Sunday, February 22, 2009

ಡೆಲ್ಲಿ-6 ಎಂಬ Metaphor

ಜ್ವಲಂತ ಸಮಸ್ಯೆಗಳನ್ನು ಸಿನಿಮಾಗಳು ನೋಡುವ ಬಗೆ ಎರಡು.

೧. ಸಮಸ್ಯೆಗಳನ್ನು ಹಸಿಹಸಿಯಾಗಿ ಪ್ರದರ್ಶಿಸಿ ಮಾರಾಟದ ಸರಕಾಗಿಸುವುದು
೨. ಸಮಸ್ಯೆಗಳನ್ನು ಅತಿರಂಜಿತವಾಗಿಸದೆ,ಸುಪ್ತ-ಸೂಕ್ಷ್ಮವಾಗಿರಿಸಿ, ಅದಕ್ಕೊಂದು ಪರಿಹಾರ ತೋರಿಸುವುದು

ಸ್ಲಂ ಡಾಗ್‍ನಂತವು ಮೊದಲನೆಯ ಗುಂಪಿನಲ್ಲಿ ಸೇರುವಂತಹ ಚಿತ್ರಗಳು.

ಎರಡನೆಯ ಗುಂಪಿನಲ್ಲಿ ಸೇರುವ ಚಿತ್ರ ’ರಂಗ್ ದೇ ಬಸಂತಿ’.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ’ರಂಗ್ ದೇ’ಯಲ್ಲಿ ಭ್ರಷ್ಟಾಚಾರ, ದೇಶದ ’ಚಲ್ತಾ ಹೈ’ ಮನಸ್ಥಿತಿ, ಅದಕ್ಕೆ ಸೂಚಿಸಿದ ’ಡೈರೆಕ್ಟ್ ಆಕ್ಷ್ಯನ್’(Direct Action) ದೊಡ್ಡ ಸಂಚಲನವುಂಟು ಮಾಡಿದ್ದವು. ಅದು ಶುರು ಮಾಡಿದ ಚರ್ಚೆ-ಜಾಗೃತಿ ಇನ್ನೂ ಎಲ್ಲರ ನೆನಪಿನಲ್ಲಿದೆ.

’ರಂಗ್ ದೇ ಬಸಂತಿ’ ತರದ ಬಡಿದೆಬ್ಬಿಸುವ ಸಿನಿಮಾದ ನಂತರ ಮುಂದೇನು ಅನ್ನುವ ಪ್ರಶ್ನೆಗೆ ಉತ್ತರ ದೊರಕಿದಂತಿದೆ.
ರಾಕೇಶ್ ಹೊಸ ಸಿನಿಮಾ ’ಡೆಲ್ಲಿ-೬’, ಮೇಲೆ ಹೇಳಿದ ಎರಡನೆಯ ಗುಂಪಿಗೆ ಮತ್ತೊಂದು ಸೇರ್ಪಡೆ.

ರಂಗ್ ದೇಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದ ರಾಕೇಶ್, ’ಡೆಲ್ಲಿ’ಯಲ್ಲಿ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತಡವಿಕೊಂಡಿದ್ದಾರೆ. ಕೋಮುವಾದ, ಮಂದಿರ-ಮಸೀದಿಯ ಬಗ್ಗೆ ಪ್ರಮುಖವಾಗಿ ಹೇಳುತ್ತಾ, ಅಸ್ಪಶತೆ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಅದಕ್ಕೆ ಅನಿವಾಸಿ ಭಾರತೀಯರ ತೊಳಲಾಟ, ಅಶಕ್ತ ಮಹಿಳೆಯರ ಅಸಹಾಯಕತೆ, ಸ್ವಲ್ಪ ಭಗ್ನ ಪ್ರೇಮದ ಸ್ಪರ್ಶ ನೀಡಿದ್ದಾರೆ.

ರಂಗ್ ದೇ ತರನೇ ಇದರಲ್ಲೂ ಭಾರತವನ್ನು ಹೊರಗಿನವರ ಕಣ್ಣಿನಿಂದ ತೋರಿಸುವ ಶೈಲಿಯಿದೆ. ಆದರೆ ಡೆಲ್ಲಿಯ ತಾಕತ್ತಿರುವುದು ಅದರಲ್ಲಿ ಉಪಯೋಗಿಸಿದ ’ಮೆಟಾಫೆರ್’ಗಳಲ್ಲಿ ಮತ್ತು ಸೃಷ್ಟಿ ಮಾಡಿರುವ ಪಾತ್ರಗಳಲ್ಲಿ.

