Monday, May 14, 2007

ಒಮ್ಮೆ ನೋಡಿದರೆ ಇನ್ನೊಮ್ಮೆ !

"ನಟ ಸಾರ್ವಭೌಮ, ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿರುವ ,ಇಂಪಾದ ಹಾಡುಗಳಿಂದ,ಮಧುರವಾದ ಸಂಗೀತದಿಂದಲೂ,ಭಯಂಕರ ಹೋರಾಟಗಳಿಂದಲೂ ಒಡಗೂಡಿರುವ ಸಂಪೂರ್ಣ ಪ್ರಮಾಣಿತ ಸಿನಿಮಾಸ್ಕೋಪ್ ಕನ್ನಡ ಚಲನಚಿತ್ರ- ಅದೇ ಕಣ್ಣು...ಅದೇ ಕಣ್ಣು.

ದಿನಾ ಮೂರು ಆಟಗಳು. ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಜಯಶ್ರೀ ಚಿತ್ರಮಂದಿರದಲ್ಲಿ. ಮರೆತು ನಿರಾಶರಾಗಿದೀರಿ,ಚಿತ್ರಕಲಾ ರಸಿಕರೇ.ಒಮ್ಮೆ ನೋಡಿದರೆ ಇನ್ನೊಮ್ಮೆ, ಇನ್ನೊಮ್ಮೆ ನೋಡಿದರೆ ಮೊಗದೊಮ್ಮೆ ನೋಡಲೇಬೇಕು ಎನಿಸುವ ಚಿತ್ರ..ಅದೇ ಕಣ್ಣು"

ಈಗಂತ ಆ ಆಟೋ ಊರಿನ ಬೀದಿಗಳಲ್ಲಿ ಸುತ್ತಾಡುತ್ತ ಸಿನಿಮಾ ಬಂದ ಸುದ್ದಿ ಜಾಹೀರುಗೊಳಿಸುತ್ತಿದ್ದರೆ, ಒಂದು ಕ್ಷಣ ಕೆಲಸ ನಿಲ್ಲಿಸಿ ಎಲ್ಲರೂ ಆ ಆಟೋ ಕಡೆಗೆ ನೋಡುವವರೆ. ಆಟೋದ ಹಿಂದುಗಡೆ ಆ ಸಿನಿಮಾದ ಪೋಸ್ಟರ್. ಆಟೋದಲ್ಲಿ ಕುಳಿತು ಸಿನಿಮಾದ ಬಗ್ಗೆ, ಅದರ ಬಗ್ಗೆ ಒಂದೆರಡು ಸಾಲಲ್ಲೇ ಹೇಳುವ ಅದೇ ಪರಿಚಿತ ಧ್ವನಿ.

ಆ ಊರಲ್ಲಿ ಯಾವ ಸಿನಿಮಾ ಬಂದರೂ, ಅದರ ವರ್ಣನೆ ಎಲ್ಲರ ಕಿವಿಯಲ್ಲಿ ಬೀಳ್ತಾ ಇದದ್ದು, ಮೇಲಿನ ಸಾಲುಗಳಲ್ಲೇ, ಅದೇ ಧ್ವನಿಯಲ್ಲಿ. ಸಿನಿಮಾದ ಹೆಸರು ಬದಲಾಗುತಿತ್ತು, ನಟ-ನಟಿಯರ ಹೆಸರು, ಸಿನಿಮಾ ಮಂದಿರದ ಹೆಸರು ಬದಲಾಯಿಸಿ ಮತ್ತೆ ಅದೇ ಗೊತ್ತಿರುವ ಸಾಲುಗಳು..'ಒಮ್ಮೆ ನೋಡಿದರೆ ಇನ್ನೊಮ್ಮೆ..'

ಅದಕ್ಕೂ ಮೊದಲ ಸಿನಿಮಾ ಪ್ರಚಾರಕ್ಕೆ ಆಟೋದ ಬದಲು ಎತ್ತಿನ ಗಾಡಿ ಬಳಸುತ್ತಿದ್ದರು ಅನ್ನೊ ನೆನಪು.ಆ ಎತ್ತಿನ ಗಾಡಿಗೆ ಸಿನಿಮಾದ ಎರಡು ಬೃಹತ್ ಪೋಸ್ಟರ್‍ಗಳನು ಹಚ್ಚಿ ಅದರಲ್ಲಿ ಮೈಕ್ ಹಿಡಿದು ಅದೇ ಧ್ವನಿ, ಅದೇ ಸಾಲುಗಳು.

