Friday, July 07, 2006

ಸ್ವಾತಂತ್ರ್ಯ ದೇವತೆಯ ಮಡಿಲಲ್ಲಿ..

ಬರೆದು ಅದು ಯಾವ ಕಾಲ ಆಯಿತೋ ಎನೋ..

ನಾನು ಎಲ್ಲೋ ಕಾಣೆಯಾಗಿದೀನಿ ಅಂತಾ ತಿಳಕೊಂಡು ಕಂಪ್ಲೆಂಟ್ ಕೊಡೋಕೆ ಹೊರಟಿದ್ದರು ನನ್ನ ಬ್ಲಾಗ್ ಮಿತ್ರರು. ಅವರೆಲ್ಲ ಸೇರಿಕೊಂಡು 'ಕಾಣೆಯಾದವರು' ಪಟ್ಟಿಗೆ ನನ್ನ ಸೇರಿಸಿವುದಕ್ಕಿಂತ ಮುಂಚೆ ನಾನು ಬರೆಯೋದು ಒಳ್ಳೆಯದು!

ಎನಪ್ಪಾ ಆಯಿತು ಅಂದ್ರೆ..ಅಮೇರಿಕಾದ್ದು ಸ್ವಾತಂತ್ರ ದಿನಾಚರಣೆ ರಜೆಯ ಜೊತೆ ಇನ್ನೊಂದು ರಜೆ ಜಡಿದು , ನ್ಯೂಯಾರ್ಕ್ ಮತ್ತು ನಯಾಗರಕ್ಕೆ ಒಂದ್ನಾಲ್ಕು ದಿವಸ ಪ್ರವಾಸಕ್ಕೆ ಹೋಗಿದ್ದೆ. ಅದಕ್ಕೆ ಇಲ್ಲಿಂದ ಮಾಯಾ ಅಗಿದ್ದೆ. ಈಗ ಆ ನ್ಯೂಯಾರ್ಕ್ ಪ್ರವಾಸಗಥೆ ಜೊತೆ ನಿಮ್ಮ ಮುಂದೆ...

ಪ್ರವಾಸ ಹೋಗಿದೋಕ್ಕಿಂತ ಮುಂಚೆ ನನ್ನ ಜೊತೆ ಬಂದು ನನ್ನ ಸಹಿಸಿಕೊಂಡವರ ಬಗ್ಗೆ ಒಂದೆರಡು ಮಾತು ! ಫಿನಿಕ್ಸ್ ನಿಂದ ಸುಪ್ರೀತ್, ಡೆನವರ್ ನಿಂದ ಅರ್ಚನ, ಕುಪರ್ಟಿನೋ ದಿಂದ ದೀಪ್ತೀ ನನ್ನ ಸಹಪ್ರವಾಸಿಗರು. ಎಲ್ಲರೂ ಕನ್ನಡಿಗರು, ಬೆಂಗಳೂರಿನಲ್ಲಿದ್ದಾಗ ೨-೩ ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದವರು. ಇವರ ಜೊತೆ ಇನ್ನೊಬ್ಬ ಗೆಳತಿ ಪೊನ್ನಮ್ಮ.ಹಳೇ ಮಿತ್ರರು ಹೊಸ ಜಾಗದಲ್ಲಿ.