ತನಗೆ ಸಂಬಂಧಿಸಿದ ಆದರೂ ತಾನು ಹುಟ್ಟಿ-ಬೆಳಯದಿರುವ ದೇಶದಲ್ಲಿನ ರೋಷನ್ ಪಾತ್ರ ಕತೆಯ ಬಿಂದು. ಹಿಂದು-ಮುಸ್ಲಿಮ್-ಭಾರತೀಯ-ಅಮೇರಿಕನ್ ಹೀಗೆ ವಿಭಿನ್ನ ಎಳೆಗಳಲ್ಲಿ ತೊಳಲಾಡುವ ಪಾತ್ರ.

ಭಗ್ನ ಪ್ರೇಮಿ ಅಲಿ ಅಂಕಲ್, ಜಿಲೇಬಿ ಅಂಗಡಿಯ ಮಮ್ಡು, ಅಕ್ಕ-ಪಕ್ಕ ಮನೆಯ ಸಹೋದರರು, ವಿಧವೆ ತಂಗಿ, ಬಾಯಿ ಬಿಟ್ಟರೆ ಕಪಾಳಕ್ಕೆ ಬಾರಿಸುವ ಪೋಲಿಸ್ ಆಫೀಸರ್, ಕಸ ಹೆಕ್ಕುವ ಅಸೃಶ್ಯ ಹೆಂಗಸು, ಶನಿ ಬಾಬಾ, ಭಾರತದಲ್ಲಿ ಕಡೆಯ ದಿನಗಳನ್ನು ಕಳೆಯಬಯಸುವ ಅಜ್ಜಿ..ಹೀಗೆ ಅನೇಕ ವಿಶಿಷ್ಟ ಪಾತ್ರಗಳು, ಕತೆಯ ಓಟಕ್ಕೆ ಎಲ್ಲೂ ತಡೆ ತರುವುದಿಲ್ಲ.

ಈಡೀ ಚಿತ್ರದಲ್ಲಿ ಹಾಸುಹೊಕ್ಕಾಗಿರುವುದು ’ಮೆಟಾಫರ್’(Metaphor).

ಸಾಂಪ್ರದಾಯಿಕ ಹಿನ್ನಲೆಯ, ಹೊಸ ಕನಸುಗಳನ್ನು ಕಾಣುವ ’ಬಿಟ್ಟು’ ಎನ್ನುವ ಹುಡುಗಿಯ ಪಾತ್ರ. ಇದು ಒಂಥರ ಇಡೀ ಭಾರತದ ಪ್ರತಿನಿಧಿ.

ಹಾಗೆಯೇ ಎಲ್ಲರ ಮುಂದೆ ಕನ್ನಡಿ ಹಿಡಿದು ತಿರುಗುವ ಹುಚ್ಚ, ಎಲ್ಲಿಂದಲೋ ಬಂದು ಎಲ್ಲರ ಸ್ವಾಸ್ಥ್ಯ ಕೆಡಿಸುವ ಶನಿ ಬಾಬಾ, ಪಾಳು ಬಿದ್ದ ಮನೆ, ಮಸಕಲಿ ಅನ್ನುವ ಆ ರೆಕ್ಕೆ ಕಟ್ಟಿದ ಪಾರಿವಾಳ, ಸಂದರ್ಭಕ್ಕೆ ತಕ್ಕುದಾಗಿ ಉಪಯೋಗಿಸಿರುವ ರಾಮಲೀಲಾ ಸನ್ನಿವೇಶಗಳು.

ಎಲ್ಲಕ್ಕೂ ಕಳಶವಿಟ್ಟಂತೆ, ’ಕಾಲಾ ಬಂದರ್’ !

ಅದರೆ ತುಂಬಾ ಕಾಡುವ ಪಾತ್ರ ’ಗೋಬರ್’. ಪೆದ್ದನಾಗಿ-ಮುಗ್ಢವಾಗಿ ಮೂಡಿ ಬಂದಿರುವ ಈ ಪಾತ್ರದ ಬಗ್ಗೆ ಮತ್ತೆ ನಗಬೇಕೆನಿಸುವಾಗ, ಕೊನೆಗೆ ನಿಜವಾದ ಗೋಬರ್ ಯಾರು ಎನ್ನುವ ಪ್ರಶ್ನೆ ದುತ್ತನೆ ಎದುರಾಗುತ್ತೆ.

