ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಂತೆ
ನನ್ನ ಜೀವನದಲಿ ಬಂದವಳು ನೀನು
ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು
ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು
ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು
ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು
ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು
ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು
ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ
14 comments:
ಶಿವ್ ಅವರೆ,
ನಿಮ್ಮ ಜೀವನ ಸಂಕ್ರಮಣ ಘಟ್ಟದಲ್ಲೇ ಇದೆ ಎಂಬುದು ಈ ಕವನದಿಂದ ವೇದ್ಯವಾಗುತ್ತಿದೆ.
ಪ್ರೇಮ ಸಂಕ್ರಮಣದ ಕವನ ಚೆನ್ನಾಗಿದೆ.
ಎಳ್ಳು ಬೆಲ್ಲ ಸವಿಯಿರಿ.
ಅಸತ್ಯಿಗಳೇ,
ಸಂಕ್ರಾಂತಿ ಶುಭಾಶಯಗಳು!
ನೀವು ಸಹ ಎಳ್ಳು-ಬೆಲ್ಲ ಸವಿಯಿರಿ..
ಕಲ್ಪನೆ ಬಹಳ ಚೆನ್ನಾಗಿದೆ. ಸಂಕ್ರಾಂತಿಯ ಪರಿಕರಗಳನ್ನು ನಿಮ್ಮಾಕೆಯೊಂದಿಗೆ ಹೋಲಿಸಿ ಚೆನ್ನಾಗಿ ಬಟ್ಟೆ ಹೊಲೆದಿದ್ದೀರಿ.
ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ
ಸಂ-ಕ್ರಮಣ ಬಹಳ ಬೇಗ ಆಗಲೆಂದು ಆ ದೇವನಲಿ ಬೇಡುವೆ.
ತವಿಶ್ರೀ,
ಧನ್ಯವಾದಗಳು !
ನಿಮ್ಮ ಹಾರೈಕೆ-ಆಶೀರ್ವಾದ ಹೀಗೆ ಇರಲಿ ಸದಾ
ಕವನ ಚೆನ್ನಾಗಿದೆ. ಅಂದ ಹಾಗೆ, ಯಾವಾಗ ಪ್ರೇಮ ಸಂಕ್ರಮಣ? ಎಳ್ಳು-ಬೆಲ್ಲದ ಹಬ್ಬ ಮುಗಿಯಿತು. ಬೇವು-ಬೆಲ್ಲದ ಹಬ್ಬದ ನಂತರವೇ?
ತ್ರಿವೇಣಿಯವರೇ,
ವಂದನೆಗಳು.
ಹೌದು ಬೇವು-ಬೆಲ್ಲದ ನಂತರ ಪ್ರೇಮ ಸಂಕ್ರಮಣ !
ನೀವು ಅವಳ ಪ್ರೀತಿಯಲ್ಲಿ ಪೂರ್ತಿ ಮುಳುಗಿರುವುದಂತೂ ಖಾತ್ರಿ! ಎಲ್ಲದನ್ನೂ ಆಕೆಗೇ link ಮಾಡುತ್ತೀರಾ! ಶುಭವಾಗಲಿ. ಸಂಕ್ರಾಂತಿಯ ಶುಭಾಷಯಗಳು.
ಸುಶ್ರುತ,
ನಿಜ..ಪ್ರೀತಿಯಲಿ ಯಾವಾಗಲೋ ಮುಳುಗಿದ್ದಾಗಿದೆ :)
ಎನು ಮಾಡಿದರೂ ನನ್ನ ಹುಡುಗಿ ನೆನಪು ಅನವರತ ಕಾಡ್ತ ಇರುತ್ತೆ.
ನಿಮಗೂ ಸಂಕ್ರಾಂತಿ ಶುಭಾಶಯಗಳು
banna baNNada gaaLi paTavannu akaashadalli nOduvuDu chanda! the sight is just amazing, with people screaming.
ಮೌನ,
ಗಾಳಿಪಟ ನೋಡೋದು ಒಂದು ಸೊಗಸಾದರೆ,ಅದನ್ನು ಬಿಡೋದು ಇನ್ನೊಂದು ಸೊಗಸು.ಹಲವಾರು ಪಟಗಳು ಒಟ್ಟಿಗೆ ಹಾರೋದು ನೋಡೋದು ಸುಂದರ ದೃಶ್ಯ.
ಏನ್ರೀ ಕವನದ್ ಮೇಲೆ ಕವನ ಬರೆದುಹಾಕ್ತಿದೀರ! too much!:)) ಚೆನ್ನಾಗಿದೆ,
"ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು"
ಈ ಸಾಲುಗಳಂತೂ ತುಂಬಾ ಇಷ್ಟ ಆದ್ವು... ತಮಿಳ್ ಸಿನೆಮಾ ಹಾಡೊಂದ್ರಲ್ಲಿ ಹೀಗೇ ಹುಡುಗೀನ ದಾವಣಿ ತೊಟ್ಟ ದೀಪಾವಳಿಗೆ ಹೋಲಿಸಿದ್ದಾರೆ...
cute one:)
ಓ ನಮಸ್ಕಾರ ಶ್ರೀ !
ಏನ್ರೀ ನಾಪತ್ತೆ ಆಗಿಬಿಟ್ಟಿದೀರಾ?
ವಂದನೆಗಳು !
ಅಂದಾಗೆ ಯಾವ ತಮಿಳು ಹಾಡುಬಗ್ಗೆ ನೀವು ಹೇಳ್ತಾ ಇರೋದು?
arey sakkth kavithe ri innu bariri
ಎನಿಗ್ಮಾ
ಧನ್ಯವಾದಗಳು !
Post a Comment