ಅವರವರ ಸ್ಥಳಗಳಿಂದ ವಿಮಾನವೇರಿ ನ್ಯೂಯಾರ್ಕ್ ಮುಟ್ಟಿದ್ದಾಯಿತು.ನಾನು ಮತ್ತು ಸುಪ್ರೀತ, ನ್ಯೂಯಾರ್ಕ್ ನಲ್ಲಿ ಕಾರ್ ಒಂದನ್ನು ಬಾಡಿಗೆಗೆ ತಗೆದುಕೊಂಡದ್ದೆ ಒಂದು ಸಾಹಸಗಥೆ !ಅದು ದೀರ್ಘ ವಾರಾಂತ್ಯವಾದ್ದರಿಂದ ಒಂದೇ ಒಂದು ಕಾರ್ ಸಹ ಇದ್ದಿಲ್ಲ. ಆ ಜಾನ್ ಕೆನಡಿ ಎರ್‍ಪೋರ್ಟ್ ನಲ್ಲಿ ಗಣಗಣ ತಿರುಗಿದ್ದು ಪ್ರಯೋಜನವಾಗಲಿಲ್ಲ.ಕೊನೆಗೆ ನನ್ನ ಲ್ಯಾಪ್‍ಟಾಪ್ ತೆಗೆದು ಗೂಗಲ್‍ನಲ್ಲಿ ಹತ್ತಿರದ ಕಾರ್ ರೆಂಟಲ್ ಹುಡುಕಿದಾಗ ಬೆಳಗಿನ ಜಾವ ! ಅಲ್ಲಿಗೆ ಹೋಗಿ ಕಾರ್ ತೆಗೆದುಕೊಳ್ಳುವಷ್ಟರಲ್ಲಿ ಹರೋಹರ. ಇನ್ನೊಂದು ಕಡೆ ಹೋಟೆಲ್ ಗೆ ತೆರಳಿದ ನಮ್ಮ ಉಳಿದ ಮಿತ್ರರದ್ದು ಇನ್ನೊಂದು ತಾಪತ್ರಯ. ಆ ಹೋಟೆಲ್ ಬೇಗ ಮರೆಯಬೇಕೇನ್ನುವಂತಿತ್ತು.

ಕೊನೆಗೂ ಬ್ಯಾಟರಿ ಪಾರ್ಕ್ ಎನ್ನುವ ಸ್ಥಳದಲ್ಲಿ ನಾವೆಲ್ಲ ಭೇಟಿಯಾದದ್ದು ಆಯಿತು. ಬ್ಯಾಟರಿ ಪಾರ್ಕ್ ನಿಂದ ದೋಣಿಯಲ್ಲಿ ನಮ್ಮ ಪ್ರಯಾಣ. ಎರ್‍ಪೋರ್ಟ್‍ ನಲ್ಲಿ ಇರುವಂತೆ ತೀವ್ರ ಶೋಧನೆ ನಂತರ ದೋಣಿ ಹತ್ತಲು ಅವಕಾಶ. ತೀರ ಬಿಟ್ಟು ದೋಣಿ ಮುಂದೆ ಹೋಗುತ್ತಿದ್ದಂತೆ ದೊರದಲ್ಲೆಲ್ಲೋ ಆಕೃತಿಯೊಂದು ಗೋಚರಿಸತೊಡಗಿತು. ಹತ್ತಿರ ಹೋಗುತ್ತಿದ್ದಂತೆ ಆ ಪ್ರತಿಮೆ ಸ್ಪಷ್ಟವಾಗಿ ಗೋಚರಿಸತೊಡಗಿತು. ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಆಕಾಶಕ್ಕೆ ಚಾಚಿದ ಕೈಯಲ್ಲಿ ದೀವಿಗೆ,ವಿಶಿಷ್ಟವಾದ ಮುಖ,ತಲೆಯ ಮೇಲೆ ಎಲೆಗಳ ಕಿರೀಟ.ಆದುವೇ 'ಸ್ವಾತಂತ್ರ ದೇವತೆಯ ಪ್ರತಿಮೆ' ಅಥವಾ 'Statue of Liberty'.

ಆಮೇರಿಕಾದ್ದು ಅಂತಾ ಒಂದು icon ಇದ್ದರೆ, ಅದುವೇ ಲಿಬರ್ಟಿ ಪ್ರತಿಮೆ. ಲಿಬರ್ಟಿ ಪ್ರತಿಮೆ ಇರುವ ದ್ವೀಪ ಮುಟ್ಟಿ, ಪ್ರತಿಮೆಯನ್ನು ಪ್ರವೇಶಿಸುವ ಮುನ್ನ ಇನ್ನೊಂದು ಸುತ್ತಿನ ಸಮಗ್ರ ಶೋಧನೆ ಆಯಿತು. ಸ್ವಾತಂತ್ರ್ಯದ ಸಂಕೇತವಾದ ಈ ಪ್ರತಿಮೆಗೆ ಇಷ್ಟು ಭದ್ರತೆಯೇ , ಇಷ್ಟೊಂದು ಅಸ್ವಾತಂತ್ರ್ಯವೇ ಅನ್ನುವ ಪ್ರಶ್ನೆ ಮನದಲ್ಲಿ ಹೊಕ್ಕಿದೇನೋ ನಿಜ.