ಡೆಲ್ಲಿಯಲ್ಲಿ ಅನೇಕ ಕಡೆ ಪ್ರಭಾವಿ ದೃಶ್ಯಗಳಿವೆ..
ರಾಮಲೀಲಾದಲ್ಲಿ ಮುಸ್ಲಿಮ್ ಮಮ್ಡು, ರಾಮಲೀಲಾ ಮಂಡಳಿಯ ಬ್ಯಾಡ್ಜ್ ಧರಿಸಿ ಸಂಭ್ರಮದಿಂದ ಭಾಗವಹಿಸುವ ದೃಶ್ಯ ಬಂದು ಹೋಗುತ್ತೆ. ಮುಂದೆ ಅದೇ ಮಮ್ಡುವಿನ ಅಂಗಡಿಯಿಂದ ಹನುಮಾನ್ ಪೋಟೋವನ್ನು ಕಿತ್ತುಕೊಂಡು ಹೋಗುವ ಗಲಭೆಕೋರರು, ನಂತರ ಹತ್ತುವ ಮತಾಂಧತೆ, ಅದರ ಕಿಚ್ಚಿನ ಉರಿಯಲ್ಲಿ ನರಳುವ ಮಮ್ಡುವನ್ನು ನಿಯಂತ್ರಿಸಲು ರೋಷನ್ ಪಡುವ ಶ್ರಮ. ಒಂದು ಸರಳ ಮನಸ್ಸು ಮತಾಂಧತೆಗೆ ಹೊರಳುವುದನ್ನು ತೋರಿಸಿದ ಪರಿ ಅದ್ಭುತ!

ಹಾಗೇ ನ್ಯೂಯಾರ್ಕ್-ಡೆಲ್ಲಿಗಳೆರಡನ್ನೂ ಒಂದೆಡೆ ಒಟ್ಟಿಗೆ ಕಾಣುವ ಕನಸು. ನ್ಯೂಯಾರ್ಕ್ ಬೀದಿಗಳಲ್ಲಿ ಭಾರತದ ದಿನ ನಿತ್ಯದ ಜನ ಜೀವನದ ಕಲ್ಪನೆ ಸೊಗಸಾಗಿದೆ.

ಅಭಿನಯದ ದೃಷ್ಟಿಯಿಂದ ಎಲ್ಲಾ ಪಾತ್ರಗಳಲ್ಲಿ ಸಮತೂಕದ ಅಭಿನಯವಿದೆ. ಮಾತಿಗಿಂತ ಹಾವಭಾವಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನಿಸುತ್ತೆ. ರೆಹಮಾನ್ ಹಿನ್ನಲೆ ಸಂಗೀತ ಕತೆಯ ಇನ್ನೊಂದು ಪಾತ್ರವೇ ಆಗಿದೆ.

ರಂಗ್ ದೇ ತರನೇ ಇಲ್ಲೂ ರಾಕೇಶ್, ಭಾರತದ ಜ್ವಲಂತ ಸಮಸ್ಯೆಗಳ ಎಳೆಯೊಂದಿಗೆ ಚಿತ್ರ ಮಾಡಿದ್ದಾರೆ. ಆದರೆ ರಂಗ್ ದೇ ತರ ಇಲ್ಲಿ ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಇಲ್ಲಿ ಎಲ್ಲಾ ಮೆಟಾಪರ್‌ಗೆ ಬಿಡಲಾಗಿದೆ. ಹಾಗೆಯೇ ಹಿಂದಿನ ತರ ಸಮಸ್ಯೆಗಳಿಗೆ ಉತ್ತರವನ್ನು ಗನ್‍ನಿಂದ ಕೊಟ್ಟಿಲ್ಲ, ಬದಲಾಗಿ ಸಮಸ್ಯೆಗಳಿಗೆ ಉತ್ತರ ನಮ್ಮಲ್ಲೇ ಅಡಗಿದೆ ಎನ್ನುವ ಆಶಾವಾದವಿದೆ.

’ರಂಗ್ ದೇ ಬಸಂತಿ’ ಯೊಂದಿಗೆ ಹೋಲಿಸುವುದನ್ನು ಬಿಟ್ಟು, ಡೆಲ್ಲಿಯನ್ನು ನೋಡಿದರೆ ಅದು ವಿಭಿನ್ನವೆನಿಸಬಹುದು. ಆದರೆ ಆ ತರದ ’ಕಲ್ಟ್’ (Cult) ಸಿನಿಮಾಗಳ ನಂತರ ಅದರ ನಿರ್ದೇಶಕರಿಗೆ, ಹಿಂದಿನ ಚಿತ್ರದ ಭಾರ ಹೇಗೆ ಯಾವಾಗಲೂ ಅವರ ಮೇಲಿರುತ್ತೆ ಕೇಳಿ ನೋಡಿ. ಇವೆಲ್ಲದರ ಮಧ್ಯೆ ’ಡೆಲ್ಲಿ’ ಒಂದು ಉತ್ತಮ ಪ್ರಯತ್ನ.

