ಮೊದಲ ದೀಪಾವಳಿಯಂತೆ
ಅತ್ತೆ ಮನೆಯಲ್ಲಿ ಹಬ್ಬವಂತೆ
ಒಂದೂ ಅರಿಯೆ ನಾ !
ಎಣ್ಣೆ ಮಜ್ಜನವಂತೆ
ನಂತರ ಶಾವಿಗೆ ಊಟವಂತೆ
ಒಂದೂ ಅರಿಯೆ ನಾ!
ಮರುದಿನ ಲಕ್ಷ್ಮಿಪೂಜೆಯಂತೆ
ಅಡುಗೆಮನೆಯಲ್ಲಿ ಹೋಳಿಗೆ ಜೋರಂತೆ
ಒಂದೂ ಅರಿಯೆ ನಾ!
ನಾದಿನಿಗೆ ಪಟಾಕಿ ಕೇಳುತ್ತಿದ್ದಳಂತೆ
ನಾನು ಕೊಡಿಸುತ್ತಿದ್ದೆನಂತೆ
ಒಂದೂ ಅರಿಯೆ ನಾ !
ಮನೆತುಂಬಾ ನನ್ನಾಕೆಯ ಓಡಾಟವಂತೆ
ಮನೆಮಂದಿಗೆಲ್ಲಾ ಸಂಭ್ರಮವಂತೆ
ಒಂದೂ ಅರಿಯೆ ನಾ !
ಮದುವೆಯಾಗಿ ತಿಂಗಳಿಗೆ
ಪರದೇಶಕ್ಕೆ ಹಾರಿದೆನಂತೆ
ಅದು ಹೇಗೆ ಅತ್ತೆ ಮನೆಯ
ಮೊದಲ ದೀಪಾವಳಿ ತಿಳಿಯುವದಂತೆ !?
16 comments:
ಪಾಪ ಶಿವು :)
ನಮಸ್ಕಾರ ತ್ರಿವೇಣಿಯವರಿಗೆ,
ಹೂಂ ..ಪಾಪದ ಕತೆ ಕಣ್ರೀ :)
"ಹೂಂ ..ಪಾಪದ ಕತೆ ಕಣ್ರೀ :)"
ಸದ್ಯ... `ಕತೆ'ಯಲ್ಲಿ `ತೆ'ಗೆ ಒತ್ತು ಬೀಳಲಿಲ್ಲ!!
ಹೊಸ ದೀಪಾವಳಿ ಅತ್ತೆ ಮನೆಯಲ್ಲಿ ಆಗಲಿಲ್ಲ, ಸರಿ. ನಿಮ್ಮ ಮನೆಯಲ್ಲಿ ನೀವು-ನೀವೇ ಹೇಗೆ ಆಚರಿಸಿದಿರಿ? ಏನ್ ಮಾಡಿದ್ರಿ? ಎಣ್ಣೆ ಸ್ನಾನ, ಹೋಳಿಗೆ ಊಟ, ಲಕ್ಷ್ಮೀ ಪೂಜೆ... ಏನೇನ್ ನಡೀತು?
ಮದ್ವೆ ಆದೋರೆ ಹೀಗ್ ಅತ್ತರೆ ಏಕಾಂಗಿಜೀವಿಗಳು ಏನ್ ಮಾಡ್ಬೇಕ್ ಶಿವು??
ಹೇಗಿದ್ದೀರಿ? ಮದುವೆಯ ನಂತರ ಬಂದಿಯಾದಿರಾ!!! :D
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಸುಪ್ತದೀಪ್ತಿಯವರೇ,
ನಮ್ಮ ದೀಪಾವಳಿ ಚೆನ್ನಾಗಿ ಇತ್ತು..
ಎಣ್ಣೆಸ್ನಾನ,ಲಕ್ಷ್ಮಿಪೂಜೆ,ಸಿಹಿಯೂಟ..ಎಲ್ಲಾ ಇತ್ತು
'ತೆ'ಗೆ ಒತ್ತು...ಹೀಹೀ
ಭಾಗವತರೇ,
ಅತ್ತೆಮನೆಯಲ್ಲಿ ಇದ್ದರೆ ಎನೇಲ್ಲಾ ನಡೀತಾ ಇತ್ತು ಅನ್ನೋದರ ಒಂದು ಕಲ್ಪನೆ ಅಷ್ಟೇ ..ಅಳೋದು ಇಲ್ಲವೇ ಇಲ್ಲಾ :)
ತವಿಶ್ರೀಗಳೇ,
ಚೆನ್ನಾಗಿದೀನಿ..ನೀವು ಹೇಗಿದೀರಿ?
