Wednesday, June 20, 2007

ಆತ್ಮೀಯ ಆಹ್ವಾನ

ತುಂಗೆಯ ತೀರದಿಂದ ತಂದು ಮಲ್ಲಿಗೆ ಸಸಿಯೊಂದ
ಮನದ ಅಂಗಳದಿ ಹಚ್ಚಿ ಪ್ರೀತಿಯ ಸಿಂಚನ ಮಾಡಲು
ಅರಳಿದೆ ಮೊಗ್ಗು ನನ್ನ ಎದೆಯಂಗಳದಿ
ಪ್ರೀತಿಯ ಪರಿಮಳ ಬೀರಲಿದೆ ನನ್ನ ಮನೆಯಂಗಳದಿ

ಹೀಗೆ ನನ್ನ ಎದೆಯ ತುಂಬಾ ಮೋಹಕ ಸುವಾಸನೆ ಸೂಸುತ್ತಿರುವ ಆ ನನ್ನ ಮಧುರ ಮಲ್ಲಿಗೆಯ ಹೆಸರು ಶಿಲ್ಪಶ್ರೀ.

ಜೀವನದ ಎಲ್ಲಾ ವಸಂತ-ಗ್ರೀಷ್ಮ ಖುತುಗಳನ್ನು ಹಂಚಿಕೊಳ್ಳಲ್ಲಿರುವ ನನ್ನ ಪ್ರೀತಿಯ ಹುಡುಗಿಯನ್ನು ಬಾಳಸಂಗಾತಿಯಾಗಿ ಸ್ಪೀಕರಿಸುವ ಶುಭ ಮೂಹೂರ್ತಕ್ಕೆ ನಿಮಗೆ ಆತ್ಮೀಯ ಆಹ್ವಾನ

ಮುಹೂರ್ತ: ಭಾನುವಾರ ೨೪ ಜೂನ್ ೨೦೦೭, ಬೆಳಿಗ್ಗೆ ೧೦:೩೦ - ೧೧:೩೦
ಸ್ಥಳ: ವೀರಶೈವ ಕಲ್ಯಾಣ ಮಂದಿರ, ಶಿವಮೊಗ್ಗ

ಆರತಕ್ಷತೆ:ಶುಕ್ರವಾರ ೨೯ ಜೂನ್ ೨೦೦೭, ಸಂಜೆ ೭:೦೦ - ೧೦:೦೦
ಸ್ಥಳ:ನ್ಯೂ ಆತಿಥ್ಯ ರೆಸ್ಟೋರೆಂಟ್,ಗಾಂಧೀ ಬಜಾರ್,ಬೆಂಗಳೂರು

ಅಂದಾಗೆ ಇದರ ಜೊತೆ ಇನ್ನೊಂದು ಸಂಭ್ರಮದ ಸುದ್ದಿ ನಿಮ್ಮೊಡನೆ ಹಂಚಿಕೊಳ್ಳಲ್ಲಿಕ್ಕೆ ಇದೆ.
ಮದುವೆಯ ಹಿಂದಿನ ದಿವಸ ಅಂದರೆ ಜೂನ್ ೨೩ಕ್ಕೆ ಶಿವಮೊಗ್ಗದಲ್ಲಿ ನನ್ನ ಚೊಚ್ಚಲ ಪುಸ್ತಕ ’ಸ್ವೀಟ್ ಡ್ರೀಮ್ಸ್ ಅಂದರೇನು!’ ಬಿಡುಗಡೆ ಆಗಲಿದೆ.

ನನ್ನ ಈ ಎಲ್ಲಾ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲ್ಲಿಕ್ಕೆ ನಿಮಗೆ ಮತ್ತೊಮ್ಮೆ ಆಹ್ವಾನ..

ಪ್ರೀತಿಯಿರಲಿ
ಶಿವಶಂಕರ

20 comments:

ರಾಜೇಶ್ ನಾಯ್ಕ said...

ಶಿವ್,

ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದೀರಾ....ಶುಭಹಾರೈಕೆಗಳು. ನಿಮ್ಮ ಪುಸ್ತಕವೂ ಓದುಗರ ಮನ ಗೆಲ್ಲಲಿ ಎಂಬ ಆಶಯ ಕೂಡಾ.

ಸುಪ್ತದೀಪ್ತಿ suptadeepti said...

ಅಭಿನಂದನೆಗಳು ಶಿವ್, ಶುಭ ಹಾರೈಕೆಗಳು ಕೂಡಾ! ಎಲ್ಲಿ ನಮಗೆಲ್ಲ ನೇರಯಾನದ ಸವಲತ್ತು? ಪುಸ್ತಕ ಬಿಡುಗಡೆಗೆ, ಮದುವೆಗೆ, ಮತ್ತು ವಾರದ ನಂತರದ ಔತಣಕ್ಕೆ ಶುಭಾಕಾಂಕ್ಷೆಗಳು ನೇರವಾಗಿಯೇ ತಲುಪಲಿ.

