Thursday, August 09, 2007

ಜೋಡಿ ಹಕ್ಕಿ ಮಾತಾಡಿವೆ..

ಎಲ್ಲರಿಗೂ ನಮಸ್ಕಾರ !

'ಕಾಣದಂತೆ ಮಾಯವಾದನು ನಮ್ಮ ಶಿವ' ಅಂತಾ ನೀವು ಹಾಡು ಹೇಳೋಕೇ ಮುಂಚೆನೇ ನಿಮ್ಮ ಮುಂದೆ ಬಂದು ನಿಂತಿದೀನಿ !

ನೀವು ಶುಭ ಕೋರಿ ಕಳುಹಿಸಿದ ಮೇಲ್‍ಗಳು, ನೀವು ಪಾತರಗಿತ್ತಿಯಲ್ಲಿ ಬರೆದ ಕಾಮೆಂಟ್‍ಗಳು, ನನ್ನ ಸಂಭ್ರಮದಲ್ಲಿ ಬಂದು ಭಾಗವಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಒಲವಿನ ವಂದನೆಗಳು.ನಿಮ್ಮ ಪ್ರೀತಿಯ ಹಾರೈಕೆಗೆ, ನನ್ನ ಮತ್ತು ನನ್ನಾಕೆಯ ನಮನಗಳು.

ಕಳೆದ ಸಲ ಪಾತರಗಿತ್ತಿಯಲ್ಲಿ ಬರೆದಿದ್ದು ನಿಮ್ಮನ್ನು ನನ್ನ ವಿವಾಹಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ. ಆದಾದ ನಂತರ ಏನೇಲ್ಲಾ ಆಯ್ತು..

ಇಷ್ಟು ದಿವಸ ಕನಸು-ಕವನ-ಕನವರಿಕೆಗಳಲ್ಲಿ ಕಾಡುತಿದ್ದ ನನ್ನ ಹುಡುಗಿ ಕೊನೆಗೂ ನನ್ನ ವರಿಸಿದ್ದು ಅದೇ ಜೂನ್ ೨೪ ರಂದು. ಮದುವೆಯೆಂಬ ಆ ವಿಶಿಷ್ಟ ಅನುಭವ..ಸಂಬಂಧ, ಸಂಭ್ರಮ, ಸಲ್ಲಾಪ, ಸಡಗರಗಳ ಒಂದು ಹೊಸ ಲೋಕವದು.

ಇಷ್ಟು ದಿವಸ ಕೇವಲ ಪೋನು-ಮೇಲ್-ಕವನಗಳಲ್ಲಿ ಹರಿಯುತ್ತಿದ್ದ ಭಾವನಾ ಲಹರಿಗೆ , ಮನದಲ್ಲಿದ್ದವರು ಎದುರಿಗೆ ಬಂದಾಗ ಆದ ಸಂಭ್ರಮ...ಅವಿಸ್ಮರಣೀಯ. ಪ್ರೀತಿಯ ತೊರೆಯಲ್ಲಿ ಬೊಗಸೆಯಲ್ಲಿ ಕುಡಿದ ಅಮೃತವೂ ಅವಿಸ್ಮರಣೀಯ..

ಮದುವೆಯ ಹಿಂದಿನ ದಿವಸ ನನ್ನ ಹುಡುಗಿಯ ಶಿವಮೊಗ್ಗೆಯಲ್ಲಿ ನಡೆದಿತ್ತು ನನ್ನ ಪುಸ್ತಕ್ 'ಸ್ವೀಟ್ ಡ್ರೀಮ್ಸ್ ಅಂದ್ರೇನು !'ಬಿಡುಗಡೆ. ಅದಾಗಿ ಮರುದಿನವೇ ನನ್ನ ಜೀವನದ ಅತೀ ಮಧುರ ಸ್ವೀಟ್ ಡ್ರೀಮ್ ನನ್ನ ಭಾಳಸಂಗಾತಿಯಾಗಿದ್ದು....

ಅಲ್ಲಿ ಸ್ಪಲ್ಪ ಕಾಲ ಇದ್ದು ನಾವು ಮರಳಿದೆವು ದೂರದ ಅಮೇರಿಕೆಗೆ...

ಇಲ್ಲಿ ನಮ್ಮ ಪುಟ್ಟ ಗೂಡಿನಲ್ಲಿ ನಮ್ಮ ಬಾಳಪಯಣ ಸುಂದರವಾಗಿ ಸಾಗುತಿದೆ...