ಪ್ರತಿಮೆಯನ್ನೇರಿ ಅದರ ಸುತ್ತ ಸುಳಿದು, ಅಲ್ಲಿನ ಪ್ರತಿಮೆಯ ಬಗ್ಗೆ ಇರುವ ವಸ್ತು ಸಂಗ್ರಹಾಲಯದಲ್ಲಿ ಓಡಾಡಿ, ಅದರ ಬಗ್ಗೆ ಇನ್ನಷ್ಟು ತಿಳಿದುಕೊಂಡಾಗ ಆ ಲಿಬರ್ಟಿ ಪ್ರತಿಮೆಯ ಬಗ್ಗೆ ಪ್ರೀತಿ ಹೆಚ್ಚಾಗತೊಡಗಿತು.ಪ್ರಾನ್ಸ್ ಆಮೇರಿಕಾಕ್ಕೆ ಕೊಟ್ಟ ಹುಟ್ಟು ಹಬ್ಬದ ಉಡುಗೊರೆ ಅದು. ದೇಶ ದೇಶಗಳು ಕಚ್ಚಾಡುವಾಗಿನ ಈಗೀನ ದಿನಗಳಲ್ಲಿ ಒಂದು ದೇಶ ಇನ್ನೊಂದು ಹೊಸ ದೇಶಕ್ಕೆ ಇಂತಹ ಭವ್ಯ ಕಾಣಿಕೆ ಕೊಟ್ಟಿದ್ದು..
ಪ್ರತಿಮೆಯನ್ನು ಇರೋ ಎಲ್ಲ ಕೋನಗಳಿಂದ ಕ್ಯಾಮರದಲ್ಲಿ ಸೆರೆಹಿಡಿದ ಮೇಲೂ ಇನ್ನೂ ಎನೋ ಉಳಿದಿದೆ ಅನ್ನುವಂತಿತ್ತು. ಅಲ್ಲಿ ಮನಪೂರ್ತಿ ತಿರುಗಿ ವಾಪಾಸ್ ದೋಣಿ ಹತ್ತಿ ಲಿಬರ್ಟಿ ಪ್ರತಿಮೆಗೆ ನಮಸ್ಕರಿಸಿ ಮರಳಿ ಬಂದಾಯಿತು.

ಯೋಜನೆ ಪ್ರಕಾರ ನಮ್ಮ ಮುಂದಿನ ಸ್ಥಳ ನ್ಯೂಯಾರ್ಕ್ ನಿಂದ ೪೫೦ ಮೈಲಿ ದೂರದ ಊರು ಭಾಫೆಲೋ. ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋದರೆ ೮-೯ ಗಂಟೆ ಪ್ರಯಾಣ.ಸರಿ, ಶುರುವಾಯಿತು ನಮ್ಮ ಡ್ರೈವಿಂಗ್. ಸುಪ್ರೀತ ನೂಯಾರ್ಕ್ ಬಿಡೋ ತನಕ ಓಡಿಸಿದ, ನಂತರ ನನ್ನ ಸರದಿ.

ಇಲ್ಲಿನ ಫ್ರೀ ವೇ ಗಳ ಬಗ್ಗೆ ಒಂದು ಮಾತು. ಇವು ಎಷ್ಟೊಂದು ಯೋಜಿತವಾಗಿ ರಚಿಸಲ್ಪಟ್ಟಿವೆ. ಒಂದೊಂದು ಫ್ರೀ ವೇ ನಲ್ಲೂ ೩ ಲೇನ್‍ಗಳು. ಎಲ್ಲಾ ಎಕ್ಸಿಟ್ ಗಳೂ ಬಲಬದಿಯಲ್ಲಿಯೇ ಇರುತ್ತವೆ.