ಹೀಗೆ ಪ್ರಚಾರ ಕೇಳಿ ಸಿನಿಮಾ ನೋಡಲು ಹೋದರೆ ಕೆಲವೊಮ್ಮೆ ವಿಪರೀತ ಜನಜಂಗುಳಿ. ಟಿಕೇಟ್ ಕೊಡುವ ಕೌಂಟರ್‌ಗೆ ಉದ್ದದ ಸಾಲು. ಕೌಂಟರ್ ಎಕ್ಕೆಡೆಗಳಲಿ ತಂತಿಯ ಜಾಲರಿ. ಅದು ಯಾಕೇ ಬೇಕಿತ್ತು ಅನ್ನೋದು ನನಗೆ ತಿಳಿದೇ ಇರಲಿಲ್ಲ, ಅದೊಂದು ಟಿಕೇಟ್ ಕೊಳ್ಳುವಾಗಿನ ಪ್ರಸಂಗ ನೋಡುವವರೆಗೆ.

ನಾನು ಆವಾಗ ಸಿನಿಮಾ ನೋಡುತ್ತಿದ್ದೆ ಕಡಿಮೆ. ಅದ್ಯಾವುದೋ ತುಂಬಾ ಚೆನ್ನಾಗಿದೆ ಅಂತಾ ಗೆಳೆಯರು ಹೇಳಿದ ಮೇಲೆ ಆ ಸಿನಿಮಾ ನೋಡಲು ಹೊರಟರೆ ಅಲ್ಲಿ ಜನ ಜಾತ್ರೆ. ಬಂದದ್ದಾಗಿದೆ ಸಾಲಿನಲ್ಲಿ ನಿಂತು ನೋಡೋಣವೆಂದು ನಿಂತ ಕೆಲವು ಕ್ಷಣದಲ್ಲೇ ಟಿಕೇಟ್ ಕೊಡಲು ಶುರು. ಮೊದಮೊದಲು ಸರಾಗವಾಗೇ ಸಾಗಿದ್ದ ಸಾಲಿನಲ್ಲಿ ತರಲೆ ಶುರುವಾಗಿದ್ದು ಮುಂದಿದ್ದ ಯಾರೋ ಒಬ್ಬ ಸಾಲಿನಲ್ಲಿ ಹಿಂದಿದ್ದ ತನ್ನ ಸ್ನೇಹಿತನನ್ನು ತನ್ನೆಡೆಗೆ ಕರೆದಾಗ. ನನಗೋ ಆಶ್ಚರ್ಯ, ಈ ಜಾಲರಿ ಅಡಿಯಲ್ಲಿ ನಿಂತಿದ್ದೆವೆ, ಅದೂ ಒಬ್ಬರೇ ನಿಲ್ಲುವಷ್ಟು ಸ್ಥಳವಿರುವ ಸಾಲಿನಲ್ಲಿ. ಇವನು ಮುಂದೆ ಹೇಗೆ ಹೋದಾನು ಅಂತಾ. ನನ್ನ ಊಹೆಗೂ ಮೀರಿ, ಆ ವ್ಯಕ್ತಿ ಆ ತಂತಿ ಜಾಲರಿಗೆ ನೇತು ಬಿದ್ದು ಅಲ್ಲಲ್ಲಿ ಗೋಡೆಗೆ ಕಾಲಿಟ್ಟು,ಜಾಲರಿಗೆ ಒದಗಿಸಿದ್ದ ಕಂಬಗಳ ಹಿಡಿದು ನಮ್ಮ ತಲೆಯ ಮೇಲೆ ಸಾಗಿ ಹೋಗಿದ್ದ. ಸ್ಪೈಡರ್ ಮ್ಯಾನ್‍ನಂತೆ ! ಕುಂಭಮೇಳದಲ್ಲಿ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ತಮ್ಮನಿರಬೇಕು!

ಅಂದಾಗೆ ಕಳೆದ ವಾರ ಇಲ್ಲಿ ಕನ್ನಡ ಸಿನಿಮಾ ನೋಡೋಕೇ ಹೋದಾಗ ಇದೆಲ್ಲಾ ನೆನಪಾಯ್ತು.