ಮತ್ತೆ ಸಿಗುವೇ..ಅಲ್ಲಿಯವರಿಗೆ ಪ್ರೀತಿಯಿರಲಿ

11 comments:

ranju said...

ಹಾಯ್ ಶಿವ್,
welcome back.

ಎಷ್ಟು ದಿನ ಆಯ್ತುರೀ ನಿಮ್ಮ ಬ್ಲಾಗ್ ಅಪ್ ಡೆಟ್ ಮಾಡದೆ?
ಅಂತು ಬಂದ್ರಲ್ಲ. ಪಾತರಗಿತ್ತಿ ಹಾರಿ ಹೋಯ್ತು ಆನ್ಕೊಂಡೆ.

ಮತ್ತೆ ಶುರು ಮಾಡಿ ನಿಮ್ಮ ಬ್ಲಾಗಿಂಗ್.

Shiv said...

ನಮಸ್ಕಾರ ರಂಜು,
ಹೇಗಿದೀರಾ !
ಸ್ಪಲ್ಪ ಬಿಜೀ ಇದ್ದೆ...ಬರೆಯೋದಿಕೆ ಆಗಿರಲಿಲ್ಲ..
ಇನ್ಮೇಲೆ ಬರೀತಾ ಇರ್ತೀನಿ..

Sreeharsha said...

ನಗುತ ನಗುತ ಬಾಳಿ ನೀವು ನೂರು ವರುಷ...
ಎ೦ದೂ ಹೀಗೆ ಇರಲೀ ಇರಲಿ, ಹರುಷ ಹರುಷ :-)

ಒಳ್ಳೇದಾಗ್ಲಿ

~ ಹರ್ಷ

mouna said...

naaneno neevu blog anno padane marthebiTTiri antha tiLididde! sadhya haage aaglilla!! :D

take care.

Decemebr Stud said...

ellO prithviraj chauhan Agi hOda huDuga ankoMDe :)

ibbarigU...svAgata....

Shiv said...

ಹರುಷ,
ಥ್ಯಾಂಕ್ಯು ಥ್ಯಾಂಕ್ಯು :)

ಮೌನ,
ಬ್ಲಾಗ್ ಅಂದ್ರೆ ಕೆ.ಆರ್.ಮಾರುಕಟ್ಟೆಯಲ್ಲಿ ಸಿಗುತ್ತಲ್ಲ..ಅದೇ ಅಲ್ವಾ :) ಅದನ್ನು ಹೇಗೆ ಮರಿಯೋಕೇ ಆಗುತ್ತೆ !

DS,
ಪೃಥ್ಚಿರಾಜ್ ಚೌಹಣ್ !
ಯಾಕೇ ಗುರುವೇ :)

ರಾಜೇಶ್ ನಾಯ್ಕ said...

ಮುಂದುವರಿಯಲಿ ಪಾತರಗಿತ್ತಿಯ ಹಾರಾಟ.

Satish said...

ಅಮೇರಿಕದಲ್ಲಿ ಎಲ್ಲಿ ಶಿವಾ...ಮೇಷ್ಟ್ರು, ನಂಜಾ, ತಿಮ್ಮಕ್ಕಾ ಎಲ್ರೂ ಕಾದ್‌ಕೊಂಡು ಕುಂತವರೆ, ನಮ್ಮನೇಗ್ ಬನ್ನಿ ಜರ್ಸೀನಲ್ಲಿ!

Shiv said...

ರಾಜೇಶ್,
ವಂದನೆಗಳು !

ಓ ಸತೀಶ್ ಅಣ್ಣಾ,
ನಾವ್ ಇಲ್ಲಿ ಲಾಸ್ ಎಂಜಿಲೀಸ್ ಕಣಣ್ಣೋ..
ನಂಜಾ,ತಿಮ್ಮಕ್ಕಾ,ಮೇಷ್ಟ್ರಿಗೆ ಕೇಳಿದೆ ಅಂತಾ ಹೇಳು

Karthik said...

ನಿಮ್ಮ ಮದುವೆಯ ಶುಭಾಶಯಗಳು( ಮಧುವೆ ಮಧುಚಂದ್ರ ಎಲ್ಲಾ ಆದ್ಮೇಲ್ ಹೇಳ್ತಾ ಇದೀನಿ)

ಬರೀತಾ ಇರಿ

Kiran said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.