ಮನಸ್ವಿನಿ said...

ಅಭಿನಂದನೆಗಳು ಶಿವ್. ಒಳ್ಳೆಯದಾಗಲಿ :) Air bus ನನ್ನ ಮನೆ ಮುಂದೆ ನಿಲ್ಲುತ್ತೆ ತಾನೆ? :)

ಸಿಂಧು sindhu said...

ಶಿವ್,

ತುಂಬ ಸಂತಸದ ವಿಷಯ. ನಿಮ್ಮ ಹಸಿರು ಕನಸಿನಲ್ಲಿ ಸದಾ ಮಲ್ಲಿಗೆ ಹೂವು ಅರಳಲಿ.

ನಿಮ್ಮ ನೋವು-ನಲಿವಿಗೆ ಜೊತೆಯಾಗಲಿರುವ ಶಿಲ್ಪಶ್ರೀಗೆ ನನ್ನ ಪ್ರೀತಿ ಮತ್ತು ಅಭಿನಂದನೆಗಳು.

ಸ್ವೀಟ್ ಡ್ರೀಮ್ಸ್ ಅಂದರೇನು! ಕಾಯುತ್ತಿದ್ದೇನೆ ಬಿಡುಗಡೆಗೆ, ಓದಿ ತಿಳಿಯಲು. ಕನ್ನಡಕ್ಕೆ ಬರೆದಿದ್ದೀರಿ, ಸುತ್ತ ತಂಪು ಹರಡಲಿದೆ. ಕನಸಿನ ಹೂಮಳೆಯೇ ಹನಿಯಲಿದೆ.

ನಿಮ್ಮ ಸಂತಸದ ಕ್ಷಣಗಳಲ್ಲಿ, ನನ್ನ ಪ್ರೀತಿಯ ನೆನಹುಗಳಿವೆ. ಆಶಯಗಳಿವೆ. ಒಳ್ಲೆಯದಾಗಲಿ. ಮನೆಮನ ತುಂಬಿರಲಿ.

ಸಮರಸವೇ ಜೀವನ.

ಪ್ರೀತಿ ಮತ್ತು ಪ್ರೀತಿ ಮತ್ತು ಪ್ರೀತಿ..
ಸಿಂಧು.

Unknown said...

ಶಿವ್,
ಸಪ್ತಪದಿ ಇಟ್ಟು ಬಾಳ ಪಯಣದಲ್ಲಿ ಸಾಗಲಿಕ್ಕೆ ಹೊರಟಿರುವ ನಿಮಗೆ ಹಾಗು ಶಿಲ್ಪಶ್ರೀಯವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನ೦ದನೆಗಳು.
ನಿಮ್ಮ ಬ್ಲಾಗ್ ಓದಿದವರೆಲ್ಲರಿಗೂ "ಪ್ರೀತಿ ಅ೦ದರೇನು" ಬಗ್ಗೆ ಕುತೂಹಲವಿದ್ದೇ ಇದೆ... :-)
ಒಳ್ಳೇದಾಗ್ಲಿ.

~ಹರ್ಷ

ಶ್ರೀನಿಧಿ.ಡಿ.ಎಸ್ said...

ಶಿವ್,
ನಿಮ್ಮ ಬದುಕಲ್ಲಿ ಮಲ್ಲಿಗೆಯ ಘಮ ಹಬ್ಬಲಿ. ಹಾರಯಿಕೆಗಳು.

VENU VINOD said...

ಶಿವ,
ಬದುಕಿನಲ್ಲೀಗ ಹೊಸತಿರುವಿನತ್ತ ತಿರುಗಿನಿಂತು, ಮನದನ್ನೆಯ ಕೈ ಹಿಡಿಯುವ ಸುಂದರ ಕನಸಿನಲ್ಲಿದ್ದೀರಿ. ನಿಮ್ಮ ಬದುಕಿಗೆ ನಿಮ್ಮ ಕಾರ್ಯಗಳೇ ಶುಭತರಲಿ.
ಇದೇ ಸಂದರ್ಭದಲ್ಲಿ ನೀವು ಹೊರತರುತ್ತಿರುವ ಪುಸ್ತಕ ಓದುವುದಕ್ಕೆ ಕಾತರನಾಗಿದ್ದೇನೆ.

Anonymous said...

ಆತ್ಮೀಯ ಶಿವ್...

