Saturday, July 10, 2010

ಸಂಖ್ಯೆ ೧೦ ಜರ್ಸಿ

ಎಲ್ಲಾ ಕ್ರೀಡೆಗಳಲ್ಲಿ ಇದ್ದಂತೆ ಪುಟ್ಬಾಲ್‍ನಲ್ಲೂ ಜರ್ಸಿಯ ಪಾತ್ರ ಮಹತ್ವದ್ದು. ಜರ್ಸಿಯ ಬಣ್ಣ- ವಿನ್ಯಾಸದಿಂದ ಅದು ಯಾವ ತಂಡದ್ದೆಂದು ಅರಿಯಲು ಹೆಚ್ಚು ಸಮಯ ಬೇಕಿಲ್ಲ. ಹಾಲೆಂಡಿನ ಕೇಸರಿ ಬಣ್ಣದ ಜರ್ಸಿ, ಬ್ರೆಜಿಲ್‍ನ ಹಳದಿ ಜರ್ಸಿ, ಮೆಕ್ಸಿಕೋದ ಹಸಿರು ಜರ್ಸಿ, ಅರ್ಜೆಂಟೇನಾದ ಆಕಾಶ ನೀಲಿ-ಬಿಳಿ ಪಟ್ಟೆ ಜರ್ಸಿ..ಹೀಗೆ ನೋಡಿದ ತಕ್ಷಣ ಯಾವ ದೇಶದೆಂದು ಗೊತ್ತಾಗುವ ಪ್ರಸಿದ್ಧ ಜರ್ಸಿಗಳು.

ಇವೆಲ್ಲಕ್ಕಿಂತಲೂ ಸುಪ್ರಸಿದ್ಧವಾದದ್ದು ನಂ.೧೦ ರ ಜರ್ಸಿ.

ತಂಡದ ಶ್ರೇಷ್ಠ ಆಟಗಾರನಿಗೆ ಆ ೧೦ನೇ ಸಂಖ್ಯೆಯ ಜರ್ಸಿ ಮೀಸಲು. ಈ ಆಟಗಾರರು ಉತ್ಕೃಷ್ಟ ಪುಟ್ಬಾಲ್ ಕಲೆವುಳ್ಳವರು, ಹಾಗೇ ತಂಡದದ ಆಟದ ವೇಗವನ್ನು ನಿಯಂತ್ರಿಸುವವರು. ಒಂದೇ ಮಾತಲ್ಲಿ ಹೇಳುವುದಾದರೆ - ಪ್ಲೇ ಮೇಕರ್.


ಸಂಖ್ಯೆ ೧೦ ಜರ್ಸಿಯ ಸಂಪ್ರದಾಯ ಯಾವಾಗ-ಎಲ್ಲಿ ಪ್ರಾರಂಭವಾಯಿತೋ ಗೊತ್ತಿಲ್ಲ. ಆದರೆ ಸಂಖ್ಯೆ ೧೦ ಜರ್ಸಿ ಧರಿಸಿ ಅದಕ್ಕೆ ಸಿಕ್ಕಾಪಟ್ಟೆ ಮಹತ್ವವನ್ನು ತಂದವನು ಪೀಲೆ. ಬ್ರೆಜಿಲ್‍ನ ಈ ದಂತಕತೆ ಬಗ್ಗೆ ಅರಿಯದವರು ತುಂಬಾ ಕಡಿಮೆ.

ಆದರೆ ಸಂಖ್ಯೆ ಎಲ್ಲರ ಜನಮನದಲ್ಲಿ ನೆಲಸುವಂತೆ ಮಾಡಿದವನು ಮರಡೋನ. ಅರ್ಜೇಂಟೇನಾದ ಈ ಮಹಾನ್ ಆಟಗಾರ ೧೦ರ ಜರ್ಸಿ ಧರಿಸಿ ಮೈದಾನಕ್ಕೆ ಇಳಿದರೆ ಅಭಿಮಾನಿಗಳಲ್ಲಿ ರೋಮಾಂಚನ.


ನಂತರದ ದಿನಗಳಲ್ಲಿ ಇಟಲಿಯಲ್ಲಿ ರಾಬರ್ಟೋ ಬ್ಯಾಗಿಯೋ, ಫ್ರಾನ್ಸ್‍ನಲ್ಲಿ ಜಿನಡೀನ್ ಜೀಡಾನ್, ಬ್ರೆಜಿಲ್‍ನಲ್ಲಿ ರಿವಾಲ್ಡೋ, ರೋನಾಲ್ಡೋ ೧೦ರ ಜರ್ಸಿ ಧರಿಸಿದವರು.

ಇತ್ತೀಚಿನ ದಿನಗಳಲ್ಲಿ ೧೦ರ ಜರ್ಸಿ ವಾರಸುದಾರರು ಹೊಸ ಪೀಳಿಗೆಯ ಶ್ರೇಷ್ಠ ಆಟಗಾರರು. ಈ ಸಲದ ವಿಶ್ವಕಪ್‍ನಲ್ಲಿ ನಂ.೧೦ ಧರಿಸಿದವರ ಪಟ್ಟಿ ನೋಡಿ.