13 comments:

Sree said...

nice review shiv, thanks:) nODteeni filmu!

Pramod said...

A different review..I should see this movie. :)

ಸುಪ್ತದೀಪ್ತಿ suptadeepti said...

ಇವತ್ತು ಇನ್ನೊಬ್ರು ಹೇಳಿದ್ರು ಡೆಲ್ಲಿ-೬ ಚೆನ್ನಾಗಿದೆ ಅಂತ. ನೋಡಬೇಕೆಸಿತ್ತು. ಆಗಲೇ ನಿಮ್ಮ ರಿವ್ಯೂ. ನೋಡಲೇಬೇಕು ಅನ್ನಿಸಿದೆ. ಥ್ಯಾಂಕ್ಸ್.

Shiv said...

ಶ್ರೀ,
ಧನ್ಯವಾದಗಳು !
ಫಿಲ್ಮ್ ನೋಡಿದ ಮೇಲೆ ಹೇಳಿ ಹೇಗಿತ್ತು ಅಂತಾ

Shiv said...

ಪ್ರಮೋದ್,
ಪಾತರಗಿತ್ತಿಗೆ ಸ್ವಾಗತ !
ನಿಮ್ಮ ಕಾಮೆಂಟಿಗೆ ವಂದನೆಗಳು

Shiv said...

ಸುಪ್ತದೀಪ್ತಿ,
ನೀವು ಸಹ ನೋಡಿದ ಮೇಲೆ ಕಾಮೆಂಟಿಸಿ.
ವಂದನೆಗಳು !

sunaath said...

ಈ ಸಿನೆಮಾದ canvass ದೊಡ್ಡದಿದ್ದಂತೆ ಕಾಣುತ್ತದೆ. ಇನ್ನೂ ನೋಡಲು ಸಿಕ್ಕಿಲ್ಲ. ಈಗ ನೋಡಲೇಬೇಕಾದ ಸಿನೆಮಾ ಅಂತ ಗೊತ್ತಾಯ್ತು.

Shiv said...

ಸುನಾಥ್ ಅವರೇ,
ಭೇಟಿ ನೀಡಿದ್ದಕ್ಕೆ ಧನ್ಯವಾದಗಳು !

ತೇಜಸ್ವಿನಿ ಹೆಗಡೆ said...

ಶಿವ್ ಅವರೆ,

ಈ ಚಿತ್ರವನ್ನು ನೋಡಬೇಕೆಂದು ಹಲವಷ್ಟು ದಿನಗಳಿಂದ ಕಾಯುತ್ತಿದ್ದೆ. ಆದರೆ ಕಲವರು ಚೆನ್ನಾಗಿಲ್ಲ ಎಂದರು. ಆದರೂ ಚಿತ್ರದ ಪ್ರೊಮೊ ನೋಡಿದಾಗ ನನಗೇನೋ ಉತ್ತಮ ಚಿತ್ರ ಎಂದೆನಿಸಿತು. ನಿಮ್ಮ ವಿಶ್ಲೇಷಣೆಯಿಂದಾಗಿ ನನ್ನ ನಿರ್ಧಾರವು ಗಟ್ಟಿಯಾಯಿತು. ಧನ್ಯವಾದಗಳು.

Anonymous said...

nimma reeview noDida mele chitra nOdalEbaau anta annistide...

Anonymous said...

ಟ್ರೈಲರ್ ನಲ್ಲೇ ಮನಸೆಳೆದ ಚಿತ್ರ. ನಿಮ್ಮ ಅನಿಸಿಕೆ ಓದಿದ ಮೇಲೆ ನೋಡಲೇ ಬೇಕೆನಿಸಿದೆ.

-ರಂಜಿತ್

ಸುಪ್ತದೀಪ್ತಿ suptadeepti said...

ಹೊಸ ವರುಷದ ಮೊದಲ ದಿನದಲ್ಲಿ ನಿಮಗೆಲ್ಲ ಶುಭಾಶಯಗಳು.
ವಿರೋಧಿ ಸಂವತ್ಸರವು ನಿಮ್ಮ ಮನೆ ಮನಗಳಲ್ಲಿ ಸದಾ ಹರುಷ ನಗುವನ್ನೇ ತುಂಬಿರಲಿ.

ರಾಜೇಶ್ ನಾಯ್ಕ said...

ಶಿವ್,

ತಮ್ಮ ಈಮೈಲ್ ವಿಳಾಸವನ್ನು ತಿಳಿಸಬಹುದಾ? ಇಲ್ಲಿಗೆ
r26n at yahoo dot co dot in ಮೈಲ್ ಮಾಡುವಿರಾ?