ಒಂಟಿಜೀವನ ಬಿಟ್ಟು ಜಂಟಿಜೀವನ ಯಾನ ಆರಂಭಿಸಿದ ನಿಮ್ಮ
ವಿವಾಹೋತ್ಸವಕ್ಕೆ, ದಾಂಪತ್ಯ ಬದುಕಿಗೆ ಶುಭ ಹಾರೈಕೆಗಳು.

Raghavendra D R said...

dhampathya jeevanadha hosa haadhi haRushadindha kooDirali! nanna shubha haaraikegaLu.

MD said...

ಪ್ರೀತಿಯ ಶಿವಣ್ಣನಿಗೆ,
ನಿನ್ನ ಮದುವೆಯ ಮಮತೆಯ ಕರೆಯೋಲೆ ಬೊಗಳೆ ಬ್ಯುರೋದವರಿಂದ ನಮ್ಮ ಕೈ ಸೇರಿತು.
ಎಂದಿನಂತೆ ಪೋಸ್ಟ್ ತಡವಾಗಿ ತಲುಪಿದೆ.
ಆದರೂ ಭರ್ಜರಿ ಊಟಕ್ಕೆ ಇನ್ನೂ ಒಂದು ಚಾನ್ಸೂ ಇದೆ ಅಂತ ತಿಳಿದು ಖುಶಿಯಾಗಿದೆ. ಊಟದ ವ್ಯವಸ್ಠೆ ಎಲ್ಲೀ ಅಂದ್ರೆ ಇಲ್ಲಿಯೇ,ಹತ್ತಿರದಲ್ಲಿ. ನಾವು ಎಡವಿ ಬಿದ್ದರೆ ಊಟದ ಪಂಕ್ತಿಯಲ್ಲೇ ಬಂದು ಬೀಳೋದು. ೨೯ ಜೂನ್, ಶುಕ್ರವಾರ ಅಂದ್ರೆ ವೀಕೆಂಡೂ. ಅದೂ ಸಾಯಂಕಾಲ. ನೀವು ಇಷ್ಟೊಂದು ಪ್ರೀತಿಯಿಟ್ಟು ಕರೆದ ಮೇಲೆ ಬರದೆ ಆದೀತೆ !

ಈ ಪಾತರಗಿತ್ತಿ ಜೋಡಿಗೆ ಸುಂದರ ಹೂವುಗಳ ವನ ಸಿಗಲಿ ಎಂದು ಹಾರೈಸುತ್ತ.
--ಎಮ್ ಡಿ

PRAVINA KUMAR.S said...

ಅಲ್ರಿ, ನಿಮ್ಮ ಮದುವೆ ನಮ್ಮೂರಿನಲ್ಲೆ ನಡೆದರೂ ಗೊತ್ತಾಗಲಿಲ್ಲ. ಆದರೆ, ನಿಮ್ಮ ಮದುವೆ ಇನ್ವಿಟೇಷನ್ ನಮ್ಮ ಆಫೀಸಿಗೆ ಬಂದಿತ್ತು. ನಾವು ಪುಸ್ತಕ ಬಿಡುಗಡೆ ಬಗ್ಗೆ ಚರ್ಚೆ ಮಾಡಿದ್ವಿ. ಅದೇನೆ ಆಗಲಿ ದಾಂಪತ್ಯ ಬದುಕಿಗೆ ಶುಭ ಹಾರೈಕೆಗಳು.

Sushrutha Dodderi said...

ಬಂದೇ ವಿಶ್ ಮಾಡೋಣ ಅಂತಿದ್ದೆ.. ಆದ್ರೂ ಇಲ್ಲೊಮ್ಮೆ 'ಇರ್ಲಿ' ಅಂತ ಹಾರೈಸುತ್ತಿದ್ದೇನೆ: ಶುಭಾಷಯಗಳೂ....

ಸಂತೋಷಕುಮಾರ said...

ಹೊಸ ಬದುಕಿಗೆ ಅಡಿ ಇಡುತ್ತಿರುವ ನಿಮಗೆ ಶುಭವಾಗಲಿ.

Satish said...

ಶಿವು ಸ್ವಾಮಿ ಪತ್ತೇನೇ ಇಲ್ಲಾ ಇತ್ತೀಚೆಗೆ ಅಂತ ಮೇಷ್ಟ್ರು ಹೇಳ್ತಾ ಇದ್ದಿದ್ದನ್ನು ನೋಡಿ ಎಲ್ ಓಡ್‌ಹೋಗ್ ಬಿಟ್ರಪ್ಪಾ ಇವ್ರು ಅಂತ ಹುಡುಕ್ಯಂಡ್ ಬಂದ್ರೆ ನೀವು ಬ್ರಹ್ಮಚರ್ಯಾದಿಂದ ಗೃಹಸ್ಥರಾಗಾಕ್ ಹತ್ತೀರಲ್ರೀ ಮತ್ತ!