ಬಂಧಿ :)
ಅಂತೂ ಈ ದೀಪಾವಳಿಗೆ ಪಾತರಗಿತ್ತಿ ಮರಳಿ ಬಂತಲ್ಲ.
ಜೋಡಿ ರೆಕ್ಕೆ ಬಂದಾಗಿನಿಂದ ಹಾರಿದ್ದೇ ಹಾರಿದ್ದು :-)
ಸದ್ಯ ಹೊಸ ಹೂವು(ಕವನ) ತಂದು ಇತರ ಲಾರ್ವಾಗಳಿಗೆ ಮತ್ತೆ ಮಾತಾಡಿಸಿದ್ದೀರಲ್ಲ !
MD,
ನಮಸ್ಕಾರ !
ಇಷ್ಟೊತ್ತಿಗೆ ಲಾರ್ವಾಗಳೆಲ್ಲಾ ಪಾತರಗಿತ್ತಿಗಳಾಗಿರಬೇಕಲ್ವಾ :)
ಬಂದ್ರಾ ಶಿವ್...
"ಸದ್ಯ... `ಕತೆ'ಯಲ್ಲಿ `ತೆ'ಗೆ ಒತ್ತು ಬೀಳಲಿಲ್ಲ"
ಒತ್ತು ಬಿದ್ದಾಗ ಲತ್ತೆ ದೊರೆಯುತ್ತೆ.ಇದಕ್ಕೆ ಅತ್ತೆ ಕಾರಣ ಆಗಿರಲಾರರು ಅಲ್ಲವೇ?
ಇರಲಿ, ನೀವು ನಾದಿನಿಗೆ ಪಟಾಕಿ ಕೊಡಿಸುತ್ತೇನಂತ ಪಟಾಕಿ ಬಿಟ್ಟೇ ದೀಪಾವಳಿ ಆಚರಿಸಿದ್ರಾ?
ಮಜಬೂತ್ತಾಗಿದೆ ಶಿವ್ ಅವ್ರೇ, ತೀರ ಅಪರೂಪಕ್ಕೆ ಒಮ್ಮೆ ಬ್ಲಾಗ್ನತ್ತ ಕಣ್ಣು ಹಾಯಿಸೋ ನಂಗೆ ನಿಮ್ಮ ಮದ್ವೆ ವಿಷ್ಯ ಗೊತ್ತಾಗ್ಲಿಲ್ಲ. Anyway, late wishes for your marriage and future life. ಮುಂದೆ ನನ್ ಮದ್ವೆ ನಡೆದಾಗ್ಲು ನೀವು ಲೇಟ್ ವಿಶ್ ಮಾಡದೆ ಮುಂಗಡ ವಿಶ್ ಮಾಡಿ ಅಂತ ಕೋರಿಕೊಳ್ತೀನಿ.
ಅಸತ್ಯಿಗಳೇ !
ಇಲ್ಲ ಇಲ್ಲಾ...ಇದಕ್ಕೂ ಅತ್ತೆಗೂ ಯಾವುದೇ ಸಂಬಂಧವಿಲ್ಲ :)
ಪಟಾಕಿ ಬಿಟ್ಟಿಲ್ಲ :)
ಸಾರಥಿಯವರೇ,
ಧನ್ಯವಾದಗಳು !
ಖಂಡಿತ ನಾವು ಸರಿಯಾದ ಸಮಯದಲ್ಲಿ ನಿಮಗೆ ವಿಶ್ ಮಾಡ್ತೀವಿ :)
chennaagide shiv :)
aMtu maRaLi baMdralla..madavevAgi blogisodanna maritibiTri aMdukoMdidde...
ಸ್ವರದವರೇ !
ಧನ್ಯವಾದಗಳು
ಮಹಾಂತೇಶ್,
ನಮಸ್ಕಾರ !
ಹೇಗಿದೀರಾ?
LOL......so many of us in the same boat,huh...Darn :)
ನಮಸ್ಕಾರ. ನಿಮ್ಮ ಬರಹಗಳೆಲ್ಲಾ ತುಂಬಾ ಇಷ್ಟವಾದವು. ಬರೆಯುತ್ತಿರಿ.
Post a Comment