Monday, January 22, 2024

ವಿರಾಜಮಾನ

ಎಂತಹ ದಿನಗಳು...

ಬೀಗದ ಬಾಗಿಲಿನ ಕತ್ತಲಲಿ

ದೂಳಿನ ಜೇಡರ ಬಲೆಯಲಿ


ಎಷ್ಟೊಂದು ದಿನಗಳು...


ಹೊರಗೆ ಘೋರ ಹೋರಾಟ

ಎಲ್ಲೆಲ್ಲೂ ಸಂಘರ್ಷ ನರಳಾಟ


ಎಲ್ಲಿ ಹೋಗಲಿ ಅಮ್ಮ?


ಜೋಪಡಿಯಾಯ್ತು ನನ್ನ ತಾಣ

ಹೃದಯವಾಯ್ತು ನಿಟ್ಟುಸಿರು ನಿತ್ರಾಣ


ಎಷ್ಟೊಂದು ದಿನಗಳು....


ಮುಂದುವರೆಯುವುದೇ ಮರಳುವ ನಿರೀಕ್ಷೆ 

ಮರೆತುಬಿಟ್ಟರೋ ನನ್ನ ಅಪೇಕ್ಷೆ


ಎನು ಮಾಡಲಿ ಅಮ್ಮ?


ಸೂರ್ಯವಂಶಿಗೆ ಬಂತೇ ಶುಭದಿನ

ನನಸಾಗುವುದೇ  ಸುದಿನ


ಎನು ಮಾಡಿದಿರಿ ಅಮ್ಮ !!


ಆಡಿ ಬೆಳೆದ ಜಾಗದಲಿ

ಆಗಮಿಸಿದೆ ಜನಿಸಿದ ಮಣ್ಣಿನಲಿ


೫೦೦ ವರ್ಷಗಳ ನಂತರ

ನೆಲೆಸುವೆ ಮನೆಯಲಿ ನಿರಂತರ


ಲಲ್ಲಾ ಎನ್ನುವ ಕರೆಯಲಿ

ಮರಳಿದೆ ಅಮ್ಮನ ತೋಳಿನಲಿ





4 comments:

Chandrika Kumar said...

Excellent 👌

ಕೆ.ಸಿ. ಗೀತ said...

ಶಿವು
ಅತ್ಯಂತ ನೋವು, ಸಂಕಟ, ಸಂಘರ್ಷಗಳ
ಹೋರಾಟಕ್ಕೆ ಸಂದ ಪ್ರತಿಫಲ
ನಂಬಲು ಅಸಾಧ್ಯ ಕನಸೇನೂ ಎನಿಸುತ್ತಿದೆ
ರಾಮಲಲ್ಲಾ ನಾ ಕಣ್ಣುಗಳಲ್ಲಿ ನೆಮ್ಮದಿಯ ನಿಟ್ಟುಸಿರು ಕಾಣುತ್ತಿದೆ ಕಾರಣಕರ್ತರಾದ ಎಲ್ಲರನ್ನೂ ನೆನಪಿಸಿಕೊಳ್ಳುವಂತಹ ನಿಮ್ಮ ಕವಿತೆ ಸುಂದರವಾಗಿ ಮೂಡಿ ಬಂದಿದೆ ಮಾತುಗಳು ಮುತ್ತಾಗಿವೆ
ಮುಗ್ದ ಲಲ್ಲಾನ ಮನದ ಮಾತು ನಿಮ್ಮ ಕವಿತೆಯಲ್ಲಿದೆ . ಎಲ್ಲರಲ್ಲೂ ನಿರಾಳ, ಎಲ್ಲೆಲ್ಲೂ ಬೆಳಕು, ಎಲ್ಲೆಲ್ಲೂ ಶಾಂತಿ ನೆಮ್ಮದಿ.


Anonymous said...

ಬಹಳ ಸೊಗಸಾದ ಪದ್ಯ. ನಿಜ ಅವನ ಬೇಗುದಿಗಳಿಗೆ ಕಾಲವೇ ತಾಯಿಯಂತೆ ಲಾಲಿಸಬೇಕಿತ್ತು. ಅದು ಇಂದು ಆಗಿದೆ. ರಾಮ ಮರಳಿದ್ದಾನೆ ಮನೆಗೆ.

sunaath said...

ರಾಮಲಲ್ಲಾನ ಭಕ್ತರ ಅಂತರಂಗವನ್ನು ಪ್ರತಿಫಲಿಸುತ್ತಿದೆ ನಿಮ್ಮ ಕವನ.