ಪುಸ್ತಕ ಬಿಡುಗಡೆ ಮದುವೆ ಹಿಂದಿನ ಮಾಡೋ ಮಹಾಭೂಪ್ರೇ ಸೈ ನೀವು ಅಂತ ನಂಜ ಒಟಗುಟ್ಕ್ಯಂತಿದ್ದ ನೋಡ್ರಿ!

ಏನಾರಾ ಮಾಡ್ಕ್ಯಳ್ಳಿ, ಪ್ರೇಮಕವನಗಳನ್ನ ಬರೆಯೋದ್ ನಿಲ್ಲಿಸ್ದೇ ಇದ್ರೆ ಸಾಕು ಅನ್ನೋದು ತಿಮ್ಮಕ್ಕನ ಉವಾಚ!

ಅಭಿನಂದನೆಗಳು, ಡಬ್ಬಲ್ ಅಭಿನಂದನೆಗಳು :-)

Anonymous said...

Oi, achei teu blog pelo google tá bem interessante gostei desse post. Quando der dá uma passada pelo meu blog, é sobre camisetas personalizadas, mostra passo a passo como criar uma camiseta personalizada bem maneira. Até mais.

Anonymous said...

ಮದುವೆ ಸುಖವಾಗಿತ್ತೆಂದು ನಂಬಿರುವೆ.....

ನಿಮ್ಮಿಬ್ಬರ ಜೀವನ ಸಿಹಿಯಾಗಿರಲಿ ಎಂದು ಹಾರೈಸುತ್ತೇನೆ

Anonymous said...

ಪಾತರಗಿತ್ತಿ ಎಲ್ಲಿ? ಹುಡುಕಬೇಕು.

ಶ್ರೀನಿಧಿ.ಡಿ.ಎಸ್ said...

ಹೋಯ್ ಶಿವ್,

ಮಧು ಚಂದ್ರ ಇನ್ನು ಮುಗ್ದಿಲ್ವಾ? ಹಾನ್, ಪಾತರಗಿತ್ತಿ ಪಕ್ಕದ ಓದುಗರೇ- ನಾನು, ಸುಶ್ರುತ ಮತ್ತೆ ಮಹಾಂತೇಶ್ ಈ ಮೂರು ಜನ ಶಿವ ಅವರ ಮದುವೆ ರಿಸೆಪ್ಶೆನ್ ಗೆ ಹೋಗಿ ಬಂದಿದ್ದೇವೆ. ಹೇಳೋಕೆ ಮರೆತು ಹೋಗಿತ್ತು!

ಹುಡುಗಿ ನೋಡೋ ಕುತೂಹಲ ಇತ್ತು ನೋಡಿ:)

Anonymous said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

Anveshi said...

ಶ್ರೀನಿಧಿ ಅವರೆ,

ನಿಮ್ಮ ಕಾಳಜಿ ನಮಗೂ ಅರ್ಥವಾಗಿದೆ. ಪಾತರಗಿತ್ತಿ ಮದುವೆಯಾಗಿದೆ. ಅದರ ರಿಸೆಪ್ಷನ್‌ನಲ್ಲಿ ನೀವು ಕೂಡ ಹುಡುಗಿ ನೋಡೋಕೆ ಹೋಗಿದ್ದೀರಿ ಎಂಬ ಸತ್ಯಾಂಶವನ್ನು ಬಯಲುಪಡಿಸಿದ್ದೀರಿ. ಸುಶ್ರುತ ಮತ್ತು ಮಹಾಂತೇಶರೂ ಹುಡುಗಿ ನೋಡೋಕೆ ನಿಮ್ಮೊಂದಿಗಿದ್ದರರಲ್ಲವೇ? ಹುಡುಗಿ ನೋಡಿ ಆಯಿತೇ? ಹಾಗಾದರೆ ವರ್ಷದೊಳಗೆ ನಿಮ್ಮ ಮೂವರಿಂದಲೂ ಊಟ ನಿರೀಕ್ಷಿಸಬಹುದೇ?

ಓ ಪಾತರಗಿತ್ತಿ ಅವರೆ,

ತಕ್ಷಣ ಬನ್ನಿ, ನಿಮ್ಮಿಂದ ಪ್ರೇರಣೆ ಪಡೆದವರು ಇದೀಗ ಊಟ ಕೊಡಿಸಲು ಸಿದ್ಧತೆ ಮಾಡ್ತಾ ಇದ್ದಾರೆ... ಬೇಗ ಬನ್ನೀ.....