Sunday, April 01, 2007

ಮಳೆ

ಆಕಾಶದಿ ತೇಲಿ ಬಂದಿವೆ
ಮಳೆ ಹೊತ್ತ ಮೋಡಗಳು
ಮೋಡ ಸುರಿಸೋ ಹನಿಗಳ
ಚುಂಬನಕೆ ತವಕದಿ
ಕಾದಿರುವಳು ಭುವಿ

ಇಲ್ಲಿ ಕಿಟಕಿಯಲಿ ನೋಡುತಾ
ಕಾಯುತಿಹೆವು ನಾವಿಬ್ಬರು
ಆಕಾಶದಿಂದ ಧರೆಗಿಳಿವ
ಮಳೆ ಹನಿಗಳು
ಭುವಿಯನು ಸ್ಪರ್ಶಿಸುವ ಕ್ಷಣಕೆ

ಕೊನೆಗೂ ಆಕಾಶನಿಗೆ
ಭುವಿಯನು ಕಾಡಿಸಿದ್ದು ಸಾಕೇನಿಸಿ
ಬಂದಿರುವನು ಭುವಿಯ ಸೇರಲು
ನಾವಿಬ್ಬರೂ ಓಡಿದ್ದೇವೆ
ಮನೆಯಿಂದ ಆ ಮಳೆಯಲಿ ನೆನೆಯಲು

ಆಕಾಶನಿಗೆ ಭುವಿಯನು ಎಷ್ಟು
ಮುತ್ತಿಟ್ಟರು ತೀರದ ದಾಹ
ಕೈಯಲಿ ಕೈ ಹಿಡಿದು
ನಡೆದಿಹೆವು ಮಳೆಯಲಿ
ನೆನೆದಿಹೆವು ನಮ್ಮ ಮೊದಲ ಮಳೆಯಲಿ

ನೆನೆದು ನಡೆದು ನಲಿದು
ಕುಣಿದು ಈಗ ತೆಕ್ಕೆಯಲಿ
ಸೇರಿವೆ ಆಕಾಶ ಭುವಿ
ನಡುಗುವ ಮೈಗಳಿಗೆ
ಬಿಸಿ ಅಪ್ಪುಗೆ ಹೊದಿಕೆ

ಮಳೆ ನಿಂತಾ ಹಾಗಿದೆ
ನಾವು ನಡೆದಿಹೆವು ಮನೆಯೊಳಗೆ
ಒದ್ದೆ ಬಟ್ಟೆ ಬದಲಿನಿ
ಬೆಚ್ಚನೆ ವಸ್ತ್ರ ಧರಿಸಿ
ಮತ್ತೆ ಕುಳಿತಿಹೆವು ಕಿಟಕಿಯಲಿ

ಹೊರಗೆ ಮಳೆ ನಿಂತರೂ
ಮನದಲಿ ದಟ್ಟವಾಗುತಿದೆ
ಬಯಕೆಯ ಮೋಡಗಳು
ಕಣ್ಣಿನಲಿ ಮಿಂಚುಗಳು
ಎದೆಯ ಡವಡವ ಗುಡುಗು

ಸ್ಪರ್ಶವೊಂದು ಸಾಕಿತ್ತು
ಬಯಕೆ ಮಳೆ ಸುರಿಯಲು
ಸುರಿಯುತಿದೆ ಮುಸಲಧಾರೆಯಾಗಿ
ಆ ಮಳೆಯಲೂ ತಾಪವೇರಿ
ಅರಳಿವೆ ಮೈ-ಮನಗಳು

ಒಳಗೆ ಸತತ ಸಾಗಿದೆ
ಒಲವು ಸುಖದ ನೃತ್ಯ
ಮತ್ತೆ ತೊಯ್ದು ಹೋಗಿದ್ದೆವೆ
ಹೊರಗೆ ಮತ್ತೆ ಶುರುವಾಗಿದೆ
ಮಳೆ-ಭುವಿಯ ನೃತ್ಯ

15 comments:

Sushrutha Dodderi said...

ಸೂಪರ್ ಬ್ರೋ. ರೋಮಾನ್ಸ್ ಅಂದ್ರೆ ರೋಮಾನ್ಸ್. ನೋ ಮೋರ್ ವರ್ಡ್ಸ್..

Anonymous said...

