Wednesday, March 14, 2007

ಯಾಕೋ ಗೊತ್ತಿಲ್ಲಾ..

ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ನೋಡಬೇಕೆಂದು
ಯಾಕೊ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ನಿನ್ನ ಧ್ವನಿ ಕೇಳಬೇಕೆಂದು
ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ಮುದ್ದಿಸಬೇಕೆಂದು
ಯಾಕೋ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ಎದೆಗೆ ಒರಗಿ ಮಲಗಬೇಕೆಂದು

ನಿನ್ನ ಒಂದು ನೋಟ
ನಿನ್ನ ಒಂದು ಮಾತು
ನಿನ್ನ ಒಂದು ಮುತ್ತು
ನಿನ್ನ ಒಂದು ಅಪ್ಪುಗೆ
ಸಾಕು ಜೀವವೇ ಈ ಜೀವಕ್ಕೆ
ನಾನು ಜೀವಿಸೋಕೆ
ಎಂದಿದೆ ಮನಸು

ಎನು ಹೇಳಲಿ ಗೆಳತಿ
ಈ ಹುಚ್ಚು ಮನಕ್ಕೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಾಗರಗಳ ಬಗ್ಗೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಮಯದ ಸಂಕೋಲೆಯ ಬಗ್ಗೆ

ಮನಸು ಎಷ್ಟು ಹೇಳಿದರೂ
ಮತ್ತೆ ನಿನ್ನ ಹಂಬಲಿಸುತ್ತಿದೆ
ಮತ್ತೆ ನಿನ್ನ ನೆನಯುತಿದೆ
ಹೇಗೆ ರಮಿಸಲಿ ಗೆಳತಿ
ನನ್ನ ಕಾಡುವ ನಿನ್ನ ಹಂಬಲಿಸುವ
ಈ ಹುಚ್ಚು ಮನಕ್ಕೆ

13 comments:

Phantom said...

ಭಾವನ ಲಹರಿ ಜೋರಾಗಿಯೇ ಇರೊ ಹಾಗಿದೆ. ವಿರಹ ಸುಖದಿಂದ ಸಂಗಸುಖ ಪ್ರಾಪ್ತವಾಗಲಿ ಎಂದು ಆಶಿಸುತ್ತೇನೆ.
ಇಂತಿ
ಭೂತ

Shiv said...

ಭೂತ,
ಬಹಳ ದಿವಸ ಆಗಿತ್ತು ತಾವು ದರ್ಶನ ನೀಡಿ..
ವಂದನೆಗಳು

ಸುಪ್ತದೀಪ್ತಿ suptadeepti said...

ಲಹರಿಗಳು ಹರಿಯುವುದೇ ಹಾಗೆ, ಯಾಕೆಂದು ಯಾರಿಗೆ ಗೊತ್ತು? ಒಳ್ಳೇ ತಂಪಾದ ಸಿಹಿ ನೀರಿನ ಝರಿ, ಹತ್ತಿರ ಬಂದವರಿಗೆಲ್ಲ ಎರಡು ಗುಟುಕು ನೀಡಿ ತಣ್ಣಗಾಗಿಸುತ್ತದೆ. ಹೀಗೇ ಸಾಗುತ್ತಿರಲಿ ನಿಮ್ಮ ಸಿಹಿನೀರಿನ ಪಯಣ.

Shiv said...

ಸುಪ್ತದೀಪ್ತಿಯವರೇ,

ಪಾತರಗಿತ್ತಿಗೆ ಸ್ವಾಗತ !
ಸಿಹಿ ನೀರಿನ ಝರಿಯಿಂದ ಬೊಗಸೆಯಲಿ ತುಂಬಿಕೊಂಡು ಕುಡಿಯುವದಕೆ ಯಾವಾಗಲಾದರೂ ಬನ್ನಿ..ಹಾಗೇ ಹರಿವ ಲಹರೀಯನು ಕರೆತನ್ನಿ

Sushrutha Dodderi said...

