ಬಳೆಗಳಿಗೆ ಸಡಗರ
ಅವಳ ಕೈ ಹಿಡಿದಿರುವನೆಂದು
ಓಲೆಗಳಿಗೆ ಸಡಗರ
ಅವಳ ಕಿವಿ ಕಚ್ಚುವೆನೆಂದು
ಕುಂಕುಮಕ್ಕೆ ಸಡಗರ
ಅವಳ ಹಣೆ ಮುತ್ತಿಡುವೆನೆಂದು
ಮಲ್ಲಿಗೆಗೆ ಸಡಗರ
ಅವಳ ಮುಡಿಯಲಿ ಬೆರಳಾಡಿಸುವೆನೆಂದು
ಕನ್ನಡಿಗೆ ಸಡಗರ
ಅವಳ ಸೌಂದರ್ಯ ನೋಡುವೆನೆಂದು
ಸರಕ್ಕೆ ಸಡಗರ
ಎದೆ ಹತ್ತಿರ ಇರುವೆನೆಂದು
ವೇಣಿಗೆ ಸಡಗರ
ಅವಳ ಬೆನ್ನು ಸವರುವೆನೆಂದು
ಸೀರೆಗೆ ಸಡಗರ
ಅವಳ ನಡು ಬಳಸುವೆನೆಂದು
ದಿಂಬಿಗೆ ಸಡಗರ
ಅವಳ ಕೆನ್ನೆ ತಟ್ಟುವೆನೆಂದು
ಹೊದಿಕೆಗೆ ಸಡಗರ
ಅವಳ ಆಲಂಗಿಸಿ ಮಲಗುವೆನೆಂದು
ಕಾಲುಗಳಿಗೆ ಸಡಗರ
ಅವಳ ಗೆಜ್ಜೆನಾದ ಮಾಡುವೆನೆಂದು
ಕಂಠಕ್ಕೆ ಸಡಗರ
ಅವಳ ಮುದ್ದುಮಾತು ನುಡಿವೆನೆಂದು
ರೆಪ್ಪೆಗಳಿಗೆ ಸಡಗರ
ಅವಳ ಕಣ್ಣೋಟ ಬಚ್ಚಿಟ್ಟುಕೊಳ್ಳುವೆನೆಂದು
ತುಟಿಗಳಿಗೆ ಸಡಗರ
ಅವಳ ಜೇನು ತನ್ನಲ್ಲಿ ಇಹುದೆಂದು
ಹೃದಯಕ್ಕೆ ಸಡಗರ
ಅವಳ ಎದೆಬಡಿತ ತನ್ನಿಂದೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವಕ್ಕಿಂತ ಹೆಚ್ಚು ಸಡಗರ ಪಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವು ಸಡಗರ ಪಡುವ ಎಲ್ಲವನ್ನು ಮಾಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವಳ ಒಲವಿನ ನಲ್ಲನೆಂದು
32 comments:
ಮದುವೆಗೆ ಮುಂಚೆ ರಾಯರು ಸಕತ್ ಯೋಜನೆಗಳನ್ನೆಲ್ಲ ಹಾಕಿ ಇಲ್ಲಿ ಭಟ್ಟಿ ಇಳಿಸಿರೋ ಹಾಗಿದೆ.
ಏನ್ಕತೆ ಸ್ವಾಮಿ?
ಎನು ಯೋಜನೆ ಹಾಕಿಕೊಂಡರೆ ಎನು ಬಂತು ವೇಣು ..