ಮೊದಮೊದಲು ೬೦-೭೦ ಮೈಲಿ ವೇಗದಲ್ಲಿ ಓಡಿಸಿದ್ದಾಯಿತು. ನಂತರ ಅಲ್ಲಿ ಸಿಕ್ಕವು ನೋಡಿ ೪-೫ ಕಾರ್ ‍ಗಳು. ನಂತರ ಶುರುವಾಯಿತು ಅವರ ಜೊತೆ ಒಂದು ವೇಗದ ಹಬ್ಬ.ಕೊನೆ ಕೊನೆಗೆ ನಾನು ೯೦-೯೫ ಮೈಲಿ ಮುಟ್ಟಿದಾಯಿತು. ವೇಗ ಯಾವಾಗಲೂ ಆಪಾಯಕಾರಿ ಎಂದು ತಿಳಿದೇ ಅವಾಗವಾಗ ವೇಗ ತಗ್ಗಿಸಿ ೭೦-೮೦ ಮೈಲಿಯಲ್ಲಿ ಓಡಿಸಿದ್ದಾಯಿತು ! ಒಂದು ನಾಲ್ಕು ಗಂಟೆಗಳ ನನ್ನ ಡ್ರೈವಿಂಗ್ ಬಳಿಕ ಸುಪ್ರೀತನ ಸರದಿ. ಸುಪ್ರೀತ ಇನ್ನೊಬ್ಬ ವೇಗದ ದೊರೆ !

ಈ ಮಧ್ಯೆ ಕಾರಿನಲ್ಲಿದ್ದ ನಮ್ಮ ಗೆಳತಿಯರು ಐ-ಪೋಡ್ ನಲ್ಲಿ request show ನಡೆಸುತ್ತಿದ್ದರು. ಆದೇಕೋ ದೀಪ್ತೀ ಮತ್ತು ಅರ್ಚನಾಗೆ ಅಮೃತಧಾರೆಯ 'ನೀ ಅಮೃತಧಾರೆ ಕೋಟಿ ಜನ್ಮ ಜತೆಗಾರ' ಬಹಳ ಇಷ್ಟವಾದಂತಿತ್ತು. ಬಹುತೇಕ ಕನ್ನಡ ಹಾಡುಗಳ ಮಧ್ಯೆ ಆಗಾಗ ಎಲ್ಲಾ ಭಾಷೆಯ ಹಾಡುಗಳು ಬಂದು ಹೋದವು.

ಕೊನೆಗೆ ಭಾಫೆಲೋ ಮುಟ್ಟಿದಾಗ ರಾತ್ರಿ ೧:೩೦. ಭಾಫೆಲೋ ಬೀದಿಯಲ್ಲಿ ಶನಿವಾರ ರಾತ್ರಿಯ ಪಾರ್ಟಿಗಳು ಜೋರಾಗಿ ನಡೆಯುತ್ತಿದ್ದವು. ಮನಸೇನೋ ಹೋಗೋಣ ಅಂತಿದ್ದರು, ದೇಹ ವಿಶ್ರಾಂತಿ ಬೇಡುತಿತ್ತು. ಕೊನೆಗೂ ದೇಹಕ್ಕೆ ಜಯವಾಗಿ ಹಾಸಿಗೆಗೆ ಬಿದ್ದದ್ದು ಒಂದೇ ನೆನಪು !

ಅಂದಾಗೆ ನಾವು ಭಾಫೆಲೋಗೆ ಯಾಕೆ ಹೋದೆವು ಅನ್ನುವ ಕುತೂಹಲವೇ ? ಅದು ನಯಾಗರ ಅನ್ನುವ ಆ ಮಹೋನ್ನತ ಜಲಪಾತಕ್ಕೆ ಹತ್ತಿರವಿರುವ ಊರು. ನಯಾಗರ ನೋಡಲು ಹೋದವರು ಈ ಊರಲ್ಲಿ ಉಳಿದುಕೊಳ್ಳೋದು.

ಮುಂದಿನ ಭಾಗದಲ್ಲಿ ......ನಯಾಗರದ ಜಲಸಿರಿ

17 comments:

Anveshi said...

ಶ್ಯೂ.... ಅವರೆ,
ನೀವು ಕೆನಡಿ ಏರ್ ಪೋರ್ಟಿನಲ್ಲಿ ಕೇಳದೆ ನಡಿ ಅಂತ ಸ್ವರ ಕೇಳಿಬಂದ ತಕ್ಷಣ ಬಫೆಲೋದ ಹಿಂದೆ ಓಡಿದ್ದೇಕೆ ಅಂತ ಗೊತ್ತಾಗಿಲ್ಲ. !

Shiv said...

ಅಸತ್ಯಿಗಳೇ,
ಕೆನಡಿ ಎರ್ ಪೋರ್ಟಿನಲ್ಲಿ ಎನೂ ಸಿಗದಿದ್ದಾಗ ಕಾರು ಹುಡುಕಿಕೊಂಡು ಬೇರೇಡೆ ಹೊರಟ್ಟಿದ್ದು.