ಮುಂಗಾರು ಮಳೆ ಅನ್ನೋ ಆ ಸೂಪರ್ ಹಿಟ್ ಚಿತ್ರವನ್ನು ಅಮೇರಿಕೆಗೆ ಕರೆ ತಂದಿದ್ದರು. ಅಫೀಸ್‍ನಲ್ಲಿ ಕುಳಿತುಕೊಂಡೇ ಪೋನ್‍ ಮೂಲಕ ಟಿಕೇಟ್ ಕಾಯ್ದಿರಿಸಿ, ನಂತರ ಅವತ್ತೊಂದಿನ ಭಾನುವಾರ ಬಹುತೇಕ ತುಂಬಿದ್ದ ನಾಸ್ ಚಿತ್ರಮಂದಿರದಲ್ಲಿ ಅಷ್ಟೊಂದು ಕನ್ನಡಿಗರೊಂದಿಗೆ ಕುಳಿತು ಚಿತ್ರ ನೋಡಿದ್ದು ಖುಷಿಯೆನಿಸಿತು.

ಚಿತ್ರ ನೋಡಿ ಮುಗಿಸಿ ವಾಪಸ್ ಆಗಬೇಕಾದರೆ ಬೇಡಬೇಡವೆಂದರೂ ನಮ್ಮ ಆ ಊರ ಸಿನಿಮಾ ಸಂಬಂಧಿ ಈ ಕತೆಗಳು ತಲೆಯಲ್ಲಿ ರೀಲ್‍ನಂತೆ ಬರ್ತಾ ಇದ್ದವು.

ಟಿಕೇಟ್ ತಗೋಬೇಕಾದರೆ ನಮ್ಮ ಆ ಊರಲ್ಲಿ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಸಾಲಿನಲ್ಲಿ ನಡೆಯುತ್ತಿದ್ದ ಜಟಾಪಟಿಗಳು. ಯಾರೋ ಸಾಲಿನಲ್ಲಿ ಮಧ್ಯ ಸೇರಕೊಂಡರು ಅಂತಾ ಜಗಳ ಶುರುವಾಗ್ತಿತ್ತು. ಹೌಸ್‍ಫುಲ್ ಸಿನಿಮಾಕ್ಕೆ ಟಿಕೇಟ್ ಕೊಡುವವನ ಗತ್ತು ನೋಡೇ ಆನಂದಿಸಬೇಕು !

ಇನ್ನು ಮಂಗಳವಾರ ಬಂತೆಂದರೆ ಅದು ಬೇರೇನೇ ಕತೆ. ಅವತ್ತು ಊರಲ್ಲಿ ಸಂತೆ. ಅಕ್ಕಪಕ್ಕದ ಹಳ್ಳಿಗಳಿಂದ ಜನ ತರಕಾರಿ-ಕಾಳು-ಬೆಣ್ಣೆ ಇತ್ಯಾದಿಗಳನ್ನು ಸಂತೆಗೆ ತಂದು ಮಾರಿ, ಹಳ್ಳಿಗೆ ಮರಳುವುದಕ್ಕಿಂತ ಮುಂಚೆ ಒಂದು ಸಿನಿಮಾ ನೋಡಿಕೊಂಡು ಹೋಗುವುದು ಪರಿಪಾಠ. ಅವತ್ತು ಎಂತದೇ ಸಿನಿಮಾ ಇರಲಿ ಎಲ್ಲಾ ಹೌಸ್‍ಫುಲ್.

ಇನ್ನು ಟಾಕೀಸ್ ಒಳಗಡೆ ಕತೆಗಳು ಅಷ್ಟೇ ರೋಚಕವಾಗಿರುತ್ತಿದ್ದವು. ಸೀಟ್ ನಂಬರ್ ಇರ್ತಾ ಇಲ್ಲದ ಕಾರಣ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು. ಕೆಲವರು, ಯಾರು ಬರದೆ ಇದ್ದರೂ, ಸುಮ್ಮನೆ ಒಂದೆರಡು ಸೀಟ್ ಹಿಡಿದುಕೊಂಡು ಸೀಟ್ ಖಾಲಿ ಇದೆಯಾ ಅಂತಾ ಬಂದವರಿಗೆ 'ಇಲ್ಲಿ ಬರ್ತಾರೀ' ಅನ್ನೋದು ಸಾಮಾನ್ಯವಾಗಿತ್ತು. ಹಾಗೇ ಕೆಲವೊಮ್ಮೆ ಇಂಟರ್‌ವೆಲ್ ಮುಂಚೆ ಖಾಲಿ ಇರ್ತಾ ಇದ್ದ ಬಾಲ್ಕನಿ, ಇಂಟರ್‌ವೆಲ್ ನಂತರ ಫುಲ್ ! ನೋಡಿದರೆ ಇಂಟರ್‌ವೆಲ್ ಮುಂಚೆ ಮುಂದಿನ ಸೀಟ್‍ಗಳ ಪಡ್ಡೆಗಳೆಲ್ಲಾ ಅಲ್ಲಿಗೆ ವರ್ಗಾವಾಗಿಬಿಟ್ಟಿರಿತ್ತಿದ್ದವು. ಮೊದಲೇ ಹೇಳಿದ ಹಾಗೆ, ಸೀಟ್ ನಂಬರ್ ಇರ್ತಾ ಇಲ್ಲಾ, ಕೆಲವೊಮ್ಮೆ ಬಾಲ್ಕನಿನೂ ಖಾಲಿ ಹೊಡಿತಾ ಇರ್ತಿತ್ತು.