ಯೋಜನೆಗಳ ನಡುವಲ್ಲಿ ಈ ಸಾಗರಗಳು ಇವೆ :)
"ಯೋಜನೆಗಳ ನಡುವಲ್ಲಿ 'ಯೋಜನಗಳ' ಸಾಗರವಿದೆ"- ನಿಜ. ಯೋಚನೆ-ಯೋಜನೆ-ಕಾರ್ಯ... ಇವು ಒಂದನ್ನೊಂದು ಹೊಂದಿಕೊಂಡು ಬರುವವು. ಮೊದಲ ಹಂತ ದಾಟಿದ್ದೀರಿ, ಎರಡನೆ ಹಂತದಲ್ಲಿದ್ದೀರಿ. ಮೂರನೇ ಹಂತ ಇನ್ನೇನು ಬಂದೇ ಬಿಡುತ್ತದೆ.... ಶುಭವಾಗಲಿ. ಎಲ್ಲ ಸಡಗರಗಳನ್ನೂ ಮೀರಿದ ಸಡಗರ ನಿಮ್ಮದಾಗಲಿ.
ಸುಪ್ತದೀಪ್ತಿಯವರೇ,
ಹಾಗಂತೀರಾ..ಹಾಗಾದರೆ ಈಗ ನಾನು ಸ್ಟೇಜ್ ೨ ನಲ್ಲಿ
ನಿಮ್ಮ ಶುಭಾಂಕ್ಷೆಗೆ ಧನ್ಯವಾದಗಳು !
ಪಾತರಗಿತ್ತಿ ಅಂತ ಬ್ಲಾಗ್ ಹೆಸರು ಇಟ್ಟಿಕೊಂಡಿದ್ದಕ್ಕೂ ಸಾರ್ಥಕ..ಒಳ್ಳೆದಾಗಲಿ :)
ಮದ್ವೆಗೆ ನಮ್ಮನ್ನೆಲ್ಲ ಕರಿಬೇಕ್ರಿ ಶಿವ್...ಭರ್ಜರಿ ಊಟ ಸಿಗುತ್ತೆ ಅಂತ ಕಾಯ್ತ ಇದ್ದೇನೆ
ಮನಸ್ವಿನಿಯವರೇ,
ಮದ್ವೆಗೆ ನಿಮ್ಮನ್ನು ಕರೆಯಲಿಲ್ಲ ಅಂದರೆ ಹೇಗೆ..
ಖಂಡಿತ ಖಂಡಿತ...
ಭರ್ಜರಿ ಊಟ ಮಾಡೋಕೆ ನೀವು ಭಾರತಕ್ಕೆ ಬರಬೇಕಾಗುತ್ತೆ..ರೆಡಿ ಇದೀರಾ
ಯಾವಾಗ ಮದುವೆ ಅಂತ ಹೇಳಿ, ಟಿಕೆಟ್ ಬುಕ್ ಮಾಡಬೇಕಲ್ವ?
ಶಿವ್,
ಸಡಗರದ ಸೆರಗಿನ ಹಿಂದಿರುವ 'ಪ್ರೀತಿ'ಯನ್ನು ಮೆಚ್ಚಬೇಕು.
>> ತುಟಿಗಳಿಗೆ ಸಡಗರ
ಅವಳ ಜೇನು ತನ್ನಲ್ಲಿ ಇಹುದೆಂದು
ಶಿವೂ, ನಿಜಕ್ಕೂ ಸಡಗರ.
ಗ್ರೇಟು ಕಣಮ್ಮಾ.. 'ನಮ್ ಶಿವು ಮದ್ವೆಗೆ ರಜೆ ಬೇಕು' ಅಂತ ಈಗಾಗ್ಲೇ ನಮ್ ಬಾಸಿಗೆ ಹೇಳಿಟ್ಟಿದೀನಿ. ಬೇಗ ಇನ್ವಿಟೇಶನ್ ಕಳಿಸಿ...
ee kavana nimma maduve hattira barthide antha thiListhade!! neevu kathuradinda kaaythiddiri houdu, aadre nammanu aa shubha muhurthakke aahvanisuvudu yavaaga?
namagu ee roga vannu hiDisiddiri, iddanu heLbeke? ;)
ಸುಪ್ತದೀಪ್ತಿ,
ಇಲ್ಲಿಂದಲೇ ಒಂದು ಎರ್-ಬಸ್ ಮಾಡೋಣಾ ಅಂತಾ..ನಿಮಗೆ ಓಕೆನಾ :)
ರಾಜೇಶ್,
ಧನ್ಯವಾದಗಳು !!