ಇನ್ನು ಬಫೆಲೋ ನಾನು ಬ್ಲಾಗ್ ನಲ್ಲಿ ಹೇಳಿದ ಹಾಗೆ ನಯಾಗರ ದರ್ಶನಕ್ಕೆ ಹೋಗಿದ್ದು !

mouna said...

ri.....nimage swalpa hottinalli...ee bhumi saakodilla... yeke....becoz' u would have toured the enitre universe...aadadamele...yenu...nasawould have to invent something new for space travellers....u know cheap rockets...where it can transport enthusiastic people....adu saldu barutte anisutte!!!

Shiv said...

ಮೌನ,
ನಾಸಾದವರ ಚೀಪ್ ರಾಕೆಟ್ಸ್ ಗೆ ಟಿಕೇಟ್ ಎಲ್ಲಿ ಸಿಗುತ್ತೆ :)
ನಾನು ರೆಡಿ ಬಾಹ್ಯಕಾಶಯಾನ ಮಾಡೋಕೆ !

ಅಷ್ಟೇನೂ ತಿರುಗಿಲ್ಲ..ಇನ್ನೂ ತುಂಬಾ ಇವೆ ಜಾಗಗಳು..
So many places so small life

bhadra said...

ವಾಹ್! ಚಿತ್ರಗಳ ಜೊತೆಗೆ ಲೇಖನ - ತುಂಬಾ ಚೆನ್ನಾಗಿ ಮೂಡಿದೆ. ಇಂಗ್ಲೀಷಿನಲ್ಲಿ ಓದಿದ ಮುಂದಿನ ಭಾಗ ಕನ್ನಡದಲ್ಲಿ. ನಾನೂ ನಿಮ್ಮೊಂದಿಗೆ ಇರಬೇಕಿತ್ತು ಅಂತ ಮತ್ತೆ ಮತ್ತೆ ಅನ್ನಿಸ್ತಿದೆ.

ನಿಮಗೆ ತಿಳಿಸದೆಯೇ ಕೆಲವು ಚಿತ್ರಗಳನ್ನು ನನ್ನಲ್ಲಿ ಉಳಿಸಿಕೊಂಡಿರುವೆ. ಪರವಾಗಿಲ್ಲವೇ? (ಪರವಾಗಿಲ್ಲ - ಏಕೆಂದರೆ ನನ್ನ ಸ್ನೇಹಿತರೊಬ್ಬರು ಹೇಳ್ತಿದ್ರು, ನಮ್ಮಲ್ಲಿರುವವರೆಗೆ ಅದು ನಮ್ಮ ಸ್ವತ್ತು, ಇತರರಿಗೆ ತೋರಿಸಿದೊಡನೆಯೇ ಅದು ಲೋಕದ ಸ್ವತ್ತು - lol).

ಮುಂದಿನ ಭಾಗಕ್ಕೆ ಎದುರು ನೋಡುತ್ತಿರುವೆ.

Mahantesh said...

Shiv,
!! neevu Bal chalo baritiri(tumba chennagi baritira saar)....Shiale tumba chennagi ide...tumba dingale adru parawag illa... worth to wait anta helbahud...Nayagar siri ge ellaru kayata idare ansutte...

Anonymous said...

ಪ್ರವಾಸ ಕಥೆ ತುಂಬ ಚೆನ್ನಾಗಿ ಬರಿತೀರಿ!

Shiv said...

ತವಿಶ್ರೀಗಳೇ,
ನೀವು ಮಾಡಿಕೊಂಡು ಒಮ್ಮೆ ಈ ಕಡೆ ಬನ್ನಿ,ಮತ್ತೆ ಒಂದು ಪ್ರವಾಸಕ್ಕೆ ಹೋಗೋಣ...ಎನೂ ತೊಂದರೆಯಿಲ್ಲ ಚಿತ್ರಗಳು ಇಷ್ಟವಾದವೇ..ಉಳಿಸಿಕೊಳ್ಳಿ..ಆದರೆ ನನ್ನ ರಾಯಲ್ಟಿ ಕೊಡಿ :)

ಮಹಂತೇಶ್,
ಬ್ಲಾಗ್‍ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು !
ಅಗ್ದಿ ಜಲ್ದಿ ಆ ನಯಾಗರದ್ದು ಬರೀತೀನ್ರೀ ಸಾರ್..