ಆಹಾ! ಹೌದಲ್ಲಾ, ಹೇಗೆ ಹೇಳುವುದು....? ರಚ್ಚೆ ಹಿಡಿದ ಮನಸ್ಸಿಗೆ ತಿಳಿಹೇಳುವುದು?

ವಿರಹ ಲಹರಿಯ ಹರಿವು ಜೋರಾಗಿದೆ. ಅಂತರ ಆದಷ್ಟು ಬೇಗ ಕಮ್ಮಿಯಾಗಲಿ ಅಂತ ಹಾರೈಸುತ್ತೇನೆ. :)

mouna said...

kelavu bari haage aagutte, iddanna bari mansannu kaaDuva vasthu aagirolla. kelavomme, manasu sari athava tappu antha heLidaru kooDa, naavu addannu palisudakke aaguvudilla(nanna anisike).

nimma vishaya dalli idu sihi nenapannu unTu maaDuvudaadare, oLLedu!

Shiv said...

ಸುಶ್ರುತ,
ಥ್ಯಾಂಕ್ಸ್ ಕಣೋ..

ಮೌನ,
ನೀವು ಹೇಳೋದು ನಿಜ..
ನನ್ನ ವಿಷಯದಲಿ ಅದು ಮಧುರ ಮಧುರ ನೆನಪುಗಳು

Mahantesh said...

virahada naMtar sukhave bere!!
innu kelave tingLu gurugale!!! :))

ನಮ್ಮನ್ನು ದೂರವಿಟ್ಟಿರುವ
ಈ ಸಾಗರಗಳ ಬಗ್ಗೆ
ಹೇಗೆ ತಿಳಿಹೇಳಲಿ tumba hiDisida saaLugaLu...

Shiv said...

ಮಹಾಂತೇಶ್,
ಅದೇ ಒಂದು ಭರವಸೆ ಮೇಲೆ ನಡೆದಿದೆ ಜೀವನ !
ವಂದನೆಗಳು

ಸುಪ್ತದೀಪ್ತಿ suptadeepti said...

ಶಿವು, ಹಠ ಮಾಡುತ್ತಿರುವ ಮನಸ್ಸಿಗೆ ಈ ಯುಗಾದಿಯಂದು ವಿರಹದ ಬೇವು, ನೆನಪಿನ ಬೆಲ್ಲ ತಿನ್ನಿಸಿ ಬಾಯಿ ಮುಚ್ಚಿಸಿ. ಹೊಸ ವರುಷ ಸುಖದಾಯಕವಾಗಿರಲಿ ಎಂಬ ಹಾರೈಕೆ ನಿಮಗೂ ನಿಮ್ಮ ಓದುಗರಿಗೂ...

Shiv said...

ಸುಪ್ತದೀಪ್ತಿಯವರೇ,

ವಿರಹದ ಬೇವು-ನೆನಪಿನ ಬೆಲ್ಲ...ಸೊಗಸಾಗಿದೆ
ನಿಮಗೂ ಸಹ ಯುಗಾದಿಯ ಶುಭಾಶಯಗಳು

ಸುಪ್ತದೀಪ್ತಿ suptadeepti said...

ನಿಮ್ಮ ಮನಸ್ಸು ವಿರಹದ ನೋವಿನಿಂದ ಇನ್ನೂ ಹೊರಗೆ ಬಂದಿಲ್ವೆ? ನೆನಪಿನ ಬೆಲ್ಲ ಸಾಕಾಗಿಲ್ಲ ಅನ್ಸತ್ತೆ. Bay Areaದಲ್ಲಿ ಎಲ್ಲಿದ್ದೀರಿ? ನನಗೊಂದು E-mail ಬರೀರಿ. ನಿಮಗೆ ಸಿಹಿ ತಿನ್ನಿಸೋಣ.

Shiv said...

ಸುಪ್ತದೀಪ್ತಿಯವರೇ,

ನಿಮಗೆ ಶೀಘ್ರದಲ್ಲೇ ಮೇಲ್ ಬರಲಿದೆ..