ಅರ್ಜೆಂಟೇನಾದ ಮಾಯಾವಿ ಲಿಯಾನಾಲ್ ಮೆಸ್ಸಿ

ಇಂಗ್ಲೆಂಡ್‍ನ ವೇನ್ ರೂನಿ

ಬ್ರೆಜಿಲ್‍ನ ಕಾಕಾ

ಹಾಲೆಂಡ್‍ನ ವೆಸ್ಲೆ ಸಿನ್ಡಿಜರ್

ಸ್ಪೇನ್‍ನ ಪೆಬ್ರಿಗಸ್

ಹೀಗೆ ನಿಜಕ್ಕೂ ಬಹುತೇಕ ತಂಡಗಳಲ್ಲಿ ನಂ.೧೦ ಶ್ರೇಷ್ಠರಿಗೆ ಮೀಸಲಾಗಿದೆ.

ಈ ಬಾರಿಯ ವಿಶ್ವಕಪ್‍ನ ಇನ್ನೊಂದು ಸಂಗತಿಯೆಂದರೆ ತುಂಬಾ ನಿರೀಕ್ಷೆಯುಂಟು ಮಾಡಿದ್ದ ಅನೇಕ ನಂ.೧೦ ಆಟಗಾರರು, ಹೇಳಿಕೊಳ್ಳುವಂತಹ ಪಾತ್ರವಹಿಸದಿದ್ದದ್ದು.


ಮೆಸ್ಸಿ, ಮೆರಡೋನ ನಂತರ ಯಾರು ಎಂಬ ಪ್ರಶ್ನೆಗೆ ಆರ್ಜೆಂಟೇನಾದ ಉತ್ತರ. ಮರಡೋನನ ಶೈಲಿ ಹೋಲುವ ಆಟ, ಡ್ರಿಬ್ಲಿಂಗ್ ಮತ್ತು ಸುಂದರ ಪಾಸ್‍ಗಳು. ಆದರೆ ಅಂತಹ ಹೇಳಿಕೊಳ್ಳುವಂತಹ ಸಾಧನೆ ಬರಲೇ ಇಲ್ಲ. ಅರ್ಜೆಂಟೇನಾ ವಿಶ್ವಕಪ್‍ನಿಂದ ಹೊರಗೆ.

ಮತ್ತೊಬ್ಬ ಆಟಗಾರ ರೂನಿ, ಇಂಗ್ಲೆಂಡ್‍ ತಂಡದ ಮಿಂಚಿನ ಬಳ್ಳಿ ಈ ಸಲ ಮಿಂಚಲೇ ಇಲ್ಲ. ಇಂಗ್ಲೆಂಡ್ ಸಹ ವಿಶ್ವಕಪ್‍ನಿಂದ ಹೊರಕ್ಕೆ.

ಇದರ ಆಧಾರದ ಮೇಲೆ ಸಂಚಲಿಸುತ್ತಿರುವ ಹೊಸ ವಾದವೆಂದರೆ ನಂ.೧೦ರ ಶ್ರೇಷ್ಠನನ್ನು ನೆಚ್ಚಿಕೊಂಡ ತಂಡಗಳೆಲ್ಲಾ ಸೋಲು ಕಂಡಿವೆ. ಅದರ ಬದಲಿಗೆ ಯಾವುದೇ ಶ್ರೇಷ್ಠರಿಲ್ಲದ ಆದರೆ ಅತ್ಯುತ್ತಮ ಸಾಂಘಿಕ ಆಟ ನೀಡುವ ತಂಡಗಳು ಮುನ್ನಡೆಯುತ್ತಿವೆ. ಉದಾಹರಣೆಗೆ ಜರ್ಮನಿ.

ಎನೇ ಆಗಲಿ, ನಂ.೧೦ ಜರ್ಸಿ ಧರಿಸಿದವರಿಗಷ್ಟೇ ಗೊತ್ತು ಅದರ ಮಹಿಮೆ ಮತ್ತು ಭಾರ.

6 comments:

Anonymous said...

Do you have list of these players .. anywhere ?
Just curiosity

mouna said...

this world cup, i've been following the matches quite closely. the no. 10 jerseys have failed to score for their teams, this time.

long time, shiv...

sunaath said...

"ಧರಿಸಿದವರಿಗಷ್ಟೇ ಗೊತ್ತು ಅದರ.....ಭಾರ!" ಸೊಗಸಾದ ಮಾತು.

Shiv said...

ಬ್ಯಾಚ್,

ಪಾತರಗಿತ್ತಿಗೆ ಸ್ವಾಗತ !

ಬಹುತೇಕ ಸುಪ್ರಸಿದ್ದ ನಂ.೧೦ ಆಟಗಾರ ಹೆಸರುಗಳು ಉಲ್ಲೇಖಿಸಿದ್ದೇನೆ. ಇನ್ನೂ ಅನೇಕರಿದ್ದಾರೆ ಆದರೆ ಆ ತರದ ಪಟ್ಟಿ ಇಲ್ಲ ಅನಿಸುತ್ತೆ.

Shiv said...

ಮೌನ,

ಬಹುದಿನದ ನಂತರ ನಿಮ್ಮ ಭೇಟಿ.
ಮರಳಿ ಸ್ವಾಗತ.

ಈ ಸಲದ ವಿಶ್ವಕಪ್ ಬಹುತೇಕ ತಾರರಹಿತವೆನ್ನಬಹುದು !

Shiv said...

ಸುನಾಥ್ ಕಾಕಾ,

ಧನ್ಯವಾದಗಳು !
ವಿಶ್ವಕಪ್ ನೀವು ನೋಡಿದಿರಿ ಅಲ್ವಾ