ಮುಂದಿನಸಾಲು ಸೀಟ್ ಅಂದಕೂಡಲೇ ಅಲ್ಲಿನ ಟೆಂಟ್ ಸಿನಿಮಾಗಳ ನೆನಪಾಯ್ತು. ಅವುಗಳಲ್ಲಿ 'ಗಾಂಧಿ ಸೀಟ್' ಅಂತಾ ಇರ್ತಿತ್ತು. ಪರದೆಯ ಮುಂದಿನ ಮೊದಲ ಕೆಲವು ಸಾಲುಗಳೇ ಈ ಗಾಂಧಿ ಸೀಟ್‍ಗಳು. ಅವಕ್ಕೆ ಯಾಕೇ ಗಾಂಧೀ ಸೀಟ್ ಅಂತಿದ್ದರೂ ಸರಿ ಗೊತ್ತಿಲ್ಲಾ. ಬಹುಷಃ ದುಡ್ಡು ಕಡಿಮೆಯಿದ್ದದಕ್ಕೆ ಇರಬಹುದು. ಆದರೆ ಸಿನಿಮಾ ಪೂರ್ತಿ ಅಸ್ವಾದಿಸುತ್ತಿದ್ದವರು ಈ ಗಾಂಧಿ ಸೀಟ್ ಪ್ರೇಕ್ಷಕರು. ಸಿನಿಮಾದಲ್ಲಿ ವಿಷಿಲ್ ಹಾಕೋದು, ಚಪ್ಪಾಳೆಗಳು, ಕೇಕೇ ಹಾಕೋದು..ಹೆಚ್ಚಿನ ಭಾಗವಹಿಸುವಿಕೆ ಇಲ್ಲಿಂದಲೇ. ಅದರ ಜೊತೆಗೆ ಕೆಲವೊಮ್ಮೆ ಪರದೆಯ ಮೇಲೆ ನಾಲ್ಕಾಣೆ-ಎಂಟಾಣೆ ನಾಣ್ಯಗಳನ್ನು ಎಸೆಯುತ್ತಿದ್ದವರು ಉಂಟು !

ಆ ಊರಿನ ಒಂದೊಂದು ಸಿನಿಮಾ ಮಂದಿರಗಳು ಒಂದೊಂದು ಬ್ರಾಂಡ್ ಆಗಿಬಿಟ್ಟಿದ್ದವು. ಜಯಶ್ರೀ ಹೊಸ ಕನ್ನಡ ಚಲನಚಿತ್ರಗಳಿಗೆ, ಶ್ರೀಕಾಂತ್ ಹೊಸ ಇಂಗ್ಲೀಷ್-ಹಿಂದಿ ಚಿತ್ರಗಳಿಗೆ, ಶೋಭಾ ಹಳೆ ಕನ್ನಡ-ಹಿಂದಿ ಚಿತ್ರಗಳಿಗೆ, ಚಿತ್ರಾ ಹೊಸ ಹಿಂದಿ-ಇಂಗ್ಲೀಷ್ ಚಿತ್ರ ವಿತ್ ಟೆಂಟ್ ಅನುಭವಕ್ಕೆ ಮತ್ತು ಕೃಷ್ಣಾ 'ದೇವರ' ಚಿತ್ರಗಳಿಗೆ ! ಅದರಲ್ಲೂ ಚಿತ್ರಾ ಮತ್ತು ಕೃಷ್ಣಾ ಚಿತ್ರಮಂದಿರಗಳು ಅಲ್ಲಿನ ಹೊಳೆ ಹತ್ತಿರವಿದ್ದು, ಸೇತುವೆ ದಾಟಿ ಚಿತ್ರಾಕ್ಕೆ ಹೋಗಬೇಕಿತ್ತು. ಯಾರಾದರೂ ಗೆಳಯರು ಅಲ್ಲಿ ಕೃಷ್ಣಾ ಚಿತ್ರಮಂದಿರದ ಸುತ್ತಮುತ್ತ ಕಂಡರೆ ಮುಗಿಯಿತು ಮಾರನೇ ದಿನ ಶಾಲೆಯಲ್ಲಿ ಹುಡುಗರೆಲ್ಲಾ ಹಾಗೇ ಕಂಡವನೆಡೆಗೆ 'ಯಾವುದು ಸಿನಿಮಾ?' ಅಂತಾ ಕಣ್ಣು ಮಿಟುಕಿಸಿ ಕೇಳಿದ್ದೇ ಕೇಳಿದ್ದು !