ಸಿಂಧು !!
ಕೊನೆಗೂ ಕನ್ನಡ ಫಾಂಟ್ ಸಿಕ್ತಾ..
ಪಾತರಗಿತ್ತಿಗೆ ನಿಮಗೆ ಸ್ವಾಗತ..

Anonymous said...

ಇಲ್ಲಾ ರೀ, fonts ಸಿಕ್ಕಿಲ್ಲಾ :( Public library ಇಂದಾ ಕನ್ನಡ ಓದುತ್ತಿದ್ದೀನೆ. ಬರೆಯಲು ಮಾತ್ರ ತೊಂದರೆ ಇಲ್ಲಾ, ನನ್ನ ಬರಹಾ fonts ಇದೆ.

Karthik CS said...

ಹಾಯ್ ಶಿವ್..

ಹೀಗೇ ಅಂತರ್ಜಾಲದಲ್ಲಿ ಕನ್ನಡಬ್ಲಾಗ್ ಗಳಲ್ಲಿ ವಿಹರಿಸುತ್ತಿದ್ದಾಗ ನಿಮ್ಮ ಬ್ಲಾಗ್ ಸಿಕ್ಕಿತು ... ಚೆನ್ನಾಗಿ ಮೂಡಿ ಬರ್ತಾ ಇದೆ.. ಹೀಗೇ ಬರೀತ ಇರಿ ..

Shiv said...

ಕಾರ್ತಿಕ್,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಮತ್ತು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು..

Vishwanath said...

Kennedy airport nalli "kelade nadi" endu keLiddakke Shiv avaru Bafelo hinde hogiddeke emdu Asatyanweshigalu tamma "Videshi bureu" moolaka tanikha varadi prakatisabahudu! (Suddiya hint kottiddakke nanagoo adaralli credit irali).

Shiv avare nimma mundina bhaaga begane prakatavaagali. Haageye Tavishri gala jote nanoo baruve!!!

Raghavendra D R said...

namaskara Shiv avare,

guri illadhe "internet" nalli sutthuthiruvaga, nimma blog na nodide. Kannadadalli nimma barevanige thumba channagidhe. Odhi thumba kushi aaythu. heege barithiri! :)

-Raghu

Shiv said...

ವಿಶ್ವನಾಥರೇ,
ಅಸತ್ಯಿಗಳ ವಿದೇಶಿ ಬ್ಯೂರೋದ ತನಿಖೆಯೇ !!
ಅಯ್ಯೋ ನನ್ನ ನಂಬಿ ಅದರಲ್ಲಿ ತನಿಖಿಸಲು ಎನೂ ಇಲ್ಲ..

ನೀವು ಸಹ ಧಾರಾಳವಾಗಿ ತವಿಶ್ರೀಗಳ ಜೊತೆ ಬನ್ನಿ..
ನಿಮ್ಮ ಹಾದಿ ನೋಡುತ್ತಿರುತ್ತೇನೆ.

Shiv said...

ರಘು,
ಪಾತರಗಿತ್ತಿಗೆ ಸ್ವಾಗತ!
ನಿಮಗೆ ಲೇಖನಗಳು ಇಷ್ಟವಾದದ್ದು ಕೇಳಿ ಸಂತಸವಾಯಿತು..

Phantom said...

ಪಾರ್ವತಿ ಪತಿಗಳೆ,

ನಾವು ಫ್ರೆಂಚರು ನಿಮಗೆ ಕೊಟ್ಟ ಬಳುವಳಿಯನು ಚೆನಗಿ ಕಾಪಾಡಿ ಕೋಂಡಿದ್ದಿರಿ. ಸಂತೋಶ. ನೀವು ಎಮ್ಮೆಗೆ ಹೋದದ್ದು ಗೊತ್ತಯ್ತು ಇಲ್ಲಿ. ಎಮ್ಮೆಯಲ್ಲಿ ಏನ್ ಏನ್ ಮಾಡಿದ್ರಿ ಅಂತ ಇವಗ ಓದ್ತಿನಿ.

ಭೂತ

Anonymous said...

This is very interesting site... film editing schools