಕೆ ಧಕ್ಕೆಯಾಗದಂತೆ ಇರುವ ಪದಗಳ ಸಂಖೆಯ ನಿರ್ಬಂಧದಲ್ಲಿ ಭಾವಾನುವಾದ ಮಾಡೋದು ಕಷ್ಟದ ಕೆಲಸ,ಭಾವಾನುವಾದ ಮಾಡಿದ ಅವಳಿಗೆ ಇದರ ಕ್ರೆಡಿಟ್ಟು ಅಂತಾ ನಾನೆಂದೆ. ಯಾವಾಗಲೂ ಮೂಲ ಲೇಖನನೇ ಮೂಖ್ಯ,ಅದರಲ್ಲಿ ಸತ್ವ ಇದ್ದರೆ ಅನುವಾದ ಮಾಡೋದು ಸುಲಭ ಅಂತಾ ಕ್ರೆಡಿಟ್ಟು ನನ್ನ ಕಡೆ ಕಳಿಸಿದಳು ಅವಳು.ನಮ್ಮ ಪ್ರೀತಿ-ಜಗಳಗಳು ಹೀಗೆ ಇರುತ್ತೆ ಬಿಡಿ !!

ನಮ್ಮದು ಹೆತ್ತವರಿಗೆ ಹೆಗ್ಗಣನೂ ಮುದ್ದು ತರ ಆಯ್ತು..ನಿಮಗೇನು ಅನಿಸ್ತು ಅನುವಾದ ಓದಿ?

ನೀವೇನಂತೀರಾ..ಅನುವಾದಗೊಂಡ ಲೇಖನಗಳಲ್ಲಿ ಯಾರಿಗೆ ಜಾಸ್ತಿ ಪಾಲು..ಮೂಲ ಲೇಖಕ(ಕೆ)ಅಥವಾ ಭಾವಾನುವಾದ ಲೇಖಕ(ಕೆ)? ಅಥವಾ ಸೇಫ್ ಆಗಿ ಇಬ್ಬರಿಗೂ ಸಮಪಾಲು ಅಂತೀರಾ ?

15 comments:

ರಾಜೇಶ್ ನಾಯ್ಕ said...

ಶಿವ್ ಶಂಕರ್,

ಮುಲ ಲೇಖಕನಿಗೇ ಜಾಸ್ತಿ ಪಾಲು ಸಲ್ಲಬೇಕು. ಆದರೆ ಇಲ್ಲಿ ಭಾವಾನುವಾದ ಲೇಖಕಿ ನಿಮ್ಮ ಹುಡುಗಿಯಾದ್ದರಿಂದ ಇಬ್ಬರಿಗೂ ಸಮಪಾಲು ನೀಡಿದರೆ ಚೆನ್ನ.

Shiv said...

ರಾಜೇಶ್,
ವಂದನೆಗಳು :)
ನಾನು ಇದರ ಬಗ್ಗೆ ಅಲ್ಲಾ..ಸಾಮಾನ್ಯವಾಗಿ ಭಾವಾನುವಾದಗಳ ಬಗ್ಗೆ ಕೇಳ್ತಾ ಇದ್ದೆ..

Mahantesh said...

re nimma car lekhana sudha visheshankdalli odidde...adre neevu heLida haage adu nimma hudagi hesrinalli illa...shivshinkar USA aMta ide....
avaagane nanage doubt baMdittu..

Shiv said...

ಮಹಾಂತೇಶ್,
ಹೂಂ ರೀ..ನನ್ನ ಹುಡುಗಿ ಬರೆದು ಅದನ್ನು ನನ್ನ ಹೆಸರಲ್ಲಿ ಕಳಿಸಿದಾಳೆ !

sritri said...

ನಿಮ್ಮಿಬ್ಬರಿಗೂ ಜಗಳ ಬೇಡ, ಕಾರಿಗೆ ಕ್ರೆಡಿಟ್ ಕೊಡೋಣ. ಅದು ಜಗಳಕ್ಕೆ ಬರೋಲ್ಲ ತಾನೇ? :)

Shiv said...