ಬ್ಲಾಗಿಗೆ ಚಿಟ್ಟೆ ಅಂತ ಹೆಸರಿಟ್ಟಿದ್ದಕ್ಕು ಸಾರ್ಥಕ.
(ಅಂದ ಹಾಗೆ ಈ ಸಲ ಮಳೆ ಕಮ್ಮಿ ಅಂತೆ)

VENU VINOD said...

ಅಂದಹಾಗೆ ಏನ್ ಸ್ವಾಮಿ, ಮಳೆಯಲ್ಲಿ ಒದ್ದೆಯಾಗಿ ಮಳೆ ನಿಂತ ಬಳಿಕ ಮತ್ತೆ ಮೋಡ ಮುಸುಕಿದ್ದು ಯಾಕೆ? ;-)
ಮುಂಗಾರು ಮಳೆಯ ಹಾಗೆ ಚೆನ್ನಾಗಿದೆ ಕಲ್ಪನೆ!

mouna said...

venu, mungaarine maLe.

shiv, mungaaru maLE stands above evrything. tampada maNNina suvasane, aa taNNane beesuva gaLi.... super!!

Shiv said...

ಸುಶ್ರುತ,
ಸೂಪರ್ ವಂದನೆಗಳು !!

ತಲೆಹರಟೆಯವರೇ,
ಮರಳಿ ಸ್ವಾಗತ
ಮಳೆ ಎಲ್ಲಿ ಕಮ್ಮಿ ಅಂತಾ ಹೇಳಬೇಕು.

ವೇಣು,
ಅದು ಬಿಟ್ಟು ಬಿಟ್ಟು ಬರೋ ಮಳೆ..
ಯಾವಾಗ ಶುರುವಾಗತ್ತೆ ಅಂತ ಗೊತ್ತೇ ಆಗೋಲ್ಲ

ಮೌನ,
ತಣ್ಣನೆ ಬೀಸುವ ಗಾಳಿ...
ಧನ್ಯವಾದಗಳು !

ಸುಪ್ತದೀಪ್ತಿ suptadeepti said...

ಮಳೆಯಲ್ಲಿ ನೆನೆಯುವ ಸೊಗಸು, ವಯಸ್ಸನ್ನು ಅವಲಂಬಿಸಿಲ್ಲವೋ, ಅಥವಾ ನನಗೆ ಮಾತ್ರ ಹಾಗೋ!? ಇತ್ತೀಚೆಗಷ್ಟೇ ಊರಲ್ಲಿ ಮಳೆಯಲ್ಲಿ ಟೆರೇಸ್ ಸ್ವಚ್ಛಮಾಡುವ ನೆಪ ಹೇಳಿ ಚೆನ್ನಾಗಿ ಓಡಾಡಿದ್ದೇನೆ. ಅದರ ಮಜಾನೇ ಮಜಾ. ಮತ್ತೆ ಶಾಲಾ ದಿನಗಳ, ಯೌವ್ವನದ ಹಸಿ-ಬಿಸಿ ಕಲ್ಪನೆಯ ದಿನಗಳ ನೆನಪು ಮನಸ್ಸನ್ನು ತುಂಬಾ ದಿನ ಬೆಚ್ಚಗಿಟ್ಟಿದ್ದವು.

Shiv said...

ಸುಪ್ತದೀಪ್ತಿಯವರೇ,
ಇಲ್ಲಾ ಮಳೆಯಲ್ಲಿ ನೆನೆಯುವ ಸೊಗಸು ಖಂಡಿತವಾಗಿಯೂ ವಯಸ್ಸನ್ನು ಅವಲಂಬಿಸಿಲ್ಲ.ಇನ್ನು ಶಾಲಾ ದಿನಗಳ ಮಳೆಯ ದಿನಗಳಿಗೆ ಅದರದೇ ಆದ ವಿಶಿಷ್ಟ ನೆನಪುಗಳು..

ಯೌವನದ ಹಸಿ-ಬಿಸಿ ಕಲ್ವನೆಯ ಮಳೆ..
ಎಲ್ಲವನ್ನೂ ಈ ಒಂದು ಸಾಲಿನಲ್ಲಿ ಹೇಳಿಬಿಟ್ಟಿದೀರಾ !

Anonymous said...