ಸುಶ್,
ತುಂಬಾ ಒಳ್ಳೆ ಕೆಲಸ ಮಾಡಿದೀಯಾ..ಮದುವೆಯಲ್ಲಿ ಸ್ಪಲ್ಪ ಓಡಾಡಿ ಕೆಲಸ ಮಾಡು..ಒಳ್ಳೆ ಹುಡುಗಿ ಸಿಕ್ತಾಳೆ :)
ಮೌನ,
ಆಹ್ವಾನ ಅತೀ ಶೀಘ್ರದಲ್ಲಿ ನಿಮ್ಮ ಮೇಲ್ ಬಾಕ್ಸ್ ಗೆ ಬರಲಿದೆ !
ನಿಮಗೂ ರೋಗ ಹಿಡಿಯಿತೇ..ಅಯ್ಯೋ ನನಗೆ ಗೊತ್ತಿರಲಿಲ್ಲ ಇದು ಸಂಕ್ರಾಮಿಕ ಅಂತಾ :)
Sadagara chennagide. All the best for Maduve(Khedda!!)
ಮಲ್ಲಿಕಾರ್ಜುನ್,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ!
ಹಿಹೀ..ನಿಮ್ಮ ಎಚ್ಚರಿಕೆಯುಕ್ತ ಹಾರೈಕೆಗೆ ವಂದನೆಗಳು!!
"ಇಲ್ಲಿಂದಲೇ ಒಂದು ಎರ್-ಬಸ್ ಮಾಡೋಣಾ ಅಂತಾ..ನಿಮಗೆ ಓಕೆನಾ :)"-- ಏನಪ್ಪಾ? ಗಾಳಿಗುದುರೆ ಏರಿಸ್ತೀರ? ಸರಿ ನಡೀರಿ, ಹೈ... ಹೈ...!
ಅವಳ ಬಗ್ಗೆ ಪದ್ಯ ಬರೆಯಲು....ಶಿವ್ ನಿಮಗೂ ಸಡಗರ...ಅಲ್ವೇ....
ಸುಪ್ತದೀಪ್ತಿ,
ಗಾಳಿಗುದುರೆ !
ಯಾವ ಕಲರ್ ಕುದುರೆ ಅಂತಾ ಹೇಳಬೇಕು :))
ಹಾಲಸ್ವಾಮಿಯವರೇ,
ಪಾತರಗಿತ್ತಿಗೆ ಸ್ವಾಗತ!
ಭೇಟಿ ನೀಡಿದ್ದಕ್ಕೆ ವಂದನೆಗಳು
ಇಂತಹ ಒಲವಿನ ನಲ್ಲನಿಗಾಗಿ ಕಾಯುವದೇ ನಲ್ಲೆಗೆ ಸಡಗರ
ಶಿವೂ, ಕೊನೆಯ ಸಾಲು ಬರೆಯುವದನ್ನೆ ಮರೆತು ಬಿಟ್ಟಿದ್ದೀರಲ್ಲ:
ಅವಳ ಪಾದತಾಡನದ ಸಡಗರ ಅವಳ ಪಾದರಕ್ಷೆಗಳಿಗೆ,............
--"ಯಾವ ಕಲರ್ ಕುದುರೆ ಅಂತಾ ಹೇಳಬೇಕು :))"--
ಇನ್ಯಾವ ಕಲರ್ ಇರತ್ತೆ ಗಾಳಿಗುದುರೆಗೆ, "ಒಲವಿನ ಬಣ್ಣ" ಬಿಟ್ಟು?
ಸುನಾಥ್,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ಹೌದು ಕೆಲವೊಂದು ಇಲ್ಲಿ ಹೇಳಿಲ್ಲ :)
ಸುಪ್ತದೀಪ್ತಿ,
ಬಣ್ಣ ನನ್ನ ಒಲವಿನ ಬಣ್ಣ :)
Hi Shiv, Visting after a looong time. Very beautiful peom
-Rekha
ಈಗ ತಾನೆ ಭಾರತದಿಂದ ಬಂದೆ.
