Saturday, January 06, 2007

ನನ್ನಾಕೆ

ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ

ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ

ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ

ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ

ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ

ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ

ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ


*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************

14 comments:

Unknown said...

ಬಾಸ್,
ಸಕ್ಕತ್ತಾಗಿದೆ ಕವನ.
"...ಸಾಲು ದೀಪ ಹೃದಯದಿ ಬೆಳಗಿದ್೦ತೆ" ನ೦ಗ್ ತು೦ಬಾ ಇಷ್ಟ ಆಯ್ತು ಈ ಸಾಲು.
ಇದು ನಿಮ್ಮಾಕೆಗೂ ಗೊತ್ತಿದೆಯೆ೦ದು ಭಾವಿಸುತ್ತೇನೆ.

ಹೊಸ ವರುಷದ ಹಾರ್ದಿಕ ಹಾರೈಕೆಗಳು.

~ಶ್ರೀ ಹರ್ಷ

Shiv said...

ಶ್ರೀಹರ್ಷ,
ವಂದನೆಗಳು !
ನನ್ನಾಕೆಗೆ 'ನನ್ನಾಕೆ' ಕವನದ ಎಲ್ಲವೂ ತುಂಬಾ ಇಷ್ಟ :)

ನಿಮಗೂ ಹೊಸ ವರುಷದ ಶುಭಾಶಯಗಳು!

ಅಂದಾಗೆ ನಿಮ್ಮ ಬ್ಲಾಗ್ ಲಿಂಕ್ ಮೇಲೆ ಕ್ಲಿಕಿಸಿದಾಗ ಯಾವುದೋ error message ಬರ್ತಾ ಇದೆ.ಎನು ಮಾಡಬೇಕೆಂದು ತಿಳಿಸಿ..

mouna said...

shiv,
neevu heLide haage, pratiyondu saalu sogasaagide, thanks for giving us a wonderful poem.

btw, congrats, nimma kavana prakaTA vaaduddakke. :)

Shiv said...

ಮೌನ,
ಧನ್ಯವಾದಗಳು !
ನಿಮಗೆ ಇಷ್ಟವಾದದ್ದು ಯಾವುದಾದರೂ ಸಾಲು ಇದೆಯಾ?

Sushrutha Dodderi said...

ಆಹಾ..! ತುಂಬಾ ಚೆನ್ನಾಗಿ ಬರೆದಿದ್ದೀರ. ಆಕಿ ನಿಜಕ್ಕೂ ಗ್ರೇಟ್ ಬಿಡ್ರೀ ಸರ್ರ...!

Anonymous said...

ನನ್ನ ಕನಸು-ನನಸುಗಳ ಶಿಲ್ಪಿ ಆಕೆ!

ನಿಮ್ಮಾಕೆಯ ಮೆಚ್ಚಿಸಲು ಇದಕ್ಕಿಂತ ಬೇರೆ ಸಾಲು ಬೇಕೇ?

Shiv said...

ಸುಶ್ರುತ,
ವಂದನೆಗಳು :)

ತ್ರಿವೇಣಿಯವರೇ,
ಗೊತ್ತಿಲ್ಲಾರೀ..ನೀವು ಇದೆನ್ನಲ್ಲಾ ಅನುಭವಿಸಿದವರು ಅವಾಗವಾಗ ನಮಗೆ ದಾರಿ ತೋರಿಸಬೇಕು :)

mouna said...

ee saalu 'nooru chandirara beLadingaLa raathriyanthe'!

Raghavendra D R said...

kavana thumba channagide Shiv! :)

adhu prakaTavaagirodhu innu santasadha vishaya. hrudayadindha bandha maathugaLu parinaama beeruvudhu kanDitha annodhikke idhu ondhu udaharaNe. :)

Shiv said...

ಮೌನ,
ಹೂ..ಬೆಳದಿಂಗಳ ಬಾಲೆ :)

ರಘು,
ನಿಮ್ಮ ಮೆಚ್ಚುನುಡಿಗೆ ವಂದನೆಗಳು ಮಿತ್ರ

bhadra said...

ವಾಹ್ ವಾಹ್ - ಬಹಳ ಚೆನ್ನಾಗಿದೆ. ನಿಮ್ಮ ಕವನದಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿದೆ.

ನಿಮ್ಮಾಕೆಯ ಪ್ರತಿಕ್ರಿಯೆ ಏನು?
ಹೀಗೆ ಹೇಳಿರಬಹುದೇ

ಉಡುಗೊರೆಯೊಂದ ತಂದ
ನನ್ನಯ ಮನದಾನಂದ
ಮನವನು ತಣಿಸಲು ಬಂದ
ಕೈ ಬಿಡು ನಾ ಬಿಡೆನೆಂದಾ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Shiv said...

ತವಿಶ್ರೀಗಳೇ,

ತುಂಬಾ ಸೊಗಸಾಗಿದೆ ನಿಮ್ಮ ಊಹೆ :)

ಧನ್ಯವಾದಗಳು !

Srik said...

Wonderful poem.

Ee Paataragittiya udyaanavanakke modalabarige baruttiddene, mathu illina rangaada vaatavaranakke maaru hogiddene.

Ee kavanakkagi dhanyavaadagaLu :-)

Shiv said...

srik,

ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ನಿಮ್ಮ ಮೆಚ್ಚುಗೆಗೆ ವಂದನೆಗಳು.