ಅಣ್ಣ,
ನಾನು ನಿಂ ಬ್ಲಾಗಿಗೆ ಮೊದಲನೆ ಬಾರಿ ಬಂದದ್ದೆ ನಿನ್ನೆ. ನಾನು ನೀವು ಬ್ಲಾಗ್ರೋಲ್ ಮಾಡಿರೊ ತಲೆಹರಟೆ ಅಲ್ಲ, ನಾನು ಬೇರೆ. ಎನೀವೇ, ಸ್ವಾಗತಕ್ಕೆ ಧನ್ಯವಾದಗಳು.
ಮಳೆ ಥಿಯೇಟರ್ಗಳಲ್ಲಿ ಆಗ್ಥ ಇದೆ....ಭೂಮಿ ಮೇಲೆ ಕಮ್ಮಿ, ಅದರಲ್ಲೂ ಕರ್ನಾಟಕದಲ್ಲಿ....
ಮಳೆ ಬರ್ದಿದ್ರೆ, ಗಿಡ ಬೆಳ್ಯಲ್ಲ, ಗಿಡ ಬೆಳೀದಿದ್ರೆ, ಹೂ ಬಿಡಲ್ಲ... ಪತರಗಿತ್ತಿಗಳಿಗೆ ಕಷ್ಟ ಕಣಣ್ಣ....

Shiv said...

ತಲೆಹರಟೆಯವರೇ,

ಕ್ಷಮಿಸಬೇಕು..ಬ್ಲಾಗ್ರೋಲ್‍ನಲ್ಲಿನ ತಲೆಹರಟೆ ಅನ್ಕೊಂಡಿದ್ದೆ.
ಪಾತರಗಿತ್ತಿಗೆ ಮೊದಲ ಭೇಟಿ ನೀಡಿದ್ದಕ್ಕೆ ವಂದನೆಗಳು !!

ನೀವು ಹೇಳಿದ್ದು ನಿಜ ಕಣಣ್ಣ..ಮಳೆ ಇಲ್ಲ..ಹೂ-ಪಾತರಗಿತ್ತಿ ವಿಷ್ಯ ಬಿಡಣ್ಣ..ಹೊಟ್ಟೆಗೆ ಕಾಳು ಇರಲ್ಲವಲ್ಲ ಅಣ್ಣಾ..

Satish said...

ಶಿವಣ್ಣಾ,

ವೆಬ್ ಸೈಟುಗಳಲ್ಲಿ ವಾಸನೆ ತುಂಬಿದ್ದರೆ ಹೇಗೆ ಅಂತ ಯೋಚಿಸ್ತಿದ್ದೆ, ಈಗ ಹೊಳೀತು!
ನಿಮ್ಮ 'ಮಳೆ' ಮಣ್ಣಿನ ವಾಸನೆ ತಂತು!

Shiv said...

ಸತೀಶ್,
ನಮಸ್ಕಾರ !
ನಿಮ್ಮ ಅಘ್ರಾಣದ ಮೆಚ್ಚುಗೆಗೆ ವಂದನೆಗಳು :)

Anveshi said...

ಇಷ್ಟೆಲ್ಲಾ ಅನುಭವ ನೀಡೋ ಮಳೆಯನ್ನೇ ಇತ್ತ ಕಳುಹಿಸಿಕೊಡಿ. :)

Shiv said...

ಅಸತ್ಯಿಗಳೇ,

ಎಲ್ಲಿ ಹೋಗುವಿರಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ...
ಅಂತಾ ಹೇಳಿ..ನಿಮಗೆ ಬೇಕಾದ ಮಳೆ ಬರುತ್ತೆ

ಸಿಂಧು sindhu said...

ಸ್ಪರ್ಶವೊಂದು ಸಾಕಿತ್ತು
ಬಯಕೆ ಮಳೆ ಸುರಿಯಲು

ಮಳೆಯ ನೆನಪೇ ಸಾಕು ಪದಧಾರೆ ಸುರಿಯಲು ಅನ್ಸುತ್ತೆ ಅಲ್ವಾ?

ನವಿರು ಪ್ರೇಮದ ಧಾರೆಯಲ್ಲಿ ಒದ್ದೆಯಾಗಿ ಮಿನುಗುವ ಕವಿತೆ. ಚೆನ್ನಾಗಿದೆ.

Shiv said...

ಸಿಂಧು ಅವರೇ,

ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ಹೌದು..ನೆನಸಿಕೊಂಡರೆ ಸಾಕು ಧೋ ಅಂತಾ ಸುರಿಯುತ್ತೆ..
ನಿಮ್ಮ ಮೆಚ್ಚುಗೆಗೆ ವಂದನೆಗಳು