ಏನಯ್ಯ ಇದು ಮತ್ತೆ ಏರ್ ಬಸ್ ನಲ್ಲಿ ಮದುವೆಗೆ ಕರೆದುಕೊಂಡು ಹೋಗ್ತೀನಿ ಅಂತಿದ್ಯಾ.
ಒಂದು ಚೂರು ಮುಂಚೇನೆ ಹೇಳಿದ್ರೆ, ಅಲ್ಲೇ ಇರ್ತಿದ್ದೆ :)
ಕವನದ ಭಾವ ಬಹಳ ಸುಂದರವಾಗಿದೆ, ಎಂದಿನಂತೆ.
ರೇಖಾ,
ಪಾತರಗಿತ್ತಿಗೆ ಮರಳಿ ಸ್ವಾಗತ !
ಧನ್ಯವಾದಗಳು
DS,
ಸ್ವಾಗತ !
ಎನು ಪರವಾಗಿಲ್ಲ..ಇನ್ನೊಂದು ಸರ್ತಿ ನನ್ನ ಜೊತೆ ಬನ್ನಿ...ಹೋಗೋಣಾ :)
ಶಿವ್,
ಕವಿತೆ ಚಂದವಿದೆ.. ಓದಿ ಸಡಗರ ನಮಗೆ..
ಅವಳಿಗಿನ್ನೆಷ್ಟೋ..!
ಅಥವಾ - ನಿನ್ನೆಡೆಗೆ ಬರುವಾಗ ಸಿಂಗರದ ಸಿರಿಯೇಕೆ..
ಸಡಗರದ ಮಾತುಗಳ ಬಿಂಕವೇಕೆ- ಅಂತ ಓಡಿಬಂದು ನಿಮ್ಮ ಒಲವಿನ ಹಾಡಿಗೆ ಮೋಹನ ರಾಗ ಸಂಯೋಜಿಸುತ್ತಾಳೇನೋ..!
ಆಹ್ಲಾದಕರ ಕವಿತೆ.
ಸಿಂಧು ಅವರೇ,
ನಿಮ್ಮ ಮೆಚ್ಚುಗೆಗೆ ವಂದನೆಗಳು.
ಸಡಗರ ತುಂಬಾ ಪಟ್ಟಳು..ಮೋಹನ ರಾಗ ಸಂಯೋಜನೆ ಕಾಯ್ತಾ ಇದೀನಿ
Great romantic literatures classification nalli nimma blog na kooDa serisabeku endhu nanna vote! :)
ರಘು,
ನಿಮ್ಮ ಮತಕ್ಕೆ ವಂದನೆಗಳು !
ಗ್ರೇಟ್ ಬಗ್ಗೆ ಗೊತ್ತಿಲ್ಲಾ..ಆದರೆ ರೊಮ್ಯಾಟಿಂಕ್ ಅಂತಾ ಒಪ್ಪಕೊಂಡಿದ್ದಾಳೆ :)
ಪಾತರಗಿತ್ತಿ ತುಂಬ ದಿನದಿಂದ ಮೌನವಾಗಿದೆಯಲ್ಲ. ಏನಾಯ್ತು?
ಜ.ಭಾಗವತರೇ.
ತುಂಬಾ ದಿನ ಆಗಿತ್ತು ತಮ್ಮ ದರ್ಶನ ಆಗಿ..
ಪಾತರಗಿತ್ತಿ ಮೌನ ಮುರಿದು ಹೊಸ ಬಣ್ಣ ಚೆಲ್ಲಿದೆ
nimma kavangannau odoke namge sadagara :)
ಎನಿಗ್ಮಾ,
ಧನ್ಯವಾದಗಳು ನನ್ನ ಸಡಗರವನ್ನು ಓದಿ ಸಡಗರ ಪಟ್ಟಿದ್ದಕ್ಕೆ !
shivu,
thumba shrungaramayavagide nimma kavana. Odi thumba kushi aaythu.
heege bareetha iri.
wow!
Anant
Post a Comment