ತ್ರಿವೇಣಿಯವರೇ,

ಶೀತಲಸಮರದ ಸಮಯದಲ್ಲಿ ಈ ಕಡೆ ಅಮೇರಿಕೆಯೂ ಬೇಡಾ ಆ ಕಡೆ ರಷ್ಯದ ಸಹವಾಸನೂ ಬೇಡ ಅಂದ ಮೂರನೇಯ ರಾಷ್ಟ್ರಗಳ ಅಭಿಪ್ರಾಯದಂತಿದೆ ನಿಮ್ಮ ನಿರ್ಣಯ :)

ಇಲ್ಲಾ..ಕಾರು ಜಗಳಕ್ಕೆ ಬರೋಕೆ ನಾ ಬಿಡೋಲ್ಲ !

mouna said...

i remember reading the article in english!! it was a "friend's" story... :) alve?

Shiv said...

ಮೌನ,

ಹೌದು ಇಂಗ್ಲೀಷ್ ಬ್ಲಾಗ್‍ನಲ್ಲಿ ನಾನು third person ಉಪಯೋಗಿಸಿದ್ದೆ :)

SHREE said...

ಅನುವಾದಕ್ಕೇ ಕ್ರೆಡಿಟ್ ಸೇರಬೇಕು. ಲೇಖಕ ಎಷ್ಟು ಚೆನ್ನಾಗಿ ಬರೆದರೂ ಕೆಟ್ಟ ಅನುವಾದ ಲೇಖನದ ರಸವೆಲ್ಲ ಕಿತ್ಕೊಂಬಿಡ್ತದೆ... ಅಲ್ವಾ? ಜಾವೇದ್ ಅಖ್ತರ್ ಅವರ ಕವನ ಸಂಕಲನ ('ತೀರ್' ಇರಬೇಕು ಹೆಸರು, ನೆನಪಿಲ್ಲ ಸರಿಯಾಗಿ) 'ಬತ್ತಳಿಕೆ' ಅನ್ನೋ ಹೆಸ್ರಲ್ಲಿ ಕನ್ನಡಕ್ಕೆ ಅನುವಾದ ಆಗಿದೆ, ಓದಿ ನೋಡಿ.. :)

Shiv said...

ಶ್ರೀ,
ನಾನು ಅದನ್ನೇ ಹೇಳಿದ್ದು ಮೂಲಕ್ಕೆ ದಕ್ಕೆಯಾಗದಂತೆ ಅನುವಾದ ಮಾಡೋದು ಕಷ್ಟದ ಕೆಲ್ಸ.ಅಂದಾಗೆ 'ಬತ್ತಳಿಕೆ' ಹೇಗಿದೆ ?

SHREE said...

ಓದಿ ನೋಡಿ ಸಾರ್, ನಮ್ಮ ಅಭಿಪ್ರಾಯ ಇತರರ ಮೇಲೆ ಹೇರುವುದು ತಪ್ಪಲ್ಲವೆ? :)

Satish said...

ಸುಮ್ನೇ ಲೇಖಕಿಗೆ ಕ್ರೆಡಿಟ್ ಕೊಟ್ಟು ಸಂಸಾರ ಸೂತ್ರವೊಂದನ್ನು ಕಲಿತ ಹೆಮ್ಮೆಯಿಂದ ಬೀಗಿ...ಇಲ್ಲಾಂದ್ರೆ ಮೇಷ್ಟ್ರು ಹತ್ರ ಮಾತ್ನಾಡಿ ಅವರು ಕಲಸ್ತಾರೆ ನಿಮಗೆ!

Shiv said...

ಸತೀಶ್,
ಹಿಹೀ..ತಮ್ಮ ಅನುಭವಾಮೃತದಿಂದ ಬಂದಿರುವ ಮಾತುಗಳು ! ಹಾಗೆಯೇ ಮಾಡಿ ಬೀಗುತ್ತೇನೆ :)

vee manasina mathu said...

gandina vijayada hinde hennu eddallu annu

asha said...

nimage shubhashayagalu. ennu hecchina sundara barahagalu nimminda nireekshisuttiddeve. paradeshadaluu kannada kasturi aralali.