ಅಂದಾಗೆ ನೀವು ಸ್ಪೈಡರ್ ಮ್ಯಾನ್-೩ ನೋಡಿದೀರಾ? ಕಳೆದ ವಾರದಲ್ಲಿ ಐ-ಮ್ಯಾಕ್ಸ್ ಥಿಯೇಟರ್‌ನ ಬೃಹತ್ ಪರದೆ ಮೇಲೆ ನನ್ನ ಸ್ನೇಹಿತರೊಂದಿಗೆ ನೋಡೋಕೇ ಹೋಗಿದ್ದೆ. ಆನ್-ಲೈನ್‍ನಲ್ಲಿ ಸೀಟ್ ಬುಕ್ ಮಾಡಿ, ಅದರ ಜೊತೆ ನಮಗೆ ಬೇಕಾದ ಕೊನೆ ಸಾಲಿನಲ್ಲಿ ಸೀಟ್‍ಗಳನ್ನು ಬುಕ್ ಮಾಡಿದ್ದೆವು.ಐ-ಮ್ಯಾಕ್ಸ್‍ದಲ್ಲಿ ಆ ಸಿನಿಮಾ ನೋಡೋದು ಸೂಪರ್ ಆಗಿತ್ತು!

16 comments:

December Stud said...

LOL....nice write up. I probably didn't have your 'experience' when it comes to watchign movies, but still....oh and I watched 'adE kaNNu' twice !!!

I was out of town, so couldn't watch 'muMgAru maLe'....out of twon next weekend too, so can't watch it even then. The songs are awesome, though.

Spider Man-3 , huh ? I preferred to watch 'Next', but man what a stupid movie that turned out to be. I had a hunch anyway.

Shiv said...

DS,

ಎರಡು ಸಲ ಅದೇ ಕಣ್ಣು ನೋಡಿದೀರಾ ..
ರಾಜ್ ಅಭಿಮಾನಿ ದೇವರುಗಳಲ್ಲಿ ನಿಮ್ಮ ಹೆಸರು ಒಂದು ಅನಿಸುತ್ತೆ :)

ಮುಂಗಾರು ಮಳೆ ಚೆನ್ನಾಗಿದೆ..ಹಾಡು ಸೂಪರ್.ಇಲ್ಲಿ ಸಿನಿಮಾ ನೋಡಬೇಕಾದರೆ ಥಿಯೇಟರ್‍ನಲ್ಲಿ ವಿಷಿಲ್‍ಗಳು ಬಿದ್ದವು!

ಸ್ಪೈಡಿ-೩ ..ಕೂಲ್..ಆದರೆ ಭಾಗ ೧ ಮತ್ತು ೨ ರಷ್ಟು ಇಷ್ಟವಾಗಲಿಲ್ಲ

ಸುಶ್ರುತ ದೊಡ್ಡೇರಿ said...

ನಮ್ಮೂರ ರಸ್ತೆಯಲ್ಲಿ "ಆಟ ಆಟ ಆಟ" (ಯಕ್ಷಗಾನ) ಎಂದು ಕೂಗುತ್ತಾ ಹೋಗುವ ಆಟೋ ನೆನಪಾಯಿತು. ಹಾಗೆಯೇ ನಮ್ಮ ಸೊರಬದ ಥಿಯೇಟರೂ ನೆನಪಾಯಿತು. ನಮ್ಮ ಸೊರಬದ ಥಿಯೇಟರಿನಲ್ಲಿ ನೀವು ಮುಂಗಾರು ಮಳೆ ಸಿನಿಮಾವನ್ನು 'ವಿಥ್ ರಿಯಲ್ ಎಫೆಕ್ಟ್ಸ್' ನೋಡಬಹ್ದು. ಸಿನಿಮಾ ನೋಡುತ್ತಿರಬೇಕಾದರೆ ಮಳೆಯೇನಾದರೂ ಬಂದರೆ ಥೇಟರ್ ಸೋರುತ್ತದೆ!! ನಾವು ಕಾಲೇಜು ದಿನಗಳಲ್ಲಿ ಛತ್ರಿ ಹಿಡಿದು ಕುಳಿತು ಪಿಚ್ಚರ್ ನೋಡಿದ್ದು ಸುಳ್ಳಲ್ಲ. :)

ಆದರೂ, ಈಗ ನೂರಾರು ರೂಪಾಯಿ ಕೊಟ್ಟು ಮಲ್ಟಿಪ್ಲೆಕ್ಸಿನಲ್ಲಿ ಕುಳಿತು ಲೇಸ್ ತಿನ್ನುವ ನಮ್ಮ ಖುಷಿಗಿಂತ ಬರೀ ಹನ್ನೆರಡು ರೂಪಾಯಿ ಕೊಟ್ಟು ಟಿಕೀಟು ಕೊಂಡು, ಒಂದು ರೂಪಾಯಿ ಕಡ್ಲೆಕಾಯಿ ತಗೊಂಡು ತಿನ್ನುತ್ತಾ ಸಿನಿಮಾ ಸವಿಯುವುದರಲ್ಲಿ ಹೆಚ್ಚು ಖುಷಿಯಿತ್ತು ಅನ್ನಿಸೊತ್ತೆ...

Shiv said...

ಸುಶ್,
ಛತ್ರಿ ಹಿಡಿದು ಸಿನಿಮಾ ನೋಡೋದು..ಅಮೋಘ !
ಅದು ವಿತ್ ರಿಯಲ್ ಎಫೆಕ್ಟ್ಸ್ :)

ಕಡಲೆ ಕಾಯಿ ಸವಿ..ಸಂಪೂರ್ಣ ಸರಿ

mouna said...

nimmashtu anubhava nammali illa, aadre yes, i've had my share of fun in cinema halls.

namma mane hattira urvashi theatre ide. usually alli chennagiro cinemagaLLannu pradarshisuvudu ondu anisike. bhanuvaara, alli ticket paDeyabekendare, beLLage 8:30kke queue nalli nillabeku, illandre ticketu illa, cinemanu illa. alli khuddagi ticket tegedukoLLabeku. ommomme, queue beLagge 6 rindane shuruaagiruttade :D

bhanuvaara, yellaru niddegeTTu bandiruttare...

Shiv said...

ಮೌನ,

ಉರ್ವಶಿ ಥಿಯೇಟರ್‍ನಲ್ಲಿ ಯಾವಾಗಲೂ ರಶ್ ಇದ್ದೇ ಇರುತ್ತೆ ಅಲ್ವಾ. ಭಾನುವಾರ ನಿದ್ದೆಗೆಟ್ಟು ಸಿನಿಮಾ ನೋಡೋದು :)

Vidya said...

Shiv,

Harihara na istu bega maretubiTra athva sariyagi explore maDilvo??? Alli innu ondu theatre ittu…Raghavendra antha. Adu kuDa Krishna, Chitra thara tent. mostly Hindi cinema bartittu. Chitra dalli almost all newly released hindi movies barta ittu. nammorgintha nimmorigene hindi film bega barutte antha Davangere jana urkoLta idru, nenpidena??

Intha theatre gaLalli movie noDodu onthara advantage.. ond veLe cinema enadru chennagirlilla andru nu loss enu aagtha ilrilla. Gandhi seat na audience chennage entertainment koDta idru, tamma comments gala mukhanthara :D…

Had a similar experience here after ages when I watched Mungaru Male in Kamakya, Blore couple of weeks back…. ‘Anisuthide…’ antha haaDu start aagidde taDa, aagle jana whistle maaDokke start maaDidru.

I still remember….annual exams mugida next day ne movie ge plan maaDtha idvi. Aa movie este keTdaagirli, friends ella ond kaDe seri, hoDedaaDkonDu ticket togonDu movie noDo maja ne bere irtittu. Aaga sigtidda kaDme pocket money nalle maaDtidda kuLe aatagaLe bere…really those were the days…

Karthik said...

ಹೌದು ಸಿನಿಮಾ ನೋಡೋ ಶೈಲಿ ತುಂಬ ಬದಲಾಗಿದೆ. ಮುಂಚೆ ಸಿನಿಮಾಗೆ ಹೋಗೋದು ಅಂದ್ರೆ ಅದೊಂದು ದೊಡ್ಡ plan. ಮನೆಯವರೆಲ್ಲ ಒಟ್ಟಿಗೆ ಹೋಗೋದೇನು, ಅಲ್ಲಿ ಪಾಪ್ಕಾರ್ನ್ ತಿನ್ನೋದೇನು.. ಸೂಪರಾಗಿರ್ತಿತ್ತು. ಈಗ ಸಿನೆಮಾ ನೋಡೋ ಶೈಲಿ ಬಹಳ ಬದಲಾಗಿದೆ.

Shiv said...

ವಿದ್ಯಾ ಅವರೇ,
ರಾಘವೇಂದ್ರ ನೆನಪಿತ್ತು ಆದರೆ ಬರೆಯುವಾಗೆ ಎಲ್ಲೋ ಹೋಗಿಬಿಡ್ತು.ಇಲ್ಲೂ ಅಷ್ಟೇ 'ಅನಿಸುತಿದೆ ಯಾಕೋ' ಹಾಡು ಶುರುವಾಗ್ತಿದಂತೆ ವಿಷಲ್ ಶುರು ಆಗಿಬಿಡ್ತು !
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು

ಕಾರ್ತಿಕ್,
ಪಾತರಗಿತ್ತಿಗೆ ಭೇಟಿ ನೀಡಿದಕ್ಕೆ ವಂದನೆ
ಹೌದು ಸಿನಿಮಾ ನೋಡೋ ಆ ಸಡಗರ ಈಗ ಇಲ್ಲ ಅನಿಸುತ್ತೆ

Raghu said...

haha...thumba channagidhe!

ene heLi..mundhina class alli koothu shilpigaLa madhya chitra nodidharene effect! :D

Sreeharsha said...

ನಾನು ಇತ್ತೀಚೆಗೆ ಊರಿಗೆ ಹೋಗಿದ್ದಾಗ, ಮು೦ದೆ "ಗಾ೦ಧಿ ಕ್ಲಾಸ್"ನಲ್ಲಿ ಕೂತು ನಾವು ನಾಲ್ವರು ಗೆಳೆಯರು ಸಿನಿಮಾ ನೋಡಿ ಬ೦ದೆವು.. ಆಹಾ!!! ಅದರ ಮಜಾನೇ ಬೇರೆ. ಹಾಡುಗಳು ಬರ್ತಿದ್ದರೆ ಕೆಲವರು ಸ್ಕ್ರೀನ್ ಮು೦ದೆ ಡ್ಯಾನ್ಸ್ ಮಾಡೊದನ್ನ ನೋಡೊ ಭಾಗ್ಯ Multiplexಗಳಲ್ಲಿ ಸಿಗಲ್ಲ.

ಹರ್ಷ

Satish said...

ಇಷ್ಟೊಂದ್ ಚಿತ್ರಮಂದಿರಗಳಿರೋ ನಿಮ್ಮ್ ಊರ್ ಯಾವ್ದೂ?

ನಾನಂತೂ ಆಗಿನ್ ಕಾಲ್ದಲ್ಲಿ ನೋಡಿದ್ದ ಸಿನಿಮಾಗಳೇ ಬಂತು, ಈಗೀಗ ಏನನ್ನೂ ನೋಡೋದೇ ಇಲ್ಲ, ಅಪರೂಪಕ್ಕೊಮ್ಮೆ ಕನ್ನಡ ಸಿನಿಮಾಗಳನ್ನ್ ಬಿಟ್ರೆ.

'ಮುಮ' ಸಿನಿಮಾವನ್ನು ಬೆಂಗ್ಳೂರಲ್ಲೇ ನೋಡಿಕೊಂಡ್ ಬಂದೆ, ಬಾಕ್ಸ್ ಆಫೀಸ್ನಲ್ಲಿ ದುಡ್ ಮಾಡಿರ್‌ಬೋದೂ ಆದ್ರೆ ಅಂತಹ ಮಹಾನ್ ಚಿತ್ರ ಅಂತೇನೂ ನನಗನ್ನಿಸ್ಲಿಲ್ಲ.

Anonymous said...

ಅಣ್ಣೋರ ಸಿನಿಮ ಎಷ್ತೋತ್ತು ನೋಡಿದರು ಮಜ ಸಿಗುತ್ತೆ.
ನನ್ನ ಬ್ಲಾಗ್ ನ್ನು, ನಿಮ್ಮ ಬ್ಲಾಗ್ ನಲ್ಲಿ ಕೋಂಡಿಯನ್ನು ಕೊಡಿ:
http://www.kannadakannadi.blogspot.com/

VENU VINOD said...

ನಾನು ಚಿಕ್ಕವನಿದ್ದಾಗ ಹೊರನಾಡು ಕಾಸರಗೋಡಿನ ಕುಂಬಳೆ ಎಂಬಲ್ಲಿ ರಾಮಾಚಾರಿ ಸಿನಿಮಾ ನೋಡಲು ಹೋಗಿದ್ದೆ. ಕನ್ನಡಿಗರು ಅಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಚಿತ್ರ ಹೌಸ್‌ಫುಲ್ ಆಗಿತ್ತು. ಹಾಗೆ ಹಿಂದೆ ಬರುವಾಗ ಕಿಸೆಯಲ್ಲಿದ್ದ ೧೦ ರುಪಾಯಿ(ಆಗ ನಮ್ಮ ಪಾಲಿಗೆ ಅದು ೧೦೦ ರು.ಗೆ ಸಮ) ನೋಟೂ ಕಿಸೆಗಳ್ಳರ ಪಾಲಾಗಿತ್ತು!
ಒಳ್ಳೆಯ ಲೇಖನ

Shiv said...

ರಘು,
ಹೌದು ಗುರು..ಸಕತ್ ಇಪೆಕ್ಟ್ಸ್ ಮುಂದಿನ ಸಾಲುಗಳಲ್ಲಿ..
ಕೆ.ಎರ್.ಮಾರುಕಟ್ಟೆ ಹತ್ತಿರವಿರೋ ಟಾಕೀಸ್‍ನಲ್ಲಿ 'ಲಗಾನ್' ಗಾಂಧೀ ಸೀಟ್‍ನಲ್ಲಿ ನೋಡಿದ್ದೆ..ಆಹಾ..ಎನು ಕಾಮೆಂಟ್ಸ್ ಎನು ತಾನೇ !

ಹರ್ಷ,
ಪರದೆ ಮುಂದೆ ಡ್ಯಾನ್ಸ್..ಕೂಲ್ :)
ಯಾವ ಸಿನಿಮಾಕ್ಕೆ ಹೋಗಿದ್ದೀರಿ?

ಸತೀಶ್,
ನಮ್ಮದು ಹರಿಹರ..
ಹೌದು ಮುಮ ಮಹಾನ್ ಚಿತ್ರ ಅಲ್ಲದಿರಬಹುದು..ಒಪ್ಪತೀನಿ..ಆದರೆ ಪ್ರೇಕ್ಷಕ ಮನೆ ಬಿಟ್ಟು ಟಾಕೀಸ್ ಕಡೆ ಕರೆತಂದಿದ್ದು ಅಂತೂ ಹೌದು

ಕನ್ನಡಕನ್ನಡಿಯ ಮಿತ್ರರೇ,
ಪಾತರಗಿತ್ತಿಗೆ ಸ್ವಾಗತ
ನಿಮ್ಮ ಬ್ಲಾಗ್ ನನ್ನ ಪಟ್ಟಿಯಲ್ಲಿ ಬಂದಿದೆ

ವೇಣು,
ನೀವು ರಾಮಾಚಾರಿ ನೋಡಿ ಹಾಡು ಗುನುಗುತ್ತಾ ಖುಷಿಯಲ್ಲಿರೋದು ನೋಡಿ ಕಿಸೆಗಳ್ಳ ಇದೇ ಸಮಯ ಅಂದಿರಬೇಕು :)

Anonymous said...

http://lauknowhet.la2host.ru/upravlenie-buldozerom.htm bankruptcy laws http://samocon.la2host.ru/lindi_31-12-2008.html bankruptcy sales http://infritac.la2host.ru/lindi_01-05-2009.html businesses in bankruptcy http://netpnichen.la2host.ru/lindi_21-10-2008.htm bankruptcy the skier's edge http://netpnichen.la2host.ru/lindi_01-03-2009.htm ct bankruptcy lawyer http://opcosless.la2host.ru/prodam-polupritsep-samosval.html bankruptcy reform act of 2005 http://corfidow.la2host.ru/frontalniy-pogruzchik-pf.html atlanta georgia low cost bankruptcy http://crysredto.la2host.ru/lindi_18-05-2009.html bankruptcy software http://lauknowhet.la2host.ru/pagesto_120.htm bankruptcy filing own forms
http://lauknowhet.la2host.ru/68-gerosio.html sirius radio bankruptcy http://opcosless.la2host.ru/lindi_30-12-2008.html free bankruptcy public record search http://lauknowhet.la2host.ru/pagesto_120.htm